ಲಿಂಗಾಯತ ಪ್ರತ್ಯೇಕ ಧರ್ಮ‌ವಿಚಾರಕ್ಕೆ ಸಂಬಂಧಿಸಿತೆ ಚರ್ಚೆ ನಡೆಸಲು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ನಿವಾಸದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಸಚಿವ ಈಶ್ವರ್ ಖಂಡ್ರೆ , ಶ್ಯಾಮನೂರು ಶಿವಶಂಕರಪ್ಪ ,ತಿಪ್ಣಣ್ಣ ಸೇರಿದಂತೆ ವಿವಿಧ ಮುಂಖಡರು ಭಾಗಿಯಾಗಿದ್ದಾರೆ. ಲಿಂಗಾಯಿತ ಧರ್ಮವೋ ಅಥವಾ ವೀರಶೈವ ಲಿಂಗಾಯಿತ ಧರ್ಮ ಎಂದು ಹೆಸರಿಡಬೇಕೋ ಎಂಬ ಬಗ್ಗೆ ಕಾಂಗ್ರೆಸ್​ನ ಲಿಂಗಾಯತ ನಾಯಕರ ಮಧ್ಯೆ ಇರುವ ಗೊಂದಲ ನಿವಾರಣೆಗಾಗಿ ಈ ಸಭೆ ನಡೆಯುತ್ತಿದೆ.
ಮಾಜಿ ಸಚಿವೆ ರಾಣೀ ಸತೀಶ್ ,ಬಸವಾಜ್ ಹೊರಟ್ಟಿ , ನಿವೃತ್ತ ಐಎಎಸ್​ ಅಧಿಕಾರಿ ಜಾಮ್​ದಾರ್​,ಬಿ.ಆರ್ .ಪಾಟೀಲ್, ವಿನಯ್ ಕುಲಕರ್ಣಿ ಕೂಡಾ ಸಭೆಯಲ್ಲಿದ್ದಾರೆ
====

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here