ಈ ಮಹಿಳಾ ಸಿಬ್ಬಂದಿಗಳ ಗೋಳು ಹೇಳತೀರದು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಬಿತ್ತು ಏಟು

ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ‌ ಮಾಡುತ್ತಿದ್ದ ಸುಮಾರು 90 ಮಹಿಳಾ ಸಿಬ್ಬಂದಿಗಳನ್ನ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಡಳಿತ ಮಂಡಳಿ ಕೆಲಸದಿಂದ ತೆಗೆಯಲಾಗಿದೆ. ಇದರಿಂದ ಈ ಕಾರ್ಮಿಕರ‌ ಬದುಕು ಬೀದಿಗೆ ಬಿದ್ದಿದೆ.

 

2008 ರಲ್ಲಿ ಸಾಯಿ ಸೆಕ್ಯೂರಿಟಿ ಎಜೆನ್ಸಿ ಮೂಲಕ ಇವರನ್ನ ನೇಮಕ ಮಾಡಿಕೊಳ್ಳಲಾಗಿತ್ತು. ಹೀಗಾಗಿ ನಮಗೆ ನ್ಯಾಯ ಬೇಕು, ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ ತೊಂಬತ್ತನೇ ದಿನಕ್ಕೆ ಕಾಲಿಟ್ಟಿದೆ.. ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಚತಾ, ವಾಡ್೯ ಬಾಯ್ ಸೇರಿದಂತೆ ವಿವಿಧ ಡಿ ಗ್ರೂಪ್‌ ಹುದ್ದೆಗಳಲ್ಲಿ ಕೆಲಸ‌ ಮಾಡುತ್ತಿದ್ದ ಇವರೆಲ್ಲರಿಗೆ ಸಾಯಿ ಸೆಕ್ಯೂರಿಟಿ ಎಜೆನ್ಸಿ ಸರಿಯಾಗಿ ಸಂಬಳ ಕೂಡ ಇದುವರೆಗೆ ನೀಡಿಲ್ಲ‌‌.

ಅಲ್ಲದೇ ಮೂರು ಸಲ ಸೆಕ್ಯೂರಿಟಿ ಎಜೆನ್ಸಿ ನಂತರ ಮೂರು ಎಜೆನ್ಸಿಗಳು ಬದಲಾದರು ಸಹ ಇದುವರೆಗೆ ಇವರನ್ನ ಕೆಲಸದಿಂದ ತೆಗೆದಿರಲಿಲ್ಲ, ಆದರೆ ಮೂರು ತಿಂಗಳ ಹಿಂದೆ 90 ಹೊರಗುತ್ತಿಗೆ ಮಹಿಳಾ ಸಿಬ್ಬಂದಿಗಳನ್ನ ಕೆಲಸದಿಂದ ತೆಗೆದು, ಹೊಸದಾಗಿ ತಮಗೆ ಬೇಕಾದ ಸಿಬ್ಬಂದಿಗಳನ್ನ ನೇಮಕ‌ಮಾಡಿಕೊಳ್ಳಲಾಗಿದೆ. ಇದರಿಂದ ಈ ಹಿಂದಿನಿಂದ ಇದೆ ಕೆಲಸವನ್ನ ನಂಬಿ ಉಪಜೀವನ ಮಾಡುತ್ತಿದ್ದ 90 ಮಹಿಳೆಯರ ಬದುಕು ಬೀದಿಗೆ ಬಿದ್ದಿದೆ‌. ಕೆಲವರಿಗೆ ಐದು ತಿಂಗಳ ವೇತನ ನೀಡಿಲ್ಲ, ಇನ್ನು ಕೆಲವರಿಗೆ ಎಂಟು ತಿಂಗಳ ವೇತನ ನೀಡಿಲ್ಲ.

ಇವೆಲ್ಲ ಸಮಸ್ಯೆಗಳ‌ ಮಧ್ಯೆ ಕೆಲಸದಿಂದ ತೆಗೆದಿದ್ದರಿಂದ ಬದುಕು ಅತಂತ್ರವಾಗಿದೆ. ಹೀಗಾಗಿ ನಮಗೆ ನ್ಯಾಯ ಬೇಕು ಅಂತಾ ಜಿಲ್ಲಾಸ್ಪತ್ರೆ ಮುಂದೆ ನಡೆಸುತ್ತಿರುವ ಧರಣಿ ಸತ್ಯಾಗ್ರಹ ತೊಂಬತ್ತನೇ ದಿನಕ್ಕೆ ಕಾಲಿಟ್ಟರು ಸಹ ಇದುವರೆಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ.. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕ ಹೋರಾಟಗಾರ ಮಾಜಿ ಕಾರ್ಮಿಕ ಸಚಿವ ಎಸ್ ಕೆ ಕಾಂತಾ, ಜಿಲ್ಲಾಸ್ಪತ್ರೆಯ ಅಧಿಕ್ಷಕರ ವಿರುದ್ದ ಅವ್ಯವಹಾರದ ಆರೋಪ ಮಾಡಿದ್ದಾರೆ. ಕೂಡಲೇ ಅವರನ್ನ ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳದಿದ್ದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ‌ ನೀಡಿದ್ದಾರೆ‌‌..