ಇಷ್ಟಕ್ಕೂ ಲೋಕಾಯುಕ್ತರಿಗೆ ಚಾಕುವಿನಿಂದ ಇರಿದ ತೇಜರಾಜ್​ ಶರ್ಮಾ ಯಾರು ಗೊತ್ತಾ?

Lokayukta Justice Issue: MLA Sogadu Shivanna Visit's to Accused Person House.
Lokayukta Justice Issue: MLA Sogadu Shivanna Visit's to Accused Person House.

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಮೇಲೆ ನಡೆದಿರುವ ಚಾಕು ಇರಿತ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದೆ.

ಲೋಕಾಯುಕ್ತ ಕಚೇರಿಯಲ್ಲೇ ಲೋಕಾಯುಕ್ತರ ಮೇಲೆ ಹಲ್ಲೆ ನಡೆಸಿರೋದನ್ನು ಗಮನಿಸಿದ್ರೆ ಆರೋಪಿ ಮನಸ್ಥಿತಿ ಹೇಗಿತ್ತು ಅನ್ನುವ ಪ್ರಶ್ನೆ ಉದ್ಭವವಾಗಿದ್ದು, ಆತ ಭ್ರಷ್ಟಾಚಾರದಿಂದ ಬೇಸತ್ತು ಹೋಗಿದ್ದ ಅನ್ನುವ ಮಾತು ಕೇಳಿಬಂದಿದೆ. ಇಷ್ಟಕ್ಕೂ ಈ ಆರೋಪಿ ಯಾರು ಅನ್ನುವುದನ್ನು ಗಮನಿಸೋಣ.ನ್ಯಾಯಮೂರ್ತಿಯವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಆರೋಪಿ ತೇಜೇಶ್​ ಶರ್ಮಾ ಅಲಿಯಾಸ್​ ತೇಜ್ ರಾಜ್ ಶರ್ಮಾ. ಮೂಲತಃ ರಾಜಸ್ಥಾನಮೂಲದವನಾಗಿದ್ದು, ಪ್ರಸ್ತುತ ತುಮಕೂರಿನ ಎಸ್.ಎಸ್.ಪುರಂ ನಿವಾಸಿಯಾಗಿದ್ದ. ಶಾಲಾ-ಕಾಲೇಜುಗಳಿಗೆ ಫರ್ನಿಚರ್ಸ್​ ಸಪ್ಲೈ ಮಾಡುವ ವ್ಯವಹಾರ ಮಾಡುತ್ತಿದ್ದ ತೇಜೇಶ್ ಶರ್ಮಾ, ಅತಿಯಾಗಿ ದೇವರನ್ನು ಪೂಜಿಸುತ್ತಿದ್ದ ತೇಜರಾಜ್​ ಶರ್ಮ್​, ದೇವರನ್ನು ಅತಿಯಾಗಿ ನಂಬುತ್ತಿದ್ದ.

 

ಹೆಚ್ಚಾಗಿ ಮುಸ್ಲಿಂ ಸ್ನೇಹಿತರ ಜೊತೆ ಓಡಾಡುತ್ತಿದ್ದ ಆತ ಬೇರೆ ಯಾರೊಂದಿಗೂ ಅಷ್ಟೊಂದು ಬೆರೆಯುತ್ತಿರಲಿಲ್ಲ. ಇತ್ತೀಚಿಗೆ ನಾಲ್ಕು ತಿಂಗಳ ಹಿಂದೆಯಷ್ಟೇ ಆತ ಮನೆ ಖಾಲಿ ಮಾಡಿ ಹೋಗಿದ್ದ ಅಂತಾರೆ ಮನೆ ಮಾಲೀಕ ಶಶಿಶೇಖರ್​.  ಈಗಾಗಲೇ ಎರಡು ಭಾರಿ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ್ದ ತೇಜ್​ರಾಜ್​ ಶರ್ಮ, ತಾನು ಈಗಾಗಲೇ ನೀಡಿರುವ 18 ಕೇಸ್​ ನಲ್ಲಿ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ ಅನ್ನೋದನ್ನು ಅವರ ಗಮನಕ್ಕೆ ತಂದಿದ್ದ.

ಆದರೇ ಅವಾಗಲೂ ಯಾವುದೆ ಕ್ರಮವಾಗದೇ ಇರೋದರಿಂದ ಇವತ್ತು ತುಸು ಸಿಟ್ಟಿನಿಂದಲೇ ಲೋಕಾಯುಕ್ತ ಕಚೇರಿಗೆ ಬಂದಿದ್ದ ಎನ್ನಲಾಗಿದೆ.
ತುಂಬಾ ಮನವಿ ಮಾಡಿಕೊಂಡು ಲೋಕಾಯುಕ್ತ ಚೆಂಜರ್​ಗೆ ತೆರಳಿದ್ದ ತೇಜ್​ ರಾಜ್​ ಶರ್ಮ್​ ಅಲ್ಲಿ ಧೀಡಿರ ಚಾಕು ತೆಗೆದು ಲೋಕಾಯುಕ್ತರಿಗೆ ಚುಚ್ಚಿದ್ದಾನೆ. 6 ಭಾರಿ ಚುಚ್ಚಿರುವ ಆರೋಪಿ ಚಾಕು ಮುರಿದಿದ್ದರಿಂದ ಸುಮ್ಮನಾಗಿದ್ದಾನೆ. ತಕ್ಷಣ ಲೋಕಾಯುಕ್ತ ನ್ಯಾಯಮೂರ್ತಿಗಳು ಕಿರುಚಿದ್ದಾರೆ. ತಕ್ಷಣ ಆರೋಪಿಯನ್ನು ಪೊಲೀಸರು ಹಿಡಿದುಕೊಂಡಿದ್ದಾರೆ. ಒಟ್ಟಿನಲ್ಲಿ ಭ್ರಷ್ಟಾಚಾರ ಸಹಿಸದ ತೇಜ್​ರಾಜ್ ಶರ್ಮಾ ಇದೀಗ ಲೋಕಾಯುಕ್ತರ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರೋದು ಮಾತ್ರ ದುರಂತವೇ ಸರಿ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here