ಲೈವ್ ಲೈನ್ ಲಂಚ !! ತಂತಿ ತೆರವಿಗೆ ನೋಟ್ ಶಾಕ್ ಟ್ರೀಟ್ಮೆಂಟ್ !! EXCLUSIVE ವಿಡಿಯೋ !!

Live Bribe: Bessam Assistant Ex-Executive Engineer demanded 50,000 bribe
Live Bribe: Bescom Assistant Ex-Executive Engineer demanded 50,000 bribe

ಖಾಲಿ ನಿವೇಶನದಲ್ಲಿರುವ ವಿದ್ಯುತ್ ತಂತಿಗಳನ್ನು ತೆಗೆಯಲು ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಅವರ ಸಿಬ್ಬಂಧಿಗಳು ಲಂಚ ತೆಗೆದುಕೊಂಡಿರುವ ಎಕ್ಸಕ್ಲೋಸೀವ್ ವಿಡಿಯೋ ಬಿಟಿವಿಗೆ ಲಭ್ಯವಾಗಿದೆ.

ad


ಜೆಇ. ನಾಯಕ್ ಹಾಗೂ ಅವರ ಸಿಬ್ಬಂದಿಗಳಾದ ಬೋರಯ್ಯ ಹಾಗೂ ಕೃಷ್ಣಮೂರ್ತಿ ಎಂಬುವರು ಎಲೆಕ್ಟ್ರೀಷಿಯಲ್ ಕಂಟ್ರಾಕ್ಟರ್ ರಾಜನ್ ಎಂಬುವರಿಂದ ಖಾಸಗಿ ಹೋಟೆಲ್ ನಲ್ಲಿ ಲಂಚ ಪಡೆದಿದ್ದಾರೆ.ಬೆಂಗಳೂರಿನ ಗೊಟ್ಟಿಗೆರೆ ಬಳಿ ಇರುವ ಲೇಔಟ್ ನಲ್ಲಿ ಮನೆ ಕಟ್ಟಲು ನಾಗರಾಜು ಎಂಬುವರು ತಯಾರಿ ಮಾಡಿಕೊಂಡಿದ್ರು. ಈ ವೇಳೆ ತಮ್ಮ ನಿವೇಶನದ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಗಳನ್ನು ತೆಗೆಯಲು ಜೆಇ ನಾಯಕ್ ಬಳಿ ಮನವಿ ಮಾಡಿಕೊಂಡಿದ್ರು. ಆದ್ರೆ ನಾಯಕ್ ಎಲೆಕ್ಟ್ರೀಷಿಯನ್ ಕಂಟ್ರಾಕ್ಟರ್ ರಾಜನ್ ಬಳಿ 50 ಸಾವಿರ ಹಣಕ್ಕೆ ಡಿಮ್ಯಾಂಡ್ ಮಾಡಿದ್ರು.

ಈ ಹಿನ್ನೆಲೆಯಲ್ಲಿ ಈಗಾಗಲೇ 10 ಸಾವಿರ ಹಣವನ್ನು ಮುಂಗಡವಾಗಿ ಕೊಟ್ಟಿದ್ದ ರಾಜನ್, ಇನ್ನು ಉಳಿದ ಲಂಚದ ಹಣವನ್ನು ಖಾಸಗಿ ಹೋಟೆಲ್ ನಲ್ಲಿ ನಾಯಕ್ ಹಾಗೂ ಅವರ ಸಿಬ್ಬಂದಿಗಳು ಪಡೆಯುವ ಎಕ್ಸ್ ಕ್ಲೂಸಿವ್ ದೃಶ್ಯಾವಳಿ ಬಿಟಿವಿ ಗೆ ಲಭ್ಯವಾಗಿದೆ.