“ಚುನಾವಣಾ ಕುರುಕ್ಷೇತ್ರ” 2018 – ಮಾಗಡಿ (ರಾಮನಗರ ಜಿಲ್ಲೆ) !!

ಮಾಗಡಿ ವಿಧಾನಸಭಾ ಕ್ಷೇತ್ರ:

ad


ಈಗ ನಾವು ಹೇಳ್ತಿರೋದು ಮಾಗಡಿ ವಿಧಾನಸಭಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಮಾಗಡಿ ಬಾಲಕೃಷ್ಣ ಅವ್ರು ಇಲ್ಲಿನ ಶಾಸಕರಾಗಿದ್ದಾರೆ. ಈಗಾಗಲೇ ರಾಜಕೀಯ ಬದಲಾವಣೆಗೆ ಸಾಕ್ಷಿಯಾಗಿರೋ ಈ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗೆಳು ಗರಿಗೆದರಿದೆ. ಹಾಗಿದ್ರೆ ಬನ್ನಿ ಕ್ಷೇತ್ರದಲ್ಲಿ ಯಾವ ರೀತಿಯ ಫೈಟ್ ಇದೆ…ಇಲ್ಲಿನ ಗ್ರೌಂಡ್ ರಿಯಾಲಿಟಿ ಏನು ನೋಡ್ಕೊಂಡು ಬರೋಣ.

ಮಾಗಡಿ ವಿಧಾನಸಭಾ ಕ್ಷೇತ್ರ. ರಾಮನಗರ ಜಿಲ್ಲೆಯ ಜಿದ್ದಾ ಜಿದ್ದಿನ ಕ್ಷೇತ್ರಗಳಲ್ಲಿ ಇದೂ ಒಂದು. ಮಾಗಡಿ ಅಂದ ತಕ್ಷಣ ನೆನಪಾಗೋದೇ ಬೆಂಗಳೂರು ನಿರ್ಮಾತೃ ನಾಡ ಪ್ರಭು ಕೆಂಪೇಗೌಡ್ರು. ಈ ಕ್ಷೇತ್ರದಲ್ಲಿ ಕೆಂಪೇಗೌಡ್ರು ಕಟ್ಟಿದ ಕೋಟೆ, ಅವ್ರು ನಿರ್ಮಿಸಿದ ಕೆರೆಗಳು, ಅವ್ರ ರಾಜ್ಯಭಾರದ ಕುರುಹುಗಳು ಸಿಗುತ್ತವೆ. ಈಗಲೂ ಇಲ್ಲಿನ ಜನ ಕೆಂಪೇಗೌಡ್ರನ್ನು ಪ್ರತಿದಿನ ನೆನಪಿಸಿಕೊಳ್ತಾರೆ.  ಅದೇ ರೀತಿ ಕೆಂಪೇಗೌಡ್ರ ಸಮಾಧಿ ಮಾಗಡಿ ಕ್ಷೇತ್ರದಲ್ಲಿದೆ. ಅದರ ಅಭಿವೃದ್ಧಿಗಾಗಿ ಪ್ರಾಧಿಕಾರದ ರಚನೆಯಾಗಿದ್ದು ಅಭಿವೃದ್ಧಿ ಕೆಲ್ಸ ನಡೀತಾ ಇದೆ. ಇನ್ನುಳಿದಂತೆ ವಿಶ್ವ ವಿಖ್ಯಾತಿಯನ್ನು ಪಡೆದಿರೋ ಕರ್ನಾಟಕದ ಏಕಶಿಲಾ ಬೆಟ್ಟ ಪ್ರವಾಸಿಗರ ತಾಣ ಸಾವನದುರ್ಗ, ಪ್ರಸಿದ್ಧಿ ಪಡೆದಿರೋ ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನ ಕೂಡಾ ಇಲ್ಲೇ ಇರೋದು.95 ಪರ್ಸೆಂಟ್ ಜನ ರೈತಾಪಿ ವರ್ಗದವರಾಗಿದ್ದು ರಾಗಿ ಪ್ರಮುಖ ಬೆಳೆ. ಆದ್ರೆ  ಇದೆಲ್ಲಕ್ಕಿಂತ ಹೆಚ್ಚಾಗಿ ಮಾಗಡಿ ಸದ್ದು ಮಾಡಿರೋದು, ಮಾಡ್ತಿರೋದು ರಾಜಕೀಯ ವಿಚಾರಕ್ಕೆ. ಮಾಗಡಿ ವಿಧಾನಸಭಾ ಕ್ಷೇತ್ರ ಜೆಡಿಎಸ್ ನ ಭದ್ರಕೋಟೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗಾಗಿನೇ ಸತತ ಮೂರು ಬಾರಿ ಕೂಡಾ ಜೆಡಿಎಸ್ ನಿಂದ ನಿಂತಿದ್ದ ಶಾಸಕ ಬಾಲಕೃಷ್ಣ ಅವ್ರು ಇಲ್ಲಿ ಗೆಲ್ತಾ ಬಂದಿದ್ದಾರೆ. ಆದ್ರೆ ಈ ಬಾರಿ ಇಲ್ಲಿ ಬಾರಿ ಬದಲಾವಣೆ ಆಗಿಬಿಟ್ಟಿದೆ. ಹಾಗಾಗಿ ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಹುಟ್ಟಿಸಿದ್ದು ಚುನಾವಣಾ ಕಾವು ದಿನದಿಂದ ದಿನಕ್ಕೆ ಇಲ್ಲಿ ಏರತೊಡಗಿದೆ. ಇಲ್ಲಿ ಸದ್ಯದ ಸ್ಥಿತಿ ಗತಿ ಬಗ್ಗೆ ಹೇಳೋಕು ಮೊದಲು 2013ರ ಮತಬರಹ ನೋಡೋಣ.

 

ಇದು 2013ರ ಮತಬರಹ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಹೆಚ್ ಸಿ ಬಾಲಕೃಷ್ಣ 74821 ಮತಗಳನ್ನು ಪಡೆದು ಗೆದ್ದು ಶಾಸಕರಾದ್ರು. ಅವ್ರಿಗೆ ಫೈಟ್ ಕೊಟ್ಟ ಕಾಂಗ್ರೆಸ್ ನ ಎ ಮಂಜುನಾಥ್ 60462 ಮತಗಳನ್ನು ಪಡೆದ್ರು.

ಅಂದ್ಹಾಗೇ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಸಾಕಷ್ಟು ಬಾರಿ  ಕಾಂಗ್ರೆಸ್ ಗೆದ್ದಿತ್ತು ನಿಜ. ಆದ್ರೆ ಯಾವಾಗ ಹೆಚ್ ಡಿ ಕುಮಾರಸ್ವಾಮಿ ಅವ್ರು ರಾಜಕೀಯ ಪ್ರವೇಶ ಮಾಡಿದ್ರೋ ಅಲ್ಲಿಂದೀಚೆಗೆ ಅವ್ರ ಹಿಡಿತದಲ್ಲಿ ಕ್ಷೇತ್ರ ಇದೆ. ಇಲ್ಲಿ ವ್ಯಕ್ತಿಗಿಂತ ಹೆಚ್ಚಾಗಿ ಪಕ್ಷ ನೋಡಿ ಜನ ಮತ ಹಾಕ್ತಾರೆ ಅಂತಾ ಇಲ್ಲಿವರೆಗಿನ ರಿಸಲ್ಟ್ ಹೇಳತ್ತೆ. ಆದ್ರೆ ಕುಮಾರ ಸ್ವಾಮಿ ಅವ್ರ ಜತೆಗೇ ಅವ್ರ ಬಹಳ ಪರಮಾಪ್ತನಂತೆ ಇದ್ದ ಹೆಚ್ ಸಿ ಬಾಲಕೃಷ್ಣ ಜೆಡಿಎಸ್ ನಿಂದ ಉಚ್ಛಾಟಿತರಾಗಿದ್ದಾರೆ. ಅದೇ ರೀತಿ ಕಳೆದ ಬಾರಿ ಬಾಲಕೃಷ್ಣಗೆ ಪ್ರಬಲ ಫೈಟ್ ಕೊಟ್ಟಿದ್ದ ಕಾಂಗ್ರೆಸ್ ನಲ್ಲಿದ್ದ ಎ ಮಂಜುನಾಥ್ ಜೆಡಿಎಸ್ ಗೆ ಬಂದಿದ್ದಾರೆ. ಜೆಡಿಎಸ್ ನಾಯಕರಂತೂ ಈ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿರೋದ್ರಿಂದ ಈ ಬಾರಿ ಹೈ ವೋಲ್ಟೇಜ್ ಕಾದಾಟ ಇಲ್ಲಿ ಗ್ಯಾರಂಟಿ. ಹಾಗಿದ್ರೆ ಈ ಬಾರಿಯ ರಣಕಣದಲ್ಲಿ ಯಾರ್ಯಾರು ಇರ್ತಾರೆ ಅವ್ರ ಬಲಾಬಲ ಏನು ನೋಡೋಣ ಬನ್ನಿ.

ತೆನೆ ಹೊರೋದ್ಯಾರು?

ಈ ಬಾರಿ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿಯೋದು ಎ ಮಂಜುನಾಥ್  ಅನ್ನೋದು ಕನ್ಫರ್ಮ್. ಈಗಾಗಲೇ ಜೆಡಿಎಸ್ ತನ್ನ ಮೊದಲ ಅಭ್ಯರ್ಥಿಗಳ ಲಿಸ್ಟ್ ನಲ್ಲೇ ಅಧಿಕೃತವಾಗಿ ಮಂಜುನಾಥ್ ಹೆಸರು ಅನೌನ್ಸ್ ಮಾಡಿದೆ. ಅಂದ್ಹಾಗೇ ಎ ಮಂಜುನಾಥ್ ಅವ್ರು ಮೂಲತಃ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲೇ ಇರೋ ಬಿಡದಿಯವರು. ಸುಮಾರು 10 ವರ್ಷಗಳಿಂದ ರಾಜಕೀಯದಲ್ಲಿರೋ ಇವ್ರು ಒಕ್ಕಲಿಗ ಸಮುದಾಯದವರು. ಇವ್ರು ರಾಜಕೀಯದಲ್ಲಿದ್ದುಕೊಂಡು ಮಾಡ್ತಾ ಇದ್ದ ಸಾಮಾಜಿಕ ಕೆಲ್ಸಗಳನ್ನು ಪಕ್ಷ ಸಂಘಟನೆಯನ್ನು ನೋಡಿ ಕಳೆದ ಬಾರಿ ಕಾಂಗ್ರೆಸ್ ಇವ್ರಿಗೆ ಟಿಕೆಟ್ ಕೊಟ್ಟಿತ್ತು. ತನ್ನ ವಯ್ಯಕ್ತಿಕ ವರ್ಚಸ್ಸಿನಿಂದ ಕೇವಲ 10 ಸಾವಿರ ಮತಗಳನ್ನು ಕಾಂಗ್ರೆಸ್  ಪಡೆಯುತ್ತಿದ್ದ ಇದೇ ಕ್ಷೇತ್ರದಲ್ಲಿ 60 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ತನ್ನ ಕೆಪಾಸಿಟಿ ಏನು ಅನ್ನೋದನ್ನು ತೋರಿಸಿದ್ರು. ಒಂದ್ವೇಳೆ ಆ ಎಲೆಕ್ಷನ್ ನಲ್ಲಿ ಕೆಜೆಪಿಯಿಂದ ಯಾರು ಸ್ಪರ್ಧಿಸದೇ ಹೋಗಿದ್ದಿದ್ರೆ ಮಂಜುನಾಥ್ ಕಳೆದ ಬಾರಿಯೇ ಗೆಲ್ತಿದ್ರು. ಆದ್ರೆ ಇದಾದ ಮೇಲೆ ಮಾಗಡಿಯಲ್ಲಿ  ರಾಜಕೀಯವಾಗಿ ಸಾಕಷ್ಟು ಬೆಳವಣಿಗೆಗಳಾದ್ವು. ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ ಜೆಡಿಎಸ್ ನಿಂದ ಉಚ್ಛಾಟಿತರಾದ್ರು. ಇದೇ ವೇಳೆ ಎ ಮಂಜುನಾಥ್ ಕೆಲ್ಸ, ಅವ್ರ ಒಳ್ಲೆತನ ನೋಡಿದ ಜೆಡಿಎಸ್ ವರಿಷ್ಟ  ಮಾಜಿ ಪ್ರಧಾನಿ ದೇವೇಗೌಡ್ರು ಮಂಜುನಾಥ್ ಅವ್ರನ್ನು ಕರೆಸಿ ಮಾತಾಡಿ ಜೆಡಿಎಸ್ ಗೆ ಸೇರಿಸಿಕೊಂಡ್ರು. ಅಲ್ಲದೆ ಅಧಿಕೃತವಾಗಿ ತಮ್ಮ ಪಕ್ಷದ ಟಿಕೆಟ್ ಕೊಟ್ರು. ಇನ್ನು ಇವ್ರ ಬಗ್ಗೆ ಇನ್ನೊಂದಷ್ಟು ವಿಚಾರ ಹೇಳಲೇ ಬೇಕು. ಸ್ವಭಾವತಃ ಸರಳ, ಸಜ್ಜನ ವ್ಯಕ್ತಿ. ಜನರ ಕೈಗೆ ಯಾವಗ ಬೇಕಾದ್ರೂ ಸಿಗ್ತಾರೆ. ಅಧಿಕಾರ ಇಲ್ಲದೇ ಇದ್ರೂ ಕೂಡಾ ಮಾಗಡಿಗೆ ಹೇಮಾವತಿ ನೀರು ತರೋದ್ರಲ್ಲಿ ಇವ್ರು ಪ್ರಮುಖ ಪಾತ್ರ ವಹಿಸಿದ್ದಾರೆ. ಸುಮಾರು 300 ಕೋಟಿ ರೂ ಗಳ ಯೋಜನೆಯನ್ನು ಇಲ್ಲಿಗೆ ತಂದಿದ್ದಾರೆ. ಅದ್ರ ಕೆಲ್ಸ ಈಗಾಗಲೇ 40 ಪರ್ಸೆಂಟ್ ನಷ್ಟು ಆಗಿದೆ. ಇನ್ನುಳಿದಂತೆ 30 ಹಳ್ಳಿಗಳಿಗೆ ಕಾವೇರಿ ನೀರು, ಶಿಥಿಲಾವಸ್ಥೆಯಲ್ಲಿದ್ದ ವೈ ಜಿ ಗುಡ್ಡ ಏತ ನೀರಾವರಿಯೋಜನೆಯ ಪುನರ್ ನವೀಕರಣ, ಮಾಗಡಿಯಲ್ಲಿ ಕೆಇಬಿ ಸಬ್ ಸ್ಟೇಶನ್ ಗಳು,ಭೈರ ಮಂಗಲ ಕೆರೆ ಅಭಿವೃದ್ಧಿ  ಹೀಗೇ ಹೇಳ್ತಾ ಹೋದ್ರೆ ಸಾಕಷ್ಟು ಅಭಿವೃದ್ಧಿ ಕೆಲ್ಸಗಳು ಕಣ್ಣಿಗೆ ಬೀಳತ್ತೆ. ಎಲ್ಲಕ್ಕಿಂತ ಹೆಚ್ಚಾಗಿ  ಕಳೆದ ಬಾರಿ ಸೋತಿದ್ರೂ ಕೂಡಾ ಕ್ಷೇತ್ರ ಬಿಡದೆ, ಕ್ಷೇತ್ರದ ಜನರನ್ನು ಬಿಡದೆ ಅವ್ರ ಜತೆಗೇನೇ ಇದ್ದಾರೆ. ಇನ್ನು ಈ ಬಾರಿ ಹೆಚ್ ಡಿ ದೇವೇಗೌಡ್ರು ಹಾಗೂ ಹೆಚ್ ಡಿ ಕುಮಾರ ಸ್ವಾಮಿಯವರೇ ಈ ಕ್ಷೇತ್ರದ ಬಗ್ಗೆ ಸಾಕಷ್ಟು ಒತ್ತು ಕೊಡ್ತಿರೋದ್ರಿಂದ ಆ ಬಲ ಹಾಗೂ ಎ ಮಂಜುನಾಥ್ ಪ್ರಭಾವದಿಂದ ಇಲ್ಲಿನ ಶಾಸಕರಾಗಿ ಜನ ಇವ್ರನ್ನು ಆಯ್ಕೆ ಮಾಡೋದು ಗ್ಯಾರಂಟಿ.

ಕೈ ಹಿಡಿಯೋದ್ಯಾರು:

ಹೌದು ಒಂದು ಬಾರಿ ಬಿಜೆಪಿ ಹಾಗೂ 3 ಬಾರಿ ಜೆಡಿಎಸ್ ನಿಂದ ನಿಂತು ಶಾಸಕರಾಗಿರೋ ಹೆಚ್ ಸಿ ಬಾಲಕೃಷ್ಣ ಅವ್ರು ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ.1994 ರಲ್ಲಿ ಬಿಜೆಪಿಯಿಂದ ನಿಂತು ಗೆದ್ದಿದ್ದ ಬಾಲಕೃಷ್ಣ ಅವ್ರು 1999ರಲ್ಲಿ ಸೋತಿದ್ರು. ಹಾಗಾಗಿ 2004ರಲ್ಲಿ ಜೆಡಿಎಸ್ ಸೇರಿದ ಬಾಲಕೃಷ್ಣ ಸತತ 3 ಬಾರಿ ಗೆದ್ದು ಶಾಸಕರಾದ್ರು. ಜೆಡಿಎಸ್ ನ ಮನೆ ಮಗನಂತಿದ್ದ ಬಾಲಕೃಷ್ಣ ,ಹೆಚ್ ಡಿ ಕುಮಾರ ಸ್ವಾಮಿ ಅವ್ರ ಪರಮಾಪ್ತರಾಗಿದ್ದರು. ಆದ್ರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ನಿಂದ ಉಚ್ಛಾಟಿತರಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ಜತೆ ಗುರುಕತಿಸಿಕೊಂಡಿರೋ ಬಾಲಕೃಷ್ಣ ಕೈ ಟಿಕೆಟ್ ಆಕಾಂಕ್ಷಿ ಕೂಡಾ ಹೌದು. ಆದ್ರೆ ಇಲ್ಲಿವರೆಗೆ ಜೆಡಿಎಸ್ ಪಕ್ಷದ ನೆರಳಿನಲ್ಲಿ ಗೆಲ್ತಾ ಬಂದಿರೋ ಬಾಲಕೃಷ್ಣ ಅವ್ರಿಗೆ ಈ ಬಾರಿ ಕೈ ಟಿಕೆಟ್ ಸಿಕ್ರೆ ರಿಯಲ್ ಫೈಟ್ ಏನು ಅನ್ನೋದು ಗೊತ್ತಾಗತ್ತೆ. ಯಾಕಂದ್ರೆ ಕುಮಾರ ಸ್ವಾಮಿ , ಜೆಡಿಎಸ್ ಜತೆಗಿದ್ದು ಗೆದ್ದು ಶಾಸಕರಾದ ಬಾಲಕೃಷ್ಣ ಜೆಡಿಎಸ್ ನಿಂದ ಹೊರಬಂದಿರೋದನ್ನು ಇಲ್ಲಿನ ಜನ ವಿಶ್ವಾಸ ದ್ರೋಹ ಅಂತಾನೇ ಹೇಳ್ತಿದ್ದಾರೆ.  ನಂಬಿದ ನಾಯಕರಿಗೆ, ಪಕ್ಷಕ್ಕೆ, ಹಾಗೂ ಗೆಲ್ಲಿಸಿದ ಮತದಾರರಿಗೆ ಮಾಡಿದ ದ್ರೋಹ ಇದು ಅಂತಿದ್ದಾರೆ. ಇನ್ನು ಶಾಸಕರು ಅಭಿವೃದ್ಧಿಯಾದ್ರೂ ಮಾಡಿದ್ದಾರಾ ಅಂದ್ರೆ ಅದೂ ಇಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ಗಾಗ ಏನೇನು ಅಭಿವೃದ್ಧಿಯಾಗಿತ್ತೋ ಅದು ಬಿಟ್ರೆ ಈ ವರೆಗೂ ಬೇರೇನೂ ಇಲ್ಲಿ ಆಗಿಲ್ವಂತೆ. ಇನ್ನು ಇಲ್ಲಿನ ಕೆಂಪೇ ಗೌಡರ ಕೋಟೆ  ಕಾಮಗಾರಿ ಅತ್ಯಂತ ಕಳಪೆಯಾಗಿ ಆಗ್ತಿದ್ದು ಇದು ಜನರಿಗೆ ಶಾಸಕರ ಕೆಲ್ಸ ಹೇಗಿದೆ ಅನ್ನೋದನ್ನು ತೋರಿಸಿಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶಾಸಕ ಬಾಲಕೃಷ್ಣ ರ ವರ್ತನೆ ಜನರಿಗೆ ಇಷ್ಚವಾಗ್ತಿಲ್ಲ. ಕೆಲ ತಿಂಗಲ ಹಿಂದೆ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಅಧಿಕಾರಿಗಳಿಗೆ ಹಾಕಿದ ಧಮ್ಕಿಯನ್ನು ಜನ ಮರೆತಿಲ್ಲ. ಬೀದಿ ಬದಿ ವ್ಯಾಪಾರಿಗಳಿಗೆ ಕಾಲಿನಿಂದ ಒದ್ದು ಗಲಾಟೆ ಮಾಡಿದ ಪ್ರಕರಣ ಜನರ ಮನಸ್ಸಿನಲ್ಲಿದೆ. ಅಷ್ಟೇ ಅಲ್ಲ ಜನರ ಜತೆಗೆ ಕೂಡಾ ಸರಿಯಾಗಿ ಸ್ಪಂದಿಸೋದಿಲ್ಲ ಅನ್ನೋ ಆರೋಪ ಇವ್ರ ಮೇಲಿದೆ. ಶಾಸಕರ ಕೆಲ್ಸದ ಬಗ್ಗೆ ಏನಾದ್ರೂ ಪ್ರಶ್ನೆ ಮಾಡಿದ್ರೆ ಅಂತಹವ ಮೇಲೆ ಕೇಸ್ ದಾಖಲಾಗುತ್ತವಂತೆ. ಈಗಾಗಲೇ ಅಂತಹ 2000ಕ್ಕೂ ಹೆಚ್ಚು ಕೇಸ್ ಇವೆಯಂತೆ.. ಹೀಗೇ  ಮಾಗಡಿ ಬಾಲಕೃಷ್ಣ ಅವ್ರ ವಿರುದ್ಧ ಆರೋಪಗಳ ಪಟ್ಟಿ ಬೆಳೆಯುತ್ತಲೆ ಹೋಗತ್ತ. ಹಾಗಾಗಿ ಜನ ಈ ಬಾರಿ ಇವ್ರ ಕೈ ಹಿಡಿಯೋದು ಕಷ್ಟ. ಆದ್ರೆ ಅದಕ್ಕೂ ಮೊದಲು ಇನ್ನೂ ಇವ್ರು  ಕಾಂಗ್ರೆಸ್ ಸೇರದೇ ಇರೋದ್ರಿಂದ ಅವ್ರಿಗೆ ಕೈ ಟಿಕೆಟ್ ಸಿಗೋದು ಕಷ್ಟ ಅಂತಿದ್ದಾರೆ.

ಇನ್ನು ಕೈ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಲಿಸ್ಟೇ ಇದೆ. ಮಾಜಿ ಬ್ಲಾಕ್ ಕಾಂಗ್ರೆಸ್ ಪ್ರಸಿಡೆಂಟ್ ಚಗಳೂರು ಗಂಗಾಧರ್, ಕಳೆದ ಬಾರಿ ಕೆಜೆಪಿಯಿಂದ  ನಿಂತಿದ್ದ ಹೆಚ್ ಎಂ ಕೃಷ್ಣ ಮೂರ್ತಿ ಹಾಗೇನೇ ಎಲ್ಲಕ್ಕಿಂತ ಪ್ರಮುಖವಾಗಿ ಸಾರಿಗೆ ಸಚಿವ ಹೆಚ್ಎಂ ರೇವಣ್ಣ ಅವ್ರ ಮಗ ಶಶಾಂಕ್ ರೇವಣ್ಣ ಇಲ್ಲಿಂದ ಸ್ಪರ್ದಿಸಬೇಕು ಅನ್ನೋ ಕೂಗು ಕೇಳಿ ಬರ್ತಿದೆ. ಹಾಗಾಗಿ ಇಲ್ಲಿ ಬಾಲಕೃಷ್ಣ ಅವ್ರಿಗೆ ಟಿಕೆಟ್ ಸಿಗತ್ತೆ ಅಂತಾ ಹೇಳೋದಿಕ್ಕಾಗಲ್ಲ.

ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹವಾ ಅಷ್ಟೊಂದಿಲ್ಲ. ಆದ್ರೂ ಕೂಡಾ ಆಕಾಂಕ್ಷಿಗಳು ತುಂಬಾ ಜನ ಇದ್ದಾರೆ. ರಂಗಧಾಮಯ್ಯ,ಮಹೇಶಯ್ಯ,ಹನುಮಂತರಾಜು ಅನ್ನೋರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು ಪಕ್ಷ ಯಾರಿಗೆ ಟಿಕೆಟ್ ನೀಡತ್ತೆ ಅನ್ನೋದನ್ನು ಕಾದು ನೋಡಬೇಕು.

ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು  2 ಲಕ್ಷದ 23 ಸಾವಿರ ಮತದಾರರಿದ್ದಾರೆ. ಇದ್ರಲ್ಲಿ 1 ಲಕ್ಷದ 17 ಸಾವಿರ ಒಕ್ಕಲಿಗ ಹಾಗೂ 44 ಸಾವಿರ ಎಸ್ಸ್ ಸಿ ಎಸ್ಟಿ  ಮತದಾರರಿದ್ದಾರೆ. ಹಾಗಾಗಿ ಇಲ್ಲಿ ಒಕ್ಕಲಿಗರೇ ನಿರ್ಣಾಯಕ ಮತದಾರರು. ಇನ್ನು ಬಾಲಕೃಷ್ಣ ಅವ್ರು ಕಾಂಗ್ರೆಸ್ ಗೆ ಇನ್ನೂ ಅಧಿಕೃತವಾಗಿ ಸೇರಿಲ್ಲ ಅನ್ನೋದು ಒಂದು ಕಡೆ ಹಾಗೇನೇ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರನ್ನೂ ಕೂಡಾ ಭೇಚಿ ಮಾಡಿ ಮಾತಾಡಿದ್ದಾರೆ. ಹಾಗಾಗಿ ಇನ್ನೂ ಅವ್ರು ಗೊಂದಲದಲ್ಲೇ ಇದ್ದಾರೆ. ಇನ್ನು ಈ ಬಾರಿ ಹೆಚ್ ಡಿ ಕುಮಾರ ಸ್ವಾಮಿ ಅವ್ರನ್ನು ಸಿಎಂ ಮಾಡಲೇ  ಬೇಕು ಅಂತಾ ಒಕ್ಕಲಿಗರು ಹೊರಟ್ರೆ ಎ ಮಂಜುನಾಥ್ ಅವ್ರು  ಮಾಗಡಿ ಕ್ಷೇತ್ರದಲ್ಲಿ ಗೆಲ್ಲೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

ಹೆಚ್ ಸಿ ಬಾಲಕೃಷ್ಣ ಅವ್ರು ಜೆಡಿಎಸ್ ನಿಂದ ಉಚ್ಛಾಟಿತರಾಗಿದ್ದಾರೆ. ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ರೂ ಕೂಡಾ ಇನ್ನೂ ಕಾಂಗ್ರೆಸ್ ಸೇರಿಲ್ಲ. ಹಾಗಾಗಿ ಇವ್ರಿಗೆ ಟಿಕೆಟ್ ಇನ್ನೂ ಕನ್ಫರ್ಮ್ ಇಲ್ಲ.  ಹಾಗೇನೇ ಇಲ್ಲಿವರೆಗೆ ಜೆಡಿಎಸ್ ನಲ್ಲಿದ್ದ ಬಾಲಕೃಷ್ಣ ಗೆಲುವಿಗೆ ತುಂಬಾ ಶ್ರಮವಹಿಸಿದ್ದ ಒಕ್ಕಲಿಗ ಸಂಘದ ನಿರ್ದೇಶಕ ಕೃಷ್ಣಮೂರ್ತಿ ಸೇರಿದಂತೆ ಹಲವಾರು ನಾಯಕರು ಬಾಲಕೃಷ್ಣ ಅವ್ರ ಜತೆಗಿಲ್ಲ ಎಲ್ಲರೂ ಜೆಡಿಎಸ್ ಮಂಜುನಾಥ್ ಅವ್ರ ಜತೆಗಿದ್ದಾರೆ. ಇಲ್ಲಿವರೆಗಿನ ಎಲ್ಲಾ ಸಮೀಕ್ಷೆಗಳು ಕೂಡಾ ಜೆಡಿಎಸ್ ನ ಮಂಜುನಾಥ್ ಇಲ್ಲಿ ಜಯಭೇರಿ ಬಾರಿಸ್ತಾರೆ ಅಂತಾನೇ ಇದೆ. ಎಲ್ಲಕ್ಕಿಂತ ಹೆಚ್ಚಾಗಿ  ಹೆಚ್ ಡಿ ಕುಮಾರ ಸ್ವಾಮಿ ಅವ್ರ ಹಿಡಿತದಲ್ಲೇ ಈ ಕ್ಷೇತ್ರ ಇರೋದ್ರಿಂದ ಇಲ್ಲಿನ ಮತದಾರರು ಕುಮಾರಣ್ಣನನ್ನು ಮತ್ತೆ ಮುಖ್ಯಮಂತ್ರಿ ಮಾಡ್ತೀವಿ ಅಂತಾ ಹೇಳ್ತಿರೋದು ನೋಡಿದ್ರೆ ಜೆಡಿಎಸ್ ಇಲ್ಲಿ ಗೆಲ್ಲೋದ್ರಲ್ಲಿ ಯಾವ ಅನುಮಾನವೂ ಇಲ್ಲ.