ಲಿಂಗಾಯತ ಸ್ವತಂತ್ರ ಧರ್ಮ ಸಮರಕ್ಕೆ ಕ್ಷಣಕ್ಕೊಂದು ಟ್ವಿಸ್ಟ್​ಗಳು ಸಿಗುತ್ತಲೇ ಇವೆ. ಸಿದ್ದಗಂಗಾ ಶ್ರೀಗಳ ಹೇಳಿಕೆ ಸಂಬಂಧ ಇವತ್ತು ಬೆಂಗಳೂರಿನಲ್ಲಿ ಲಿಂಗಾಯತ ಮುಖಂಡರು ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಸಚಿವ ವಿನಯ್​​ ಕುಲಕರ್ಣಿ, ಶಾಸಕ ಬಿ.ಆರ್​​.ಪಾಟೀಲ್​​​, ಎಂಎಲ್​ಸಿ ಬಸವರಾಜ ಹೊರಟ್ಟಿ, ನಿವೃತ್ತ ಐಎಎಸ್​ ಅಧಿಕಾರಿ ಜಾಮದಾರ್​​​ ಸೇರಿದಂತೆ ಹಲವರು ಭಾಗಿಯಾಗಿದ್ರು. ಈ ವೇಳೆ ಮಾತ್ನಾಡಿದ ಮುಖಂಡರು ಎಂ.ಬಿ.ಪಾಟೀಲ್​ಗೆ ಈ ವಿಚಾರದಲ್ಲಿ ವೈಯಕ್ತಿಕ ಲಾಭವೇನೂ ಇಲ್ಲ. ಕಳೆದ ಎರಡು ದಿನಗಳ ಬೆಳವಣಿಗೆಯಿಂದ ನೊಂದಿದ್ದಾರೆ. ಶ್ರೀಗಳ ನಿಲುವಿನ ವಿಚಾರದಲ್ಲಿ ಕೆಲವರು ಗೊಂದಲ ಸೃಷ್ಟಿ ಮಾಡಿ ಪಾಟೀಲ್​​ ವಿರುದ್ಧ ಕುತಂತ್ರ ನಡೆಸುತ್ತಿದ್ದಾರೆ ಅಂದ್ರು.
======

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here