ಭಾರತದ ಮೊಟ್ಟಮೊದಲ ಬುಲೆಟ್​ ರೈಲು ಯೋಜನೆಗೆ ಇವತ್ತು ಭೂಮಿ ಪೂಜೆ  ಪ್ರಧಾನಿ ನರೇಂದ್ರ ಮೋದಿ ಜೊತೆ ಜಪಾನ್​ ಪ್ರಧಾನಿಯಿಂದ ಅಡಿಗಲ್ಲು  ಅಹ್ಮದಾಬಾದ್​ ಟು ಮುಂಬೈ ಸಂಪರ್ಕಿಸುವ 508 ಕಿ.ಮೀ ಮಾರ್ಗದ ಬುಲೆಟ್​ ರೈಲು  27 ಕಿ.ಮೀ ಸುರಂಗ ಮಾರ್ಗದಲ್ಲಿ ಸಂಚರಿಸುವ ಬುಲೆಟ್​ ರೈಲು  ಆ ಪೈಕಿ 7 ಕಿ.ಮೀ ಸುರಂಗ ಮಾರ್ಗ ಸಮುದ್ರದ ಅಡಿಯಲ್ಲಿ ಇರಲಿದೆ  ಬುಲೆಟ್​ ರೈಲು ಯೋಜನೆಗೆ ಒಟ್ಟು 1.1 ಲಕ್ಷ ಕೋಟಿ ಅಂದಾಜು ವೆಚ್ಚ  ಯೋಜನೆಗೆ 88 ಸಾವಿರ ಕೋಟಿ ಸಾಲ ನೀಡಲಿರುವ ಜಪಾನ್  ಗಂಟೆಗೆ 320 ಕಿ.ಮೀ ವೇಗದಲ್ಲಿ ಸಂಚರಿಸುವ ಬುಲೆಟ್​ ರೈಲು  ಜಸ್ಟ್​ 2 ಗಂಟೆ 7 ನಿಮಿಷ ಅವಧಿಯಲ್ಲೇ ಮುಂಬೈ ಟು ಅಹ್ಮದಾಬಾದ್​ ಪಯಣ  ಈಗಿರುವ ಎಕ್ಸ್​ಪ್ರೆಸ್​ ರೈಲುಗಳಲ್ಲಿ ಇದೇ ಪ್ರಯಾಣಕ್ಕೆ 9 ಗಂಟೆ ಸಮಯ.

 

ಜಪಾನ್​ ಪ್ರಧಾನಿ ಶಿಂಜೋ ಅಬೆ ಐದು ವರ್ಷದಲ್ಲಿ ಪ್ರಧಾನಿ ಮೋದಿಯವರನ್ನು 7ನೇ ಬಾರಿ ಭೇಟಿಯಾಗಿದ್ದಾರೆ. ಇಂದು ಶಿಂಜೋ ಅಬೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಬುಲೆಟ್​ ರೈಲು ಯೋಜನೆಗೆ ಪ್ರಧಾನಿ ಮೋದಿ ಜತೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಅಹ್ಮದಾಬಾದ್​ನಲ್ಲಿ ಬುಲೆಟ್​ ರೈಲು ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಹ್ಮದಾಬಾದ್​ನ ರೈಲ್ವೆ ಸ್ಟೇಷನ್​​ ಸೇರಿದಂತೆ ನಗರದಾದ್ಯಂತ ಪೊಲೀಸ್​ ಸರ್ಪಗಾವಲನ್ನ ಹಾಕಲಾಗಿದೆ. ಇನ್ನು ಗುಜರಾತ್​​ನ ಗಾಂಧಿನಗರದಲ್ಲಿ ನಡೆಯಲಿರುವ 12ನೇ ಭಾರತ ಮತ್ತು ಜಪಾನ್‌ ವಾರ್ಷಿಕ ಶೃಂಗಸಭೆಯಲ್ಲಿ ಶಿಂಜೋ ಅಬೆ ಮತ್ತು ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಏಷ್ಯಾದ ಎರಡು ಆರ್ಥಿಕ ಬಲಾಡ್ಯ ರಾಷ್ಟ್ರಗಳ ಮಧ್ಯೆ ಸಹಕಾರವನ್ನು ಇನ್ನಷ್ಟು ಬಲಪಡಿಸುವುದು ಅಬೆ ಪ್ರವಾಸದ ಉದ್ದೇಶವಾಗಿದೆ.
=======
ದೇಶಕ್ಕೆ ಸ್ವಾತಂತ್ರ್ಯ ಬಂದು 2022ರ ಆಗಸ್ಟ್ 15ಕ್ಕೆ 75 ವರ್ಷ ತುಂಬುತ್ತದೆ. ಆ ಮಹತ್ವದ ದಿನದಂದೇ ದೇಶದ ಮೊದಲ ಬುಲೆಟ್ ರೈಲು ಸಂಚಾರ ಆರಂಭಿಸಲಿದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.
======
ಇನ್ನು ನಿನ್ನೆ ಅಹಮದಾಬಾದ್​ನಲ್ಲಿ ಪ್ರಧಾನಿ ಮೋದಿ ಜತೆ ಜಪಾನ್ ಪ್ರಧಾನಿ ಅಬೆ ದಂಪತಿ 8 ಕಿ.ಮೀ. ಜಂಟಿ ರೋಡ್ ಶೋ ನಡೆಸಿ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ರು. ಆಶ್ರಮದಲ್ಲಿ ಪ್ರಧಾನಿ ಮೋದಿ ಹಾಗೂ ಅಬೆ ದಂಪತಿ ಗಾಂಧೀಜಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ್ರು. ಈ ವೇಳೆ ಆಶ್ರಮದ ಬಗ್ಗೆ ವಿವರಣೆ ನೀಡಿದ್ರು. 3ಕೋತಿಗಳ ಕುರಿತು ಗಾಂಧೀಜಿಯವ್ರ ಸಂದೇಶ ಕುರಿತು ಅಬೆ ದಂಪತಿಗೆ ಮೋದಿ ವಿವರಣೆ ನೀಡಿದ್ರು
======

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here