ಚುನಾವಣಾ ಕುರುಕ್ಷೇತ್ರ 2018 – ಪಾವಗಡ(ತುಮಕೂರು)

ಪಾವಗಡ ವಿಧಾನಸಭಾ ಕ್ಷೇತ್ರ

ಪಾವಗಡ ವಿಧಾನಸಭಾ ಕ್ಷೇತ್ರ. ತುಮಕೂರು ಜಿಲ್ಲೆಯ ಕ್ಷೇತ್ರಗಳಲ್ಲಿ ಇದೂ ಕೂಡಾ ಒಂದು.  ಪಾವಗಡ ಅಂದ್ರೆ ಥಟ್ಟನೆ ನೆಪಾಗೋದು ಬಯಲು ಸೀಮೆ. ಪಾವಗಡ ಅಂದ್ರೆ ಫ್ಲೋರೈಡ್ ನೀರು. ಪಾವಗಡ ಅಂದ್ರೆ ಬಡತನ, ನಿರುದ್ಯೋಗ,ಕರ್ನಾಟಕದ ಗಡಿಭಾಗವಾಗಿರೋ ಪಾವಗಡ ಈ ಹಿಂದೆ ನಕ್ಸಲರ ತಾಣ ಅಂತಾ ಕೂಡಾ ಕುಖ್ಯಾತಿ ಪಡೆದಿತ್ತು.ಇನ್ನು ಇಲ್ಲಿ ವಲಸೆ ಜನ ಜಾಸ್ತಿ. ಆದ್ರೆ ಈಗ ಕಾಲ ಬದಲಾಗಿದೆ ಕ್ಷೇತ್ರ ಬದಲಾಗಿದೆ. ಮತದಾರರು ಬದಲಾಗಿದ್ದಾರೆ. ರಾಜಕೀಯ ಮಜಲು ಕೂಡಾ ಬದಲಾಗಿದೆ. ಪಾವಗಡ ಹಿಂದೆ ಇದ್ದಂತಿಲ್ಲ..ಒಂದಷ್ಟು ಅಭಿವೃದ್ಧಿ ಆಗಿದೆ.ಆದ್ರೆ  ಇಂದಿಗೂ ಈ ಬಯಲು ಸೀಮೆಯಲ್ಲಿ ನೀರಿನ ಸಮಸ್ಯೆ ಕಾಡ್ತಾ ಇದೆ. ನೀರಿಗೆ ತತ್ವಾರ ಇದೆ. ಪಕ್ಕದ ಆಂಧ್ರದಲ್ಲಿ ರೈತರಿಗೆ ನೀರಾವರಿ ಯೋಜನೆಗಳು ಜಾರಿಯಾದ್ರೆ ರಾಜ್ಯದಲ್ಲಿ ಅದ್ರಲ್ಲೂ ಪಾವಗಡದಲ್ಲಿ ಇಲ್ಲ ಅನ್ನೋದು ಸ್ಥಳೀಯರಿಗೆ ಕಾಡ್ತಾ ಇದೆ. ಇನ್ನು ರಾಜಕೀಯ ವಿಚಾರಕ್ಕೆ ಬರೋದಾದ್ರೆ ವೆಂಕಟರಮಣಪ್ಪ ಹಾಗೂ ತಿಮ್ಮರಾಯಪ್ಪನವರ ಹೆಸರು ಯಾರೂ ಮರೆಯಕ್ಕಾಗಲ್ಲ. ಆದ್ರೂ 2018ರ ಚುನಾವಣೆ ಪಾವಗಡ ಪಾಲಿಗೆ ಮತ್ತೆ ಮಂತ್ರಿಗಿರಿ ತಂದುಕೊಡುತ್ತಾ? ತಿಮ್ಮರಾಯಪ್ಪ ಗೆಲ್ತಾರಾ ವೆಂಕಟರಮಣಪ್ಪರಿಗೆ ಟಿಕೆಟ್ ಸಿಗತ್ತಾ ಇನ್ನಾದ್ರೂ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗತ್ತಾ ಅಂತಾ ಜನ ನೊಡ್ತಿದ್ದಾರೆ. ಇಲ್ಲಿನ ಮತ್ತಷ್ಚಟು ರಾಜಕೀಯ ವಿಚಾರಗಳನ್ನು ಹೇಳ್ತೀವಿ ಆದ್ರೆ ಅದ್ಕಕೂ ಮೊಗದಲು 2013ರ ಮತಬರಹ ನೋಡೋಣ.

 

ಇದು 2013ರ ಮತಬರಹ. ಜೆಡಿಎಸ್ ನ ತಿಮ್ಮರಾಯಪ್ಪ 68686 ಮತಗಳನ್ನು ಪಡೆದು ಗೆದ್ದು ಶಾಸಕರಾದ್ರು.ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ವೆಂಕಟೇಶ್ 63823 ಮತಗಳನ್ನು ಪಡೆದು ಸೋತ್ರು.

ಪಾವಗಡ ಅಂದ್ರೆ ಕಾಂಗ್ರೆಸ್ ಜೆಡಿಎಸ್. ಇಲ್ಲಿ ಬಿಜೆಪಿಗೆ ನೆಲೆ ಇಲ್ಲ. ಇಲ್ಲಿ ಯಾವತ್ತೂ ಕೂಡಾ ಒಂದು ಬಾರಿ ಗೆದ್ದವರು ಮತ್ತೆ ಗೆಲ್ಲಲ್ಲ ಅನ್ನೋ ಪ್ರತೀತಿ ಇದೆ. ಒಂದ್ಸಲಿ  ಅಧಿಕಾರ ಕೊಟ್ರೆ ಉಳಿಸಿಕಳ್ಳೋದೆ ಕಡಿಮೆ. ಮಂತ್ರಿಗಳಾದ್ರೂ ಟಿಕೆಟ್ ಸಿಗ್ಲಿಲ್ಲ. ಅಭಿವೃದ್ಧಿ ಮಾಡ್ಲಿಲ್ಲ ಅನ್ನೋ ಆರೋಪ ವೆಂಕಟರಮಣಪ್ಪನವರ ಮೇಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂತು ಜೆಡಿಎಸ್ ಎಂಎಲ್ ಎ ಆದ್ರೂ ಫಂಡ್ಸ್ ಬರ್ಲಿಲ್ಲಾಂತ ಸ್ಥಳೀಯರ ಆರೋಪ,. ಎಲ್ಲಾ ಆರೋಪಗಳ ಮಧ್ಯೆ ಈ ಬಾರಿ ವಾತಾವರಣ ಕುಮಾರಣ್ಣ ಮುಖ್ಯಮಂತ್ರಿ ಆದ್ರೆ ತಿಮ್ಮರಾಯಪ್ಪ ಗೆದ್ರೆ ಮೀಸಲು ಕ್ಷೇತ್ರದಿಂದ ಮಂತ್ರಿ ಆಗೋದು ಗ್ಯಾರಂಟಿ. ತುಮಕೂರು ಜಿಲ್ಲೆಯಲ್ಲಿ ಜ.ಡಾ. ಜಿ ಪರಮೇಶ್ವರ್, ಜಯಚಂದ್ರ, ರಾಜಣ್ಣ, ಅಂತಾ ಘಟಾನುಘಟಿಗಳಿದ್ದಾಗಲೇ ವೆಂಕಟರಮಣಪ್ಪ ಗೆದ್ರೆ ಮತ್ತೆ ಮಂತ್ರಿ ಮಾಡಲ್ಲ ಅನ್ನೋ ಗುಸು ಗುಸು ಇದೆ. ಆದ್ರೂ ಈ ಬಾರಿ ಸಜ್ಜನ ತಿಮ್ಮರಾಯಪ್ಪ ಹಿರಿಯ ವೆಂಕಟರಮಣಪ್ಪ  ಎಲ್ಲಾ ಸರ್ಕಸ್ ಮಾಡಿ ಗೆಲ್ಲಲೇ ಬೇಕು ಅೇಂತಾ ತೀರ್ಮಾನ ಮಾಡಿದ್ದಾರೆ. ಹಾಗಿದ್ರೆ ಈ ಅಭ್ಯರ್ಥಿಗಳ ಬಗ್ಗೆ ಮತದಾರರ ಅಭಿಪ್ರಾಯ ಹೇಗಿದೆ ನೋಡೋಣ.

ಜೆಡಿಎಸ್ ಅಭ್ಯರ್ಥಿ:

2004ರಲ್ಲಿ ಇಡೀ ರಾಜ್ಯದಲ್ಲೇ ಕುತೂಹಲ ಕೆರಳಿಸಿದಂತಹ ಕ್ಷೇತ್ರ ಇದು. ಯಾಕಂದ್ರೆ ಕೂಲಿ ಕಾರ್ಮಿಕರೊಬ್ಬರ ಮಗ ಜೆಡಿಎಸ್ ನಿಂದ ನಿಂತು ಎಂಎಲ್ಎ ಆದ್ರು. ಇದನ್ನು ನೋಡಿ ಇಡೀ ರಾಜ್ಯವೇ ಬೆಕ್ಕಸ ಬೆರಗಾಗಿತ್ತು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದು ಸಾಧ್ಯ ಅನ್ನೋದು ಇಲ್ಲಿ ಎಲ್ಲರಿಗೂ ಅರಿವಾಯ್ತು. ಇನ್ನು ಸಾಮಾನ್ಯ ಮನುಷ್ಯನೊಬ್ಬ ಶಾಸಕನಾದ್ರೆ ಮತ್ತೆ ಆಯ್ಕೆಯಾಗೇ ಆಗ್ತಾರೆ ಅನ್ನೋದನ್ನು 2013ರಲ್ಲಿ  ಮತ್ತೆ ಶಾಸಕರು ನಿರೂಪಿಸಿ ತೋರಿಸಿದ್ರು. ಅವ್ರೇ ಪಾವಗಡದ ಹಾಲಿ ಶಾಸಕ ತಿಮ್ಮರಾಯಪ್ಪ. ಅಭಿವೃದ್ಧಿಯ ಹರಿಕಾರ ಮೀಸಲು ಕ್ಷೇತ್ರದ ಮಾಂತ್ರಿಕ ಸರಳ ಸಜ್ಜಿನಿಕೆಯ ಎಂಎಲ್ಎ ಅಂತಾನೇ ಕರೆಸಿಕೊಳ್ಳೋ ತಿಮ್ಮರಾಯಪ್ಪ ಸರ್ಕಾರ ಕೊಟ್ಟ ಫಂಡ್ ನಲ್ಲೇ ಒಂದಷ್ಚು ಅಭಿವೃದ್ಧಿ ಮಾಡಿದ್ದಾರೆ. ದೊಡ್ಡ ಕನಸು ಇಟ್ಕೊಂಡಿದ್ದಾರೆ. ಕಾಡಿ ಬೇಡಿ ಹಣ ತಂದು ಕ್ಷೇತ್ರಕ್ಕೆ ಹಾಕಿದ್ದಾರೆ. ನೇರವಾಗಿ ಜನರ ಜತೆ ಇರ್ತಾರೆ. ಮೊಬೈಲ್ ಗೆ ಯಾವಾಗ್ಲೂ ಸಿಕ್ತಾ ಇರ್ತಾರೆ. ಹೇಳಿದ ಕೆಲ್ಸ ಮಾಡಿ ಕೊಡ್ತಾರೆ. ಅವ್ರಿಗೆ ಅಧಿಕಾರ ಮಾತ್ರ ಈ ಬಾರಿ ಕೊಟ್ರೆ ಮತ್ತಷ್ಟು ಕೆಲ್ಸ ಮಾಡಕ್ಕೆ ಅನುಕೂಲ ಆಗತ್ತೆ ಅಂತಾ ಜನ ಮಾಡಾಡೋ ಸಮಯಕ್ಕಾಗಲೇ ಒಂದಷ್ಟು ಕೆಲ್ಸ ಮಾಡಿದ್ರು. ಮೊರಾರ್ಜಿ ದೇಸಾಯಿ ಶಾಲೆ,ವಲಸೆ ತಡೆಗಟ್ಟುವುದು,ರೈತರು ಕೂಲಿ ಕಾರ್ಮಿಕರು ತಂದೆ ತಾಯಿ ಜತೆ ವಲಸೆ ಹೋಗೋದು ತಡೆಗಟ್ಟಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳೋ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಹಾಗೇನೇ ಎಸ್ ಸಿ ಎಸ್ ಟಿ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ, 100 ಸಮುದಾಯ ಭವನ, ಮೂಲಭೂತ ಸೌಕರ್ಯ ಶುದ್ಧ ಕುಡಿಯುವ ನೀರಿನ ಘಟಕ ಹೀಗೇ ಹತ್ತಾರು ಕೆಲ್ಸಗಳು ಶಾಸಕರ ಅಭಿವೃದ್ಧಿ ಮಂತ್ರಕ್ಕೆ ಕೈ ಗನ್ನಡಿ. ತಿಮ್ಮರಾಯಪ್ಪ ಸರಳ ವ್ಯಕ್ತಿ ಹಣ ಮಾಡಿಲ್ಲ, ಜನರನ್ನು ಮರೆತಿಲ್ಲ. ಯಾರಿಗೂ ಮೋಸ ಮಾಡಿಲ್ಲ. ರಾಜ್ಯ ವಿಧಾನಸಭೆಯಲ್ಲಿ ಕ್ಷೇತ್ರದ ಬಗ್ಗೆ ಮಾತಾಡಿ ಕ್ಷೇತ್ರಕ್ಕೆ ಅನುದಾನ ಕೊಡಬೇಕು, ಪಾವಗಡವನ್ನು ಅಭಿವೃದ್ಧಿಯತ್ತ ಕೊಂಡೊಯ್ಯ ಬೇಕು ಅಂತಾ ಸಾಕಷ್ಟು ಬಾರಿ ಧ್ವನಿ ಎತ್ತಿದ್ದಾರೆ.ಇವ್ರು ಅಭಿವೃದ್ಧಿಕೆಲ್ಸ ಮಾಡ್ತಾರೆ ಅನ್ನೋದಕ್ಕೋಸ್ಕರ ದೇವೇಗೌಡ್ರು, ಕುಮಾರಸ್ವಾಮಿ.ಯವರು ಕೂಡಾ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿರೋದು ಆನೆ ಬಲ ಬಂದಂತಾಗಿದೆ.

ಕಾಂಗ್ರೆಸ್ ಅಭ್ಯರ್ಥಿ:

2008ರಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಕಾಯ್ತಾ ಇದ್ದ ತಿಮ್ಮರಾಯಪ್ಪ ಟಿಕೆಟ್ ಗಿಟ್ಟಿಸಲು ವಿಫಲವಾದ್ರು. ಅಂದು ಗಾಯತ್ರಿ ದೇವಿಗೆ ಟಿಕೆಟ್ ನೀಡಲಾಯ್ತು ಗಾಯತ್ರಿ ದೇವಿ ಮತ್ತೆ ತಿಮ್ಮರಾಯಪ್ಪ ಒಂದೇ  ಸಮುದಾಯದವರಾದ್ದರಿಂದ  ಮತ ಹಂಚಿಕೆಯಾಗಿ ಪಕ್ಷೇತರರಾಗಿ ನಿಂತಿದ್ದ ವೆಂಕಟರಮಣಪ್ಪ ಗೆದ್ರು.2008ರ ಆ ಚುನಾವಣೆ ಇಡೀ ರಾಜ್ಯವೆ ಬೆಕ್ಕಸ ಬೆರಗಾಗುವಂತೆ  ಮಾಡಿತ್ತು. ಅಂದ್ರೆ ಅಂದಿನ ಚುನಾವಣೆಲಿ ಪಕ್ಷೇತರರ ಪ್ರಾಬಲ್ಯ ರೆಸಾರ್ಟ್ ರಾಜಕಾರಣ, ಆಮಿಶ, ಕೆಲವ್ರಿಗಂತೂ ಮಂತ್ರಿಗಿರಿಯನ್ನೇ ತಂದುಕೊಡ್ತು. ಅಂತಹ ಮಂತ್ರಿಗಿರಿ ಪಡೆದವರಲ್ಲಿ ಈ ವೆಂಕಟರಮಣಪ್ಪ ಒಬ್ರು. ಮಂತ್ರಿಯಾಗಿದ್ದೇ ತಡ ಹೇಳಿ ಕೇಳಿ ಬಯಸದೇ ಬಂದ ಭಾಗ್ಯ ಚೆನ್ನಾಗಿ ಮಂತ್ರಿಗಿರಿ ಎಂಜಾಯ್ ಮಾಡಿದ್ರು. ಕ್ಷೇತ್ರದ ಕಡೆ ಗಮನ ಹರಿಸಿಲ್ಲ. ಹೆಸರಾಗುವಂತಹ ಕೆಲ್ಸ ಮಾಡಿಲ್ಲ. ರಾಜಕೀಯ ಚದುರಂಗದಾಟದಲ್ಲಿ ವೆಂಕಟರಮಣಪ್ಪನವರಿಗೆ ಆವತ್ತಿನ ಸರ್ಕಾರ ಮಾರ್ಗ ಮಧ್ಯದಲ್ಲೇ ಮಂತ್ರಿಗಿರಿಯನ್ನು ಕಿತ್ಕೊಂಡುಬಿಡ್ತು. ಅಧಿಕಾರ ಹೋಗಿದ್ದೆ ವೆಂಕರಮಣಪ್ಪನವರಿಗೆ ನಿರಾಸೆ ತಂತು. ಆದ್ರೂ ಕೂಡಾ ರಾಜಕಾರಣ ಮಾಡಲೇ ಬೇಕು ಎಂಎಲ್ ಎ ಆದ್ರೂ ಮಂತ್ರಿ ಆದ್ರು, ಅಧಿಕಾರದ ಸವಿ ಸವಿದ್ರು ಮತ್ತೆ ಕಾಂಗ್ರೆಸ್ ನೇರಿಕೊಂಡ್ರು. ಆದ್ರೆ 2013ರಲ್ಲಿ ಇವ್ರ ಮಗ ಹೆಚ್ ವಿ ವೆಂಕಟೇಶ್ ರಿಗೆ ಕಾಂಗ್ರೆಸ್ ಟಿಕೆಟ್ ಕೊಡ್ತು. ಆದ್ರೆ  ಅವ್ರು  ಇಲ್ಲಿ ಸೋತ್ರು.

ಇನ್ನು ಈ ಬಾರಿ ವೆಂಕಟರಮಣಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಶತಾಯಗತಾಯ ಮಾಡಿ ಗೆಲ್ಲಲೇ ಬೇಕು ಅಂತಾ ಪ್ರಯತ್ನಿಸ್ತಿದ್ದಾರೆ. ಗೆದ್ರೆ ಮಂತ್ರಿ ಆಗಲೇ ಭೇಕು ಅನ್ನೋ ಆಸೆ ಕೂಡಾ ಇದೆ. ಒಟ್ಟಾರೆ ವೆಂಕಟರಮಣಪ್ಪ ತನಗಾಗಲಿ ಅಥವಾ ಕಳೆದ ಬಾರಿ ನಿಂತು ಸೋತಿದ್ದ ತನ್ನ ಮಗನಿಗಾಗಲಿ ಟಿಕೆಟ್ ಬೇಕು ಅಂತಾ ಎರಡು ದಾರಿ ಹುಡುಕಿದ್ದಾರೆ. ಕವಲೊಡೆದ ಕಾಂಗ್ರೆಸ್ ನಲ್ಲಿ ಯಾರನ್ನು ಗೆಲ್ಲಿಸ್ತಾರೋ ಬಿಡ್ತಾರೋ ಗೊತ್ತಿಲ್ಲ ಆದ್ರೆ ಕ್ಷೇತ್ರ ಅಭಿವೃದ್ದಿ ಆಗಬೇಕು ಅಂತಾ ಜನ ಕಾಯ್ತಿದ್ದಾರೆ. ಇನ್ನುಳಿದಂತೆ ಕಾಂಗ್ರೆಸ್ ನಲ್ಲಿ ಸೋಲಾರ್ ಎಂಡಿ ಬಲರಾಮ್ ಕೂಡಾ ಪ್ರಬಲ ಆಕಾಂಕ್ಷಿ. ಈಗಾಗಲೇ ಕ್ಷೇತ್ರದಲ್ಲೆಲ್ಲಾ ಫ್ಲೆಕ್ಸ್ ಗಳು ರಾರಾಜಿಸ್ತಿದ್ದಾವೆ. ಕಾಂಗ್ರೆಸ್ ನಲ್ಲಿ ವೆಂಕಟರಮಣಪ್ಪನವರಪಿಗೆ ಕೊಡ್ತಾರಾ ಅವ್ರ ಮಗನಿಗೆ ಕೊಡ್ತಾರ ಇಲ್ಲಿ ಬಲರಾಮ್ ಗೆ ಕೊಡ್ತಾರಾ ಕಾದು ನೋಡಬೇಕು.

 

ಬಿಜೆಪಿ ಅಭ್ಯರ್ಥಿ:

ವಕೀಲರಾಗಿರೋ ಲಂಬಾಣಿ ಕೃಷ್ಣಾ ನಾಯಕ್ ಪಾವಗಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಸಾಕಷ್ಟು ಹೋರಾಟದ ಮುಖಾಂತರ ಹೆಸರು ವಾಸಿಯಾಗಿರೋ ಕೃಷ್ಣಾ ನಾಯಕ್ ಈ ಬಾರಿ ಗೆಲ್ಲಲೇ ಬೇಕು ಅಂತಾ ಕ್ಷೇತ್ರದಲ್ಲಿ ಓಡಾಡ್ತಿದ್ದಾರೆ. ಕಾಂಗ್ರೆಸ್ ಜೆಡಿಎಸ್ ನೇರ ಹಣಾಹಣಿ ಇರೋ ಈ ಕ್ಷೇತ್ರದಲ್ಲಿ ಬಿಎಸ್ವೈ ಅಲೆ ಹಾಗೂ ಮೊದಿ ಅಲೆ ಹಿಡಿದುಕೊಂಡು ಕೃಷ್ಣಾನಾಯಕ್ ಓಡಾಡ್ತಿದ್ದಾರೆ.

 

ಪಾವಗಡ ರಾಜಕೀಯವಾಗಿ ರಂಗೇರಿದೆ. ಮಂತ್ರಿಗಿರಿ ಬೇಕು, ಅಭಿವೃದ್ಧಿಯಾಗಬೇಕು. ಮೂಲಭೂತ ಸೌಕರ್ಯ ಎಲ್ಲಾ ಕ್ಷೇತ್ರಗಳಂತೇ ನಮ್ಮ ಕ್ಷೇತ್ರನೂ ಭಿವೃದ್ಧಿಯಾಗಬೇಕು ಅನ್ನೋದು ಇಲ್ಲಿನ ಜನರ ಅಪೇಕ್ಷೆ. ಹಾಗಾಗಿ ತಿಮ್ಮರಾಯಪ್ಪರನ್ನು ಗೆಲ್ಲಿಸಬೇಕು. ಈ ಬಾರಿ ಪಾವಗಡದಿಂದ ಕ್ಷೇತ್ರದಿಂದ ತಿಮ್ಮರಾಯಪ್ಪ ಗೆದ್ರೆ ಇಡೀ ಜಿಲ್ಲೆಯಲ್ಲಿ ಹಿರಿಯ ರಾಜಕಾರಣಿ ಆಗಿರೋ ಇವ್ರಿಗೆ ಮಂತ್ರಿ ಸ್ಥಾನ ಸಿಗ್ತತೆ. ಅದೂ ಕೂಡಾ ಜೆಡಿಎಸ್ ಅದಿಕಾರಕ್ಕೆ ಬಂದ್ರೆ. ಆದ್ರೆ ಗೆಲುವು ಅಂದ್ಕೊಂಡಂತೆ ಸುಲಭವಲ್ಲ ಕಾಂಗ್ರೆಸ್ ಪ್ರಬಲ ಪೈಪೋಟಿ ಕೊಡ್ತಾ ಇದೆ. ವೆಂಕಟರಮಣಪ್ಪ ಹೇಳಿ ಕೇಳಿ ಹಿರಿಯ ರಾಜಕಾರಣಿ. ವೆಂಕಟರಮಣಪ್ಪಗೆ ಟಿಕೆಟ್ ಸಿಕ್ರೆ ಫೈಟ್ ಇರತ್ತೆ. ಆದ್ರೆ ಟಿಕೆಟ್ ಸಿಕ್ಕಿಲ್ಲಾಂದ್ರೆ ಒನ್ ಸೈಡ್ ಮ್ಯಾಚ್ ಆಗೋದ್ರಲಲಿ ಡೌಟ್ ಇಲ್ಲ ಅಂತಾರೆ ಇಲ್ಲಿಲ ನಾಡಿಮಿಡಿತ ಬಲ್ಲ ರಾಜಕೀಯ ಪರಿಣಿತರು.