ಪ್ರೇಯಸಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಪ್ರಿಯಕರ- ಭಗ್ನಪ್ರೇಮಿಯ ಕೃತ್ಯಕ್ಕೆ ಬೆಚ್ಚಿಬಿತ್ತು ನಗರ

ಪ್ರೇಮ ಮಧುರ ತ್ಯಾಗ ಅಮರ ಅಂತಾರೆ. ಆದರೇ ಎಲ್ಲ ಪ್ರೇಮಿಗಳು ಹೀಗೆ ಅಂದುಕೊಳ್ಳೋದೆ ಇಲ್ಲ. ಹೀಗಾಗಿಯೇ ಅದೇಷ್ಟೋ ಪ್ರೇಮಿಗಳು ಕೊನೆಗೆ ಕೊಲೆಗಡುಕರಾಗಿ ಬದಲಾಗುತ್ತಾರೆ. ಇಂತಹುದೇ ಘಟನೆಯೊಂದು ಹೈದ್ರಾಬಾದ್​​ನಲ್ಲಿ ನಡೆದಿದ್ದು, ಭಗ್ನ ಪ್ರೇಮಿಯೊಬ್ಬ ನಡುರಸ್ತೆಯಲ್ಲೇ ತನ್ನ ಪ್ರೇಯಸಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೌರ್ಯ ಮೆರೆದಿದ್ದು, ಪ್ರೀತಿಸಿದ ತಪ್ಪಿಗೆ ಆ ಯುವತಿ ತನ್ನ ಪ್ರೇಮಿಯಿಂದಲೇ ಕೊಲೆಯಾಗಿದ್ದಾಳೆ.

ಹೈದ್ರಾಬಾದ್​​​ನ ಸಿಕಂದರಾಬಾದ್​​​ ರಸ್ತೆಯಲ್ಲಿ ಘಟನೆ ನಡೆದಿದ್ದು, ಸಂಧ್ಯಾರಾಣಿ ಎಂಬಾಕೆಯೇ ತನ್ನ ಪ್ರಿಯಕರ ಕಾರ್ತಿಕ್​ನಿಂದ ಹತ್ಯೆಯಾದ ದುರ್ದೈವಿ. ಕಾರ್ತಿಕ ಹಾಗೂ ಸಂಧ್ಯಾ ರೇಲ್ವೆ ಇಲಾಖೆಯಲ್ಲಿ ಉದ್ಯೋಗಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೇ ಇತ್ತೀಚೆಗೆ ಸಂಧ್ಯಾ ಪೋಷಕರು ಪ್ರೀತಿಗೆ ಒಪ್ಪಿರಲಿಲ್ಲ. ಹೀಗಾಗಿ ಸಂಧ್ಯಾ ಕಾರ್ತಿಕ್​ನಿಂದ ದೂರಾಗುವ ಯತ್ನ ನಡೆಸಿದ್ದಳು. ಇದಕ್ಕೆ ಕೆರಳಿದ ಭಗ್ನ ಪ್ರೇಮಿ ಕಾರ್ತಿಕ್​ ಸಿಕಂದರಾಬಾದ್​ ರಸ್ತೆಯಲ್ಲಿ ಸಂಧ್ಯಾ ನಡೆದು ಹೋಗುತ್ತಿದ್ದ ವೇಳೆ ಬೈಕ್​ನಲ್ಲಿ ಬಂದು ಏಕಾಏಕಿ ಸಂಧ್ಯಾ ಮೇಲೆ ಸೀಮೆಎಣ್ಣೆ ಸುರಿದಿದ್ದು, ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

ಬೆಂಕಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಸಂಧ್ಯಾಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೇ ಶೇಕಡಾ 80 ರಷ್ಟು ಸುಟ್ಟ ಗಾಯದಿಂದ ನರಳುತ್ತಿದ್ದ ಸಂಧ್ಯಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಸಂಧ್ಯಾ ಇತ್ತೀಚೆಗೆ ಕಾರ್ತಿಕ್​​ ಪೋನ್ ರಿಸೀವ್ ಮಾಡದೇ ಅವಾಯ್ಡ್​ ಮಾಡುತ್ತಿದ್ದಳು ಎನ್ನಲಾಗಿದೆ. ಇದರಿಂದ ಕೆರಳಿದ ಕಾರ್ತಿಕ್ ಈ ರೀತಿ ಕೃತ್ಯ ಎಸಗಿದ್ದಾನೆ. ಇದೀಗ ಲಾಲ್​​ಗುಡ ಪೊಲೀಸರು ಕಾರ್ತಿಕ್​​ನನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ ಪ್ರೇಮ ಪ್ರಕರಣವೊಂದು ದುರಂತ್ಯ ಕಂಡಿದ್ದು ಮಾತ್ರ ವಿಷಾದನೀಯ.