ಸಿದ್ದರಾಮಯ್ಯರಿಂದ “ಮಹಾ” ಮೋಸ !! ಧರ್ಮ ಅಂಗೀಕಾರಕ್ಕೆ ಮನಮೋಹನ್ ಸಿಂಗ್ ಅಡ್ಡಿ !!

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೇಂದ್ರ ಅಂಗೀಕಾರ ಸಾದ್ಯವಿಲ್ಲ ಎಂದು ಗೊತ್ತಿದ್ದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಅಂಗೀಕಾರ ನೀಡಿ ಮಹಾಮೋಸ ಮಾಡಿದ್ರಾ ?

ad


ಹೌದು ಎನ್ನುತ್ತದೆ 2013 ರಲ್ಲಿ ಯುಪಿಎ ಸರಕಾರದ ನಿಲುವು. ಮಹಾರಾಷ್ಟ್ರ ಸರಕಾರ 2013 ರಲ್ಲಿ ಲಿಂಗಾಯತ ಧರ್ಮ‌ಪ್ರತ್ಯೇಕದ ಮಹಾ ಶಿಫಾರಸ್ಸು ಮಾಡಿತ್ತು ! ಆದರೆ ಅದನ್ನು ಮನಮೋಹನ್ ಸಿಂಗ್ ಸರಕಾರ ತಿರಸ್ಕರಿಸಿತ್ತು. ಅಲ್ಲದೇ ಜನಗಣತಿ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ 2010ರಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು 2013ರಲ್ಲಿ ಯಪಿಎ ಸರ್ಕಾರ ತಿರಸ್ಕರಿಸಿತ್ತು. ಲಿಂಗಾಯತ ಸಮುದಾಯವು 4 ಕೋಟಿಗೂ ಅಧಿಕ ಸಂಖ್ಯೆಯ ಅನುಯಾಯಿಗಳನ್ನು ಒಳಗೊಂಡಿದ್ದು, ಬೌದ್ಧ, ಸಿಖ್ ಹಾಗೂ ಜೈನ ಧರ್ಮದ ಅನುಯಾಯಿಗಳಿಗಿಂತ ಅಧಿಕ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದೆ.

ಹೀಗಾಗಿ ಜಾತಿಗಣತಿ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮವನ್ನು ಸೂಚಿಸುವ ಪ್ರತ್ಯೇಕ ಕಾಲಂ, ಸಾಲು ಹಾಗೂ ಕೋಡ್ ಸಂಖ್ಯೆ ನಮೂದಿಸಿ, ಜನಗಣತಿಯ ಅರ್ಜಿ ನಮೂನೆ ಮುದ್ರಿಸುವಂತೆ ವೀರಶೈವ ಮಹಾಸಭಾ ಕೇಳಿಕೊಂಡಿತ್ತು. ಈ ಮನವಿಯನ್ನು ತಿರಸ್ಕರಿಸಿದ್ದ ಕಾಂಗ್ರೆಸ್ ನೇತೃತ್ವದ ಯಪಿಎ ಸರ್ಕಾರ ವೀರಶೈವ ಮತ್ತು ಲಿಂಗಾಯತ ಸಮುದಾಯವು ಹಿಂದೂ ಧರ್ಮದ ಒಂದು ಪಂಗಡ ಎಂದು ಹೇಳಿತ್ತು. ಕೇಂದ್ರದ ಗೃಹ ಕಚೇರಿಯ ಕೋರಿಕೆಯ ಮೇರೆಗೆ ಪರಿಶೀಲನೆ ನಡೆಸಿದ್ದ ಭಾರತೀಯ ರಿಜಿಸ್ಟ್ರಾರ್ ಜನರಲ್ ಕಚೇರಿಯು 2013ರ ನವೆಂಬರ್ 14ರಂದು `ವೀರಶೈವ ಮಹಾಸಭಾದ ಪ್ರತ್ಯೇಕ ಧರ್ಮ ಸ್ಥಾನಮಾನದ ಬೇಡಿಕೆಯು ಅತಾರ್ಕಿಕವಾದದ್ದು’ ಎಂದು ಅಭಿಪ್ರಾಯಪಟ್ಟಿತ್ತು.