ಚುನಾವಣಾ ಕುರುಕ್ಷೇತ್ರ 2018 – ಸುರಪುರ

ಸುರಪುರ ವಿಧಾನಸಭಾ ಕ್ಷೇತ್ರ

ಈಗ ನಾವು ಹೇಳ್ತಾ ಇರೋ ಕ್ಷೇತ್ರ ಸುರಪುರ ವಿಧಾನಸಭಾ ಕ್ಷೇತ್ರ. ಹಾಲಿ ಕಾಂಗ್ರೆಸ್ ನ ವೆಂಕಟಪ್ಪ ನಾಯಕ ಇಲ್ಲಿ ಶಾಸಕರಾಗಿದ್ದಾರೆ. ಆದ್ರೆ ಆಡಳಿತ ವಿರೋಧಿ ಅಲೆ ಇಲ್ಲಿ ಕಾಣಿಸ್ತಿರೋದ್ರಿಂದ ಭಾರಿ ಬದಲಾವಣೆಯನ್ನು ಜನ ಬಯಸಿರೋದು ಕಾಣಿಸ್ತಾ ಇದೆ. ಹಾಗಿದ್ರೆ ಬನ್ನಿ ಏನು ಬದಲಾವಣೆಗಳಾಗಬಹುದು ಈ ಬಾರಿಯ ಎಲೆಕ್ಷನನಲ್ಲಿ ಅನ್ನದಕ್ಕೆ ಸಂಬಂದಿಸಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.

ಸುರಪುರ ವಿಧಾನಸಭಾಲ ಕ್ಷೇತ್ರ. ಸುರಪುರ ಅಂದ್ರೆ ನೆನಪಾಗೋದೇ ರಾಜ ಮನೆತನ. ಹೌದು ರಾಜಮನೆತನದಲ್ಲಿ ಸುರಪುರ ಸಂಸ್ಥಾನ ಅಂದ್ರೆ ಅದಕ್ಕೊಂದು ಇತಿಹಾಸ ಇದೆ. ಸುರುಪುರ ವಿಧಾನಸಭಾ ಕ್ಷೇತ್ರ ಹಲವಾರು ರೀತಿಯಲ್ಲಿ ಪ್ರಾಮುಖ್ಯತೆ ಪಡೆದಿದೆ.ಹಿಂದೂ ಮುಸ್ಲಿಂ ಭಾವೈಕ್ಯತೆ, ನಾರಾಯಣ ಪುರ ಜಲಾಶಯ, 6 ಲಕ್ಷ ಎಕರೆಯ ನೀರಾವರಿ ಪ್ರದೇಶ, ಕೊಡೈಕಲ್ ಕಾಲಜ್ನಾನಿ ಬಸವೇಶ್ವರ್ , ತಿಂತಣಿ ಸೇರಿದಂತೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇದೆ. 2008ರ ಕ್ಷಏತ್ರ ಪುಮರ್ ವಿಂಗಡಮೆ ನಂತ್ರ ಪರಿಶಿಷ್ಟ ಪಂಗಡಕಕೆ ಮೀಸಲಾದ ಈ ವಿ ಕ್ಷೇತ್ರ. ವಿಂಗಡಣೆಯಾದ ಕ್ಷಣದಲ್ಲೇ ಮಂತ್ರಿಗಿರಿಯನ್ನು ಪಡೆದ ಕ್ಷೇತ್ರ. ಸುರಪುರ ಸಂಸ್ಥಾನ ಸಭ್ಯ ಹಾಗೂ ಸುಶಿಕ್ಷಿತ ಮತದಾರರನ್ನು ಹೊಂದಿರೋ ವಿದಾನಸಭಾ ಕ್ಷೇತ್ರ.ರೈತಾಪಿ ವರ್ಗದವರೇ ವಾಸಿಸುವ ಈ ಕ್ಷೇತ್ರದಲ್ಲಿ ಈ ಹಿಂದೆ ಮಾಲಕರೆಡ್ಡಿಯಂತಹ ಹಿರಿಯ ರಾಜಕಾರಣಿಗಳು ಶಾಸಕರಾಗಿದ್ದು ಉಂಟು. 2 ಪುರಸಭೆ ಹಾಗೂ 150ಕ್ಕೂ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಸುರಪುರ ಯಾದಗಿರಿ ಜಿಲ್ಲೆಯಲ್ಲಿ ರಾಜಕೀಯಕ್ಕೂ ಸಾಮಾಜಿಕ ಸಾಮರಸ್ಯಜೀವನಕ್ಕೆ ಉತ್ತಮ ಕ್ಷೇತ್ರ ಎನಿಸಿಕೊಂಡಿದೆ. ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲ್ಸ ಕಾರ್ಯಗಳು  ನಡೆದಿದ್ದವು ರಾಜಕೀಯವಾಗಿ ಏನೇ ಜಿದ್ದಾಜಿದ್ದಿ ಇದ್ದರೂ ಅಭಿವೃದ್ಧಿ ಮಾಡಬೇಕು ಅನ್ನೋ ಹಂಬಲ ಶಾಸರಿಗಿದ್ರೆ ಮಾತ್ರ ಕ್ಷೇತ್ರ ಉದ್ದಾರವಾಗೋದು. ಅದ್ಯಾಕೋ ಸುರಪುರ ಇತ್ತೀಚೆಗೆ ಅಭಿವೃದ್ಧಿಯಿಂದ ಕುಂಠಿತ ಕಾಣ್ತಾ ಇದೆ. ಹಾಗಾದ್ರೆ ಪ್ರಸ್ತುತ ರಾಜಕೀಯ ಪರಿಸ್ಥಿತಿ ಹೇಗಿದೆ ನೋಡೋಕು ಮೊದಲು 2013ರ ಮತಬರಹ ನೋಡೋಣ

 

ಇದು 2013ರ ಮತಬರಹ. ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ರಾಜಾ ವೆಂಕಟಪ್ಪ ನಾಯಕ 65033 ಮತಗಳನ್ನು ಪಡೆದು ಗೆದ್ದು ಶಾಸಕರಾದ್ರು. ಇನ್ನು ಜೆಡಿಎಸ್ ನಿಂದ ನಿಂತಿದ್ದ ರಾಜೂಗೌಡ 60958 ಮತಗಳನ್ನು ಪಡೆದ್ರು.

ಸುರಪುರ ವಿಧಾನಸಭಾ ಕ್ಷೇತ್ರ ಮೇಲ್ನೋಟಕ್ಕೆ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಮೂರೂ ಪಕ್ಷಗಳ ಕಾರ್ಯಕರ್ತರನ್ನು ಒಳಗೊಂಡಿರೋ ಕ್ಷೇತ್ರ. ಆದ್ರೆ ಈ ಬಾರಿ ಮಾಜಿ ಮಂತ್ರಿ ರಾಜೂಗೌಡ ಬಿಜೆಪಿ ಅಭ್ಯರ್ಥಿಯಾಗಿರೋದ್ರಿಂದ ಹಾಲಿ ಶಾಸಕ ಕಾಂಗ್ರೆಸ್ ನ ರಾಜಾವೆಂಕಟಪ್ಪ ನಾಯಕ ನಡುವೆ ನೇರ ಹಣಾಹಣಿ ಇದೆ. ಸತತ ಸ್ಥಳೀಯ ಸಂಸ್ಥೆ ಇತರೆ ಚುನಾವಣೆಗಳಲ್ಲಿ ಸೋಲುಂಡಿರುವ ಕಾಂಗ್ರೆಸ್ ಚುನಾವಣಾ ಸರ್ಕಸ್ ಗೆ ಇಳಿದಿದೆ. ಬಿಜೆಪಿ ಮಾಡಿರೋ ತಪ್ಪನ್ನು ಮತ್ತೆ ಮಾಡದಂತೆ ಕ್ಷೇತ್ರ ಗಟ್ಟಿ ಮಾಡಿಕೊಳ್ಳಲು ಸಂಘಟನೆ ಮಾಡ್ತಿದೆ. ಆಡಲಿತ ವಿರೋಧಿ ಅಲೆ ಹಾಗೂ ವೆಂಕಟಪ್ಪ ನಾಯಕರ ವರ್ತನೆಗೆ ಅಧಿಕಾರಿಗಳ ಆಕ್ರೋಶ ತೀರಾ ವಿಕೋಪಕ್ಕೆ ಹೋದ ಹಾಗೆ ಕಾಣ್ತಿದೆ. ಅದ್ರೂ ಸುರಪುರದಲ್ಲಿ ಕಾಂಗ್ರೆಸ್ ನ ಕೋಟೆ ದಿನೇದಿನೇ ಕುಸಿಯುತ್ತಿದೆ.ವೆಂಕಟಪ್ಪನವರ ಕುಟುಂಬ ರಾಜಕಾರಣವನ್ನು ಈ ಬಾರಿಯ ಜನ ಒಪ್ತಾರಾ ನೋಡಬೇಕು ಇದರ ಮಧ್ಯೆ ಜೆಡಿಎಸ್ ಪ್ರತಾಪವನ್ನು ಮಾಡತ್ತಾ ಅನ್ನೋದನ್ನು ಕಾದು ನೋಡಬೇಕು. ಹಾಗಿದ್ರೆ ಇಲ್ಲಿನ ರಣಕಲಿಗಳು ಯಾರು? ಅವ್ರ ಬಲಾಬಲ ಏನು ನೋಡೋಣ

ಕಾಂಗ್ರೆಸ್ ಅಭ್ಯರ್ಥಿ:

ಹಾಲಿ ಶಾಸಕರಾಗಿರೋ ರಾಜಾ ವೆಂಕಟಪ್ಪ ನಾಯಕ ಈ ಬಾರಿ ಕೂಡಾ ಕಾಂಗ್ರೆಸ್ ನಿಂದ ಕಣಕ್ಕಿಳಿಯೋದಕ್ಕೆ ರೆಡಿಯಾಗ್ತಿದ್ದಾರೆ. ಕ್ಷೇತ್ರದಲ್ಲಿ ಸಿಕ್ಕ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲ್ಸ ಮಾಡಬಹುದಾಗಿತ್ತು. ಆದ್ರೆ  ಶಾಸಕರು  ಅಧಿಕಾರಿಗಳನ್ನು ಮತ್ತು ಕ್ಷೇತ್ರವನ್ನು ಕೈಯಲ್ಲಿ ಹಿಡಿದಿಟ್ಟುಕೊಳ್ಳಬೇಕು ಅಂತಾ ಕ್ಷೇತ್ರವನ್ನು ಕಡೆಗಣಿಸಿದ್ದಾರೆ.  ಇಲ್ಲಿರೋ ಮಳೆ ಆದಾರಿತ ಜಮೀನುಗಲಿಗೆ ಪಿಕ್ ಅಪ್ ಮಾಡಿ ನೀರಾವರಿ ತರಬೇಕಿತ್ತು ಆದ್ರೆ ಅದ್ಯಾವುದೂ ಇಲ್ಲಿ ನಡೆದಿಲ್ಲ. ತನ್ನ ಕುಟುಂಬದವರು ರಾಜಕಾರಣಕ್ಕೆ ಬರಬೇಕು ನಾನೇ ಹೇಳಿದಂತೆ ನಡೆಯಬೇಕು ಅನ್ನೋ ಒಂದೇ ಒಂದು ಸ್ವಾರ್ಥಕ್ಕಾಗಿ ಇಡೀ ಕ್ಷೇತ್ರ ಅವ್ರ ಕೈ ತಪ್ಪಿಲ ಹೋಗ್ತಿದೆ. ರಾಜಾ ವೆಂಕಟಪ್ಪ ನಾಯಕ ಹಿರಿಯ ರಾಜಕಾರಣಿ. ತನ್ನ ಅನುಭವ ಹಾಕಿ ಕ್ಷಏತ್ರವನ್ನು ಅಭಿವೃದ್ಧಿ ಮಾಡಬೇಕಿತ್ತು. ಪಕ್ಷದ ಬೇರೆ ಕಾರ್ಯಕರ್ತರಿಗೆ ಅವಕಾಶ ಕೊಡಬೇಕಿತ್ತು ಆದ್ರೆ ಅದ್ಯಾವುದನ್ನು ಅವ್ರು ಮಾಡಿಲ್ಲ. ಇವತ್ತಿಗೂ ಕ್ಷೇತ್ರದಲ್ಲಿ ದಬ್ಬಾಳಿಕೆ ಇದೆ, ಮೀಟರ್ ಬಡ್ಡಿ ದಂಧೆ ಇದೆ, ಎಲ್ಲದಕ್ಕಿಂತ ಮುಖ್ಯ ಇಡೀ ಕ್ಷೇತ್ರದಲ್ಲಿ ಮರಳು ದಂಧೆ ಎಗ್ಗಿಲ್ಲದೇ ನಡೀತಿದೆ.ಯಾಕೆ ಎಂಎಲ್ಎ ಇದ್ರ ಬಗ್ಗೆ ತಲೆಕೆಡಿಸೊಳ್ತಿಲ್ಲ. ಕ್ಷೇತ್ರ ಅಭಿವೃದ್ಧಿ ಮಾಡ್ತಿಲ್ಲ ಕ್ಷೇತ್ರದಲ್ಲಿರೋ ಮರಳೆಲ್ಲಾ ಕಳ್ಳರ ಪಾಲಾಗ್ತಿದ್ರೂ ಎಂಎಲ್ಎ ಮೌನವಾಗಿರೋದು ನೋಡಿ ಕ್ಷಏತ್ರದ ಜನ ಶಾಸಕರ ಮೇಲೆ ಅನುಮಾನ ಪಡ್ತಿದ್ದಾರೆ. ವಿಶೇಷವಾಗಿ SCPTSP ಯೋಜನೆ ಸಂಪೂರ್ಣವಾಗಿ ನೆಲಕಚ್ಚಿರೋದು ಶಾಸಕರ ವರ್ಚಸ್ಸು ಕಡಿಮೆಯಾಗಲು ಕಾರಣವಾಗಿದೆ. ಏನೇ ಆದ್ರೂ ರಾಜಾವೆಂಕಟಪ್ಪ ನಾಯಕ ಇಡೀ ಕ್ಷೇತ್ರವನ್ನು ಹತೋಚಟಿ ಹೆಸರಲ್ಲಿ ಅಭಿವೃದ್ಧಿ ಇಲ್ಲದಂಗೆ ಮಾಡಿದ್ರು . ಈ ಹಿಂದೆ ಬಂದಂತಹ ಎಲ್ಲಾ ಫಂಡ್ ಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದ್ರು. ಆದ್ರೂ ಈ ಬಾರಿ ಚುನಾವಣೆಗದೆ ತಯಾರಾಗಿದ್ದಾರೆ. ಗೆದ್ದೇ ಗೆಲ್ತೀನಿ ಅನ್ನೋ ಭರವಸೆ ಇಟ್ಕೊಂಡಿದ್ದಾರೆ, ಯಾರೂ ಏನೇ ಮಾಡಿದ್ರೂ ಸುರಪುರದ ಮತದಾರ ಅಷ್ಟು ಸುಲಭವಾಗಿ ಯಾರಿಗೂ ಒಲಿಯಲ್ಲ ಭಾರಿ ಪ್ರಜ್ನಾವಂತ ಪ್ರಾಮಾಣಿಕ ಮತದಾರರು ವ್ಯಕ್ತಿ ಮತ್ತು ವರ್ಚಸ್ಸಿಗೆ ತುಂಬಾ ಪ್ರಾಮುಖ್ಯತೆ ಕೊಡ್ತಾರೆ.

ಬಿಜೆಪಿ ಅಭ್ಯರ್ಥಿ:

ಮಾಜಿ ಸಚಿವರಾಗಿರೋ ರಾಜೂಗೌಡ ಈ ಬಾರಿ ಮತ್ತೆ ಬಿಜೆಪಿಯಿದ ಕಣಕ್ಕಿಳಿಯೋದು ಗ್ಯಾರಂಟಿ. ಕೊಡೈಕಲ್ ಗ್ರಾಮದವರಾದ ರಾಜೂಗೌಡ ಸುರಪುರ ಜಿಲ್ಲಾಪಂಚಾಯತ್ ಮುಖಾಂತರ ರಾಜಾವೆಂಕಟಪ್ಪ ನಾಯಕರ ಗರಡಿಯಲ್ಲಿ ಪಳಗಿದವರು. ಸ್ತಳೀಯರು, ಯುವಕರು, ಚಿಕ್ಕ ವಯಸ್ಸಿನಲ್ಲೇ ರಾಜಕೀಯಕ್ಕೆ ಬಂದವರು, ಹತ್ತಿರದಿಂದ ದೊಡ್ಡ ದೊಡ್ಡ ನಾಯಕರ ಜತೆ ಒಡನಾಟ ಇಟ್ಕೊಂಡವರು. ರಾಜೂ ಗೌಡ 2004ರಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡನಾಡು ಪಕ್ಷದಿಂದ ಕಣಕ್ಕಳಿತಾರೆ. 2008ರಲ್ಲಿ ಬಿಜೆಪಿಯಿಂದ ನಿಂತು ಗೆದ್ದು ಸಚಿವರೂ ಆದ್ರು. ಇನ್ನು ಸಚಿವರಾದ ಮಾತ್ರಕ್ಕೆ ಸುಮ್ಮನೇ ಕೂರ್ಲಿಲ್ಲ. ಈಗ ಸುರಪುರದಲ್ಲಾಗಿರೋ ಅಭಿವೃದ್ಧಿ ಕೆಲ್ಸಗಳೆಲ್ಲವೂ ರಾಜೂಗೌಡ್ರ ಕಾಲದಲ್ಲಾಗಿರೋದೇ… ಇವ್ರು ಮಲ್ಲನಾರಾಯಣಪುರ ರಸ್ತೆ ಅಭಿವೃದ್ಧಿ, ಗೊನಾಳ್ ಲಿಫ್ಟ್ ಇರಿಗೇಶನ್ ,ರಾಜನ್ ಕೋಳೋರು ಲಿಫ್ಟ್ ಇರಿಗೇಶನ್,26 ಹೈ ಸ್ಕೂಲ್ ,2 ಮೊರಾರಾರ್ಜಿ ಶಾಲೆ, ಕಿತ್ತೂರು ರಾಣಿ ಮಹಿಳಾ ಸ್ಕೂಲ್,2 ಜ್ಯೂನಿಯರ್ ಕಾಲೇಜು ಕ್ಷೇತ್ರಕ್ಕೆ ತಂದ ಕೀರ್ತಿ ರಾಜೂ ಗೌಡ್ರದ್ದು. ಇನ್ನು ಸುರಪುರದಲ್ಲಿ ಬಸ್ ಡಿಪೋ, ಮಿನಿ ವಿಧಾನಸೌಧ, ನ್ಯಾಯಾಲಯ ಕಟ್ಟಡ. ಅಗ್ನಿಶಾಮಕದಳ ಕಟ್ಟಡಗಳೆಲ್ಲವೂ ಇವ್ರ ಕಾಲದಲ್ಲೇ ಆಗಿದ್ದು. ಎಲ್ಲಾ ಅಂದ್ಕೊಂಡಂಗೆ ಇದ್ದಿದ್ರು ರಾಜೂ ಗೊಡ್ರು 2013ರಲ್ಲೂ ಗೆಲ್ತಾ ಇದ್ರು. ಮಂತ್ರಿ ಗಿರಿ ಹೋಯ್ತು ಅಂತಾ ಬಿಜೆಪಿ ಬಿಟ್ಟು ಜೆಡಿಎಸ್ ಸೇರಿಕೊಂಡ್ರು. ಸೋತು ಸುಮ್ಮನಾದ್ರು. ಹೇಳಿ ಕೇಳಿ ರಾಜಕಾರಣಿ ಸುಮ್ಮನೆ ಕೂರಲ್ಲ. ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲಾ ಅಂತಾ ಮತ್ತೆ ಬಿಜೆಪಿಗೆ ಬಂದು ಸೇರಿದ್ರು. ಪಕ್ಷ ಸಂಘಟನೆ ಮಾಡಿದ್ರು. ತಾಲೂಕಿನಲ್ಲಿರೋ 7 ಜಿಲ್ಲಾ ಪಂಚಾಯತ್ ಗಳಲ್ಲಿ 5 ರಲ್ಲಿ ಬಿಜೆಪಿ ಬರೋ ಹಾಗೇ ಮಾಡಿದ್ರು. ಇರೋ 27 ತಾಲೂಕು ಪಂಚಾಯತ್ ಗಳಲ್ಲಿ 19ರಲ್ಲಿ ಇವತ್ತು ಬಿಜೆಪಿ ಅಧಿಕಾರದಲ್ಲಿದೆ. ಹಾಗೇನೇ 32 ಗ್ರಾಮ ಪಂಚಾಯತ್ ಗಳಲ್ಲಿ 25 ರಲ್ಲಿ ಬಿಜೆಪಿ ಗೆದ್ದಿದೆ. ಇದೆಲ್ಲದರ ಹಿಂದೆ ರಾಜೂ ಗೌಡರ ರಾಜಕೀಯ ಚತುರತೆ ಮತ್ತು ಶ್ರಮ ಇದೆ.

ತೆನೆ ಹೊರೋದ್ಯಾರು?

ಜೆಡಿಎಸ್ ಅಭ್ಯರ್ಥಿ:

ಸುರಪುರದ ಯುವರಾಜ ಕೃಷ್ಣಪ್ಪ ನಾಯಕ ಈ ಬಾರಿಯ ಜೆಡಿಎಸ್ ಅಭ್ಯರ್ಥಿ. ಈ ಹಿಂದೆ ರಾಜೂ ಗೌಡ್ರು ಸಂಪಾದಿಸಿದ್ದ ಜೆಡಿಎಸ್ ಸಂಘಟನೆಯನ್ನು ಮುಂದಿಟ್ಕೊಂಡು ಮತ ಕೇಳಲು ಬರ್ತಿದ್ದಾರೆ. ರಾಜ ಮನೆತನ ದೇವೇಗೌಡ್ರ ಹೆಸರು ಕುಮಾರಸ್ವಾಮಿ  ಆಶೀರ್ವಾದ ಈಗಲಾದ್ರೂ ಜೆಡಿಎಸ್ ಗೆ ಅದಿಕಾರ ಕೊಡಲಿ ಅನ್ನೋ ಆಶಾವದದಿಂದ ಕಣಕ್ಕಿಳಿಯುತ್ತಿದ್ದಾರೆ. ಸುರಪುರ ಕ್ಷೇತ್ರದಲ್ಲಿ 269353 ಮತದಾರರಿದ್ದಾರೆ. ಕುರುಬ ಹಾಗೂ ವಾಲ್ಮೀಕಿ ಜನಾಂಗದವರೇ ನಿರ್ಣಾಯಕರಾಗಿರೋ ಈ ಕ್ಷಏತ್ರದಲ್ಲಿ ಅಭಿವೃದ್ಧಿ ಹಾಗೂ ವ್ಯಕ್ತಿತ್ವಕ್ಕೆ ಮನ್ನಣೆ ಕೊಟ್ಟು ಮತ ಚಲಾಯಿಸ್ತಾರೆ. ಹುಣಸಗಿ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಶಾಸಕ ರಾಜಾ ವೆಂಕಟಪ್ಪ ನಾಯಕರ ಮಗ ರಾಜಾ ವೇಣುಗೋಪಾಲ ನಾಯಕ ಸೋತಾಗಿನಿಂದಲೇ ವೆಂಕಟಪ್ಪ ನಾಯಕರ ವರ್ಚಸ್ಸು ಕುಂದುತ್ತಾ ಬಂತು. ದಿನೇ ದಿನೇ ಕುಟುಂಬ ರಾಜಕಾರಣದಿಂದ ವೆಂಕಟಪ್ಪರ ವರ್ತನೆಯಿಂದ ಜನ ಬೇಸತ್ತಿದ್ದು, ಎಲ್ಲಾ  ಸ್ಥಳೀಯ ಸಂಸ್ಥೆಗಳು ಬಿಜೆಪಿ ಪಾಲಾಗಿರೋದು ನೋಡಿದ್ರೆ ಕಾಂಗ್ರೆಸ್ ಗೆ ನೆಲೆ ಕಡಿಮೆ ಆಗ್ತಾ ಇದೆ ಅೞಕತಾ ಗೊತ್ತಾಗ್ತಿದೆ.

ಸುರಪುರ ಸಂಸ್ಥಾನದ ಶಾಸಕರಾಗೋ ಅರ್ಹತೆ ಇರಬೇಕು ಅಂದ್ರೆ ಸಾರ್ವಜನಿಕ ರೊಟ್ಟಿಗೆ ಬೆರೆಯಬೇಕು. ಮತದಾರರ ಕುಂದುಕೊರತೆಗಳಿಗೆ ಸ್ಪಂದಿಸಬೇಕು. ರಾಜಾ ವೆಂಕಟಪ್ಪ ನಾಯಕ ಹಿರಿಯ ರಾಜಕಾರಣಿ ತನ್ನ ಅನುಭವವನ್ನು ಧಾರೆ ಎರೆದು ಕೊಟುಂಬದವರನ್ನು ದೂರ ಇಟ್ಟು ತಮ್ಮೆಲ್ಲಾ ಹಿರಿತನವನ್ನು ಅಭಿವೃದ್ಧಿ ಕಡೆ ಕೊಟ್ಟಿದ್ರೆ ನಿಜವಾಗ್ಲೂ ಮತ್ತೊಮ್ಮೆ ಆಯ್ಕೆಯಾಗ್ತಿದ್ರು. ಆದ್ರೆ ಪರಿಸ್ಥಿತಿ ಬೇರೆ ಇದೆ ರಾಜೂ ಗೌಡ ಬದಲಾಗಿದ್ದಾರೆ. 2008ರ ಎಲ್ಲಾ ವರ್ಚಸ್ಸು ಮೈ ಗೂಡಿಸಿಕೊಂಡಿದ್ದಾರೆ. ಸ್ತಳೀಯ ಸಂಸ್ಥೆಗಳಲ್ಲಿ ಭರ್ಜರಿ ಜಯಗಳಿಸಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಅಂತಾ ಕ್ಷೇತ್ರದಲ್ಲೇ ಬೀಡು ಬಿಟ್ಟಿದ್ದಾರೆ. ಕ್ಷೇತ್ರದ ಎಲ್ಲಾ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಕ್ಷೇತ್ವನ್ನು ಅಭಿವೃದ್ಧಿಯಗಗನಕ್ಕೆ ಏರಿಸಬೇಕಾಗಿದೆ.ಹಾಗಾಗಿ ಮತದಾರರು ಅವಕಾಶ ಕೊಟ್ಟರೂ ಸದುಪಯೋಗ ಪಡಿಸಿಕೊಳ್ಳದ ಶಾಸಕರನ್ನು ಈ ಬಾರಿ ಗೆಲ್ಲಿಸೋದು ಡೌಟ್ ಅಂತಿದ್ದಾರೆ ಇಲ್ಲಿನ ನಾಡಿಮಿಡಿತ ಬಲ್ಲ ರಾಜಕೀಯ ಪರಿಣಿತರು.