ಹಿಂದು ಹುಡುಗಿ ಮುಸ್ಲಿಂ ಯುವಕನ ಮೂರನೇ ಪತ್ನಿ- ರಾಜ್ಯದಲ್ಲಿ ಸದ್ದು ಮಾಡ್ತಿದೆ ಮತ್ತೊಂದು ಲವ್ ಜೆಹಾದ್ ಪ್ರಕರಣ

ಪ್ರೇಮಪಾಶದಲ್ಲಿ ಸಿಲುಕಿದ ಶಿವಮೊಗ್ಗ ಮೂಲದ ಹಿಂದು ಯುವತಿಯೊರ್ವಳು, ಮುಸ್ಲಿಂ ಯುವಕನ ಮೂರನೇ ಪತ್ನಿಯಾಗಿದ್ದಾಳೆ. ಆದರೇ ಯುವತಿ ಪೋಷಕರು ಇದನ್ನು ಲವ್ ಜೆಹಾದ್ ಎಂದಿದ್ದು, ಯುವತಿ ಮಾತ್ರ ನಾನು ಗಂಡನ ಮನೆಯಲ್ಲಿ ಸುಖವಾಗಿದ್ದೇನೆ ಎನ್ನುವ ಮೂಲಕ ಪೋಷಕರಿಗೆ ಉಲ್ಟಾ ಹೊಡೆದಿದ್ದಾಳೆ.

 ಶಿವಮೊಗ್ಗ ಮೂಲದ ಅನುಷಾ ಹೆಗಡೆ ಎಂಬಾಕೆ ಮೈಸೂರಿನಲ್ಲಿ ಇಂಜೀನಿಯರಿಂಗ್ ಓದುತ್ತಿದ್ದ ವೇಳೆ ಮೈಸೂರು ಮೂಲದ ಜಾವಿದ್ ಖಾನ್​​ ಎಂಬಾತ ಆಕೆಯನ್ನು ಪ್ರೀತಿಸಿದ್ದಾನೆ. ಈಗಾಗಲೇ ಜಾವೇದ್ ಖಾನ್ ಎರಡು ಮದುವೆಯಾಗಿ ಇಬ್ಬರಿಗೂ ಡಿವೋರ್ಸ್​ ನೀಡಿದ್ದು, ಅನುಷಾಳನ್ನು ಪ್ರೀತಿಸುವ ನಾಟಕವಾಡಿ ಮೂರನೇ ಮದುವೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಅಲ್ಲದೇ ಅನುಷಾಳಿಗೆ ಗಾಂಜಾ-ಅಫೀಮು ನಶೆ ಅಭ್ಯಾಸ ಮಾಡಿಸಿ ಅವಳನ್ನು ಜೀತಾದಾಳುವಿನಂತೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಅನುಷಾ ಪೋಷಕರು ಆರೋಪಿಸಿದ್ದಾರೆ. ಅಲ್ಲದೇ ಜಾವೇದ್​ ಗೆ ಈಗಾಗಲೇ ಎರಡು ವಿವಾಹವಾಗಿದ್ದು, ಅವರಿಬ್ಬರು ಆತನಿಂದ ದೂರವಾಗಿದ್ದಾರೆ. ಮೈಸೂರಿನ ನಫಿಸಾ ಎಂಬುವರನ್ನು ಮದುವೆಯಾಗಿ, ನಂತರ ವರದಕ್ಷಿಣೆ ಕಿರುಕುಳ ನೀಡಿದ್ದ ಜಾವೇದ್​ ನಂತರ ಕೋರ್ಟ್ ಹೊರಗೆ ಮದುವೆ ಮುರಿದುಕೊಂಡಿದ್ದ.

ಇದಲ್ಲದೇ ಸ್ವಂತ ಚಿಕ್ಕಮ್ಮನ ಮಗಳನ್ನು ಮದುವೆಯಾಗಿದ್ದ ಜಾವೇರ್​ ಆಕೆಗೂ ಕೈಕೊಟ್ಟಿದ್ದ. ನಂತರ ಅನುಷಾಳನ್ನು ಮದುವೆಯಾಗಿದ್ದ. ಅನುಷಾಳಿಗೆ ಮದುವೆ ಬಳಿಕ ಕಿರುಕುಳ ನೀಡುತ್ತಿದ್ದ ಜಾವೇದ್​ ಆಕೆಯನ್ನು ಮನೆಯಲ್ಲೇ ಕೂಡಿ ಹಾಕಿ ಹೋಗುತ್ತಿದ್ದ ಎನ್ನಲಾಗಿದೆ. ಇದರಿಂದ ನೊಂದ ಅನುಷಾ ಮೊನ್ನೆ ಶಿವಮೊಗ್ಗಕ್ಕೆ ಹೆತ್ತವರ ಬಳಿ ಬಂದಿದ್ದಾಳೆ. ಅಲ್ಲದೇ ಅನುಷಾ ಮಾನಸಿಕವಾಗಿಯೂ ನೊಂದಿದ್ದು, ಆಕೆಯನ್ನು ಮನೋವೈದ್ಯರ ಬಳಿಗೆ ಕರೆದೊಯ್ಯಲು ತಂದೆ ಸಿದ್ಧತೆ ನಡೆಸಿದ್ದ ವೇಳೆ ಮತ್ತೆ ಜಾವೆದ್ ಬಂದು ಮನವೊಲಿಸಿ ಕರೆದೊಯ್ದಿದ್ದಾನೆ.
ಇದೀಗ ಅನುಷಾ ಪೋಷಕರು ಮಗಳನ್ನು ವಾಪಸ ಕೊಡಿಸಬೇಕೆಂದು ಒತ್ತಾಯಿಸಿ ಅನುಷಾ ಪೋಷಕರು ಶಿವಮೊಗ್ಗ ಪೊಲೀಸರ ಮೊರೆ ಹೋಗಿದ್ದಾರೆ.

 

ಆದರೇ ಸಂಪೂರ್ಣ ಆರೋಪವನ್ನು ಅನುಷಾ ನಿರಾಕರಿಸಿದ್ದು, ನಾನು ನನ್ನ ಗಂಡನ ಜೊತೆ ಸುಖವಾಗಿದ್ದೇನೆ. ನನ್ನ ತಂದೆ-ತಾಯಿಯೇ ನನಗೆ ವಿರೋಧವಾಗಿದ್ದಾರೆ. ತಾಯಿಯೆ ನನಗೆ ಅಬಾರ್ಷನ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾಳೆ. ಒಟ್ಟಿನಲ್ಲಿ ಇದೊಂದು ಲವ್​ ಜೆಹಾದ್ ಪ್ರಕರಣ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕೋಮುಸಂಘರ್ಷಕ್ಕೆ ಮುನ್ನುಡಿ ಬರೆಯುವಂತಿದೆ.