ಮಹಾ ಸಮಸ್ಯೆಯಾಗಲಿದೆ ಮಹದಾಯಿ !! ಗೋವಾ ಡ್ರಾಮಾಕ್ಕೆ ತತ್ತರಿಸಲಿದೆ ಉತ್ತರಕರ್ನಾಟಕ !!

ಕರ್ನಾಟಕದಲ್ಲಿ ಚುನಾವಣೆ ಮುಗಿಯುವವರೆಗೆ ಮಹದಾಯಿ ಬಗ್ಗೆ ಕರ್ನಾಟಕದ ಜೊತೆ ಮಾತುಕತೆ ನಡೆಸದಿರಲು ಗೋವಾ ನಿರ್ಧರಿಸಿದೆ. ಗೋವಾ ಬಿಜೆಪಿ ಮಿತ್ರಪಕ್ಷವಾಗಿರುವ ಗೋವಾ ಫಾರ್ವರ್ಡ್ ಬ್ಲಾಕ್ ಈ ಮಾತುಕತೆಯನ್ನು ವಿರೋಧಿಸಿದ್ದು, ಅದಕ್ಕೆ ಗೋವಾ ಸಿಎಂ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಮಹದಾಯಿ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅತ್ತ ಹಾವು ಸಾಯ್ಬಾರ್ದು, ಇತ್ತ ಕೋಲು ಮುರಿಬಾರ್ದು ಅನ್ನೋ ರೀತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದು ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನಿನ್ನೆ ಗೋವಾ ಸಿಎಂಗೆ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ.

 

 

ಸರ್ಕಾರದ ಮುಖ್ಯಸ್ಥನಾಗಿ ನಾನು ಮಹದಾಯಿ ವಿಚಾರ ಸಂಬಂಧ ಹಲವು ಪತ್ರ ಬರೆದಿದ್ದೆ. ಆದ್ರೆ ನೀವು ಸರ್ಕಾರದ ಪತ್ರಕ್ಕೆ ಸರಿಯಾಗಿ ಸ್ಪಂದಿಸಿಲ್ಲ. ತಾವು ಬಿಎಸ್​ವೈಗೆ ಮಹದಾಯಿ ಸಮಸ್ಯೆ ಪರಿಹರಿಸುವ ಬಗ್ಗೆ ಪತ್ರ ಬರೆದ್ದೀರಿ. ಮಹದಾಯಿ ನ್ಯಾಯಾಧಿಕರಣದ ನಿರ್ದೇಶನದಂತೆ ಸಂಧಾನ ಸೂತ್ರದಡಿ ವಿವಾದ ಬಗೆಹರಿಸಿಕೊಳ್ಳಲು ಕರ್ನಾಟಕ ಸಿದ್ಧವಿದೆ. ಈ ಭೇಟಿಗೆ ತಾವು ಆದಷ್ಟು ಶೀಘ್ರ ದಿನಾಂಕ ನಿಗದಿ ಮಾಡಬೇಕು. ಮಹದಾಯಿ ಬಗ್ಗೆ ನಾವು ಚರ್ಚೆಗೆ ಸಿದ್ಧರಿದ್ದೇವೆ ಅಂತಾ ಪತ್ರ ಬರೆದಿದ್ದಾರೆ.

 

ಆದರೆ ಗೋವಾ ಮಾತ್ರ ಕೇವಲ ಬಿಎಸ್ ವೈಗೆ ಪತ್ರ ಬರೆದು ನಾಟಕವಾಡುತ್ತಿದೆ. ಕುಡಿಯುವ ನೀರು ಯೋಜನೆಗೆ ನಮ್ಮ ವಿರೋಧ ಇರುವುದಿಲ್ಲ ಎಂದಿರುವ ಮನೋಹರ ಪರಿಕ್ಕರ್, ಮಾತುಕತೆಯ ದಿನಾಂಕವನ್ನು ನಿಗಧಿಗೊಳಿಸಿಲ್ಲ. ಮೂಲಗಳ ಪ್ರಕಾರ ಚುನಾವಣೆ ಮುಗಿಯೋವರೆಗೆ ಈ ಪತ್ರ ಹೊರತುಪಡಿಸಿ ಬೇರಾವುದೇ ಮಾತುಕತೆ ಪ್ರಕ್ರಿಯೆಗಳ ನಡೆಯಲ್ಲ.