ಅಳಿಯನೇ ಅತ್ತೆಯನ್ನು ಕೊಂದನಾ?

ಬೆಂಗಳೂರಿನ ಚಾಮರಾಜಪೇಟೆಯಲ್ಲಿ‌ ಒಂಟಿ ಮಹಿಳೆಯ ಬರ್ಬರ ಹತ್ಯೆ ನಡೆದಿದೆ. 50 ವರ್ಷದ ವಿಜಯ ಕೊಲೆಯಾದ ಮಹಿಳೆ. ಇವ್ರು ಮೂಲತಃ ಮಂಗಳೂರು ಮೂಲದವರಾಗಿದ್ದು, ಚಾಮರಾಜಪೇಟೆಯಲ್ಲಿ ಬ್ಯೂಟಿ ಪಾರ್ಲರ್ ಅಂಗಡಿ ನಡೆಸಿಕೊಂಡಿದ್ದರು.

ad


 

ಚಿನ್ನ ಮತ್ತು ಹಣವನ್ನ ಇವರು ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದು, ದತ್ತು ಮಗಳು ಸೋನಾಳ ಗಂಡನೇ ಈ ಕೊಲೆ ಮಾಡಿರಬಹುದೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಪೊಲೀಸರು ಸೋನಾಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂದ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿದೆ.