ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳ ಬೃಹತ್‌ ಪ್ರತಿಭಟನೆ
ಫ್ರೀಡಂಪಾರ್ಕ್​ನಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನೆ
ಧರಣಿ ಸ್ಥಳದಲ್ಲಿ ಮಹಿಳೆಯೊಬ್ಬರು ಅಸ್ವಸ್ಥ, ಆಸ್ಪತ್ರೆಗೆ ರವಾನೆ
ಕನಿಷ್ಠ ಕೂಲಿ, ಸಮಾನ ವೇತನ, ಕೆಲಸ ಖಾಯಂಗೆ ಆಗ್ರಹಿಸಿ ಪ್ರೊಟೆಸ್ಟ್​
ಧರಣಿ ಸ್ಥಳದಲ್ಲಿ ಜಮಾಯಿಸಿರುವ ಸಾವಿರಾರು ಕಾರ್ಮಿಕರು
ನೂರಾರು ಸಂಖ್ಯೆಯಲ್ಲಿ ಆಟೋ ಚಾಲಕರೂ ಧರಣಿಗೆ ಸಾಥ್

ಓರ್ವ ಮಹಿಳೆ ಅಸ್ವಸ್ಥ
==========

ಕನಿಷ್ಠ ಕೂಲಿ, ಕೆಲಸ ಖಾಯಂ ಹಾಗೂ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಳನ್ನು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಬೆಂಗಳೂರಿನಲ್ಲಿ ಬೃಹತ್​​ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಮೆಜೆಸ್ಟಿಕ್ ಬಳಿಯ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಪ್ರತಿಭಟನಾ ಱಲಿ ಆರಂಭವಾಗಿದ್ದು, ಸಾರಿಗೆ ನೌಕರರು, ಅಂಗನವಾಡಿ, ಬಿಸಿಯೂಟ, ಪಂಚಾಯ್ತಿ, ಕಟ್ಟಡ ಕಾರ್ಮಿಕರು, ದಿನಗೂಲಿ ನೌಕರರು, ಹಾಗೂ ಆಟೋ ಚಾಲಕರು ಸೇರಿದಂತೆ ವಿವಿಧ ವಲಯದ ಸಾವಿರಾರು ಕಾರ್ಮಿಕರು ಪಾಲ್ಗೊಂಡಿದ್ದಾರೆ. ಫ್ರೀಡಂ ಪಾರ್ಕ್​ವರೆಗೆ ಈ ಱಲಿ ನಡೆಯಲಿದ್ದು, ಆನಂದ್ ರಾವ್ ಸರ್ಕಲ್ ನಿಂದ ಕೆ.ಆರ್​ ಸರ್ಕಲ್​ವರಗಿನ ಶೇಷಾದ್ರಿ ರೊಡ್ ಸಂಪೂರ್ಣ ಬಂದ್ ಆಗಿದೆ. ಹಿಗಾಗಿ ವಾಹನ ಸವಾರರು ಪಡಿಪಾಟಲು ಪಡ್ತಿದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here