ನಗರದಲ್ಲೂ ತಲೆಎತ್ತಲಿದೆ ಟೈಂಮ್ಸ್​ ಸ್ವ್ಕೇರ್​!!

ಈಗಾಗಲೇ ಸಿಲಿಕಾನ ಸಿಟಿ ಬೆಂಗಳೂರು ಪ್ರವಾಸಿಗರ ಹಾಗೂ ಶಾಪಿಂಗ್ ಪ್ರಿಯರ ಫೆವರಿಟ್​ ತಾಣವಾಗಿದೆ. ಹೀಗಿರುವಾಗಲೇ ಇದೀಗ ಸಿಟಿಯನ್ನು ಇನ್ನಷ್ಟು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿ ಬೆಂಗಳೂರಲ್ಲೂ ಲಂಡನ್‌ ಮಾದರಿಯ ಟೈಮ್ಸ್ ಸ್ಕ್ವೇರ್ ನಿರ್ಮಿಸಲು ಚಿಂತನೆ ನಡೆಸಿದೆ.

ad


 ನ್ಯೂಯಾರ್ಕ್​​​, ಲಂಡನ್‌ ಮಾದರಿಯಲ್ಲೇ ಟೈಮ್ಸ್ ಸ್ಕ್ವೇರ್ ನಿರ್ಮಿಸಲು ನಗರಾಡಳಿತ ನಿರ್ಧರಿಸಿದ್ದು, ಉದ್ಯಾನನಗರಿಯಲ್ಲೂ ವಿದೇಶಿ ಮಾದರಿಯ ಬೃಹತ್ ವಾಣಿಜ್ಯ ಕಟ್ಟಡ ತಲೆ ಎತ್ತಲಿದೆ. ದೇಶ-ವಿದೇಶಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಸಾಹಸಕ್ಕೆ ಕೈ ಹಾಕಿದೆ.

ಬ್ರಿಗೇಡ್​ ರೋಡ್​ನಲ್ಲಿ ಈ ಟೈಮ್ಸ್​ ಸ್ವ್ಕೇರ್​ ನಿರ್ಮಿಸಲು ಚಿಂತನೆ ನಡೆದಿದ್ದು, ಈಗಾಗಲೇ ಡಿಪಿಆರ್​​ ಸಿದ್ದಪಡಿಸಲು ಬಿಬಿಎಂಪಿ ನಿರ್ಧರಿಸಿದೆ. ಈ ಟೈಮ್ಸ್​ ಸ್ವ್ಕೇರ್​ನಲ್ಲಿ ಬೃಹತ್ ಕಮರ್ಷಿಯಲ್​ ಮಳಿಗೆಗಳು, ಎಂಟರ್​​ಟೇನ್ಮೆಂಟ್​ ಸೆಂಟರ್​ ಹಾಗೂ ಪ್ರವಾಸಿಗರನ್ನು ಸೆಳೆಯಲು ಅಗತ್ಯವಿರುವ ಚಟುವಟಿಕೆಗಳನ್ನು ಕೈಗೊಳ್ಳಲು ಬಿಬಿಎಂಪಿ ಪ್ಲಾನ್​ ಮಾಡಿದೆ. ಒಟ್ಟಿನಲ್ಲಿ ನಗರವನ್ನು ಇನ್ನಷ್ಟು ಆಕರ್ಷಕವಾಗಿಸಲು ಬಿಬಿಎಂಪಿ ಸರ್ಕಸ್​ ನಡೆಸಿದೆ.