ಶ್ರೀಲಂಕಾ ಬಾಂಬ್​ ಬ್ಲ್ಯಾಸ್ಟ್​​! ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಮಂಗಳೂರಿನ ದಂಪತಿ!

ಅವರು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದರು. ಆ ಸುಮಧುರ ಕ್ಷಣಗಳನ್ನು ಕಳೆಯಲು ಶ್ರೀಲಂಕಾಗೆ ತೆರಳಿದ್ದರು. ಆದರೆ ಅಲ್ಲಿ ಅವರಿಗೆ ಎದುರಾಗಿದ್ದು, ಮೃತ್ಯುಕೂಪ. ಆದರೆ ಅದೃಷ್ಟವಶಾತ  ಪ್ರಾಣಾಪಾಯದಿಂದ ಪಾರಾದ ಜೋಡಿ ಭಾರತಕ್ಕೆ ವಾಪಸ್ಸಾಗಿದೆ. ಹೌದು ಇದು ಶ್ರೀಲಂಕಾದಲ್ಲಿ ಮಾರಣಹೋಮ ಸೃಷ್ಟಿಸಿದ  ಸರಣಿ ಬಾಂಬ್​ ಸ್ಪೋಟದಿಂದ ಬಚಾವಾಗಿ ಬಂದವರ ಕತೆ.

ad

ಬಾನುವಾರ ಶ್ರೀಲಂಕಾದಲ್ಲಿ ನಡೆದ  ಸರಣಿ ಬಾಂಬ್ ಸ್ಪೋಟದಲ್ಲಿ ಈಗಾಗಲೇ ಕರ್ನಾಟಕದ 7 ಮಂದಿ ಕನ್ನಡಿಗರು ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದಾರೆ. ಸದ್ಯ ಮಂಗಳೂರಿನ  ದಂಪತಿಗಳು ಶ್ರೀಲಂಕಾ ಬಾಂಬ್ ಸ್ಪೋಟದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು ಭಾರತಕ್ಕೆ ಹಿಂತಿರುಗಿದ್ದಾರೆ.

ಹೌದು ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಮೂಲದ ಡಾ.ಕೇಶವರಾಜ್, ಪತ್ನಿ ಶ್ರೀದೇವಿ ದಂಪತಿಯು ವಿವಾಹ ವಾರ್ಷಿಕೋತ್ಸವಕ್ಕೆಂದು ಶ್ರೀಲಂಕಾದ ಕೊಲೊಂಬೊಗೆ ತೆರಳಿದ್ದರು, ಕೊಲೊಂಬೋವಿನ ದಿ ಸಿನೆಮೆನ್ ಗ್ರಾಂಡ್ ಹೊಟೇಲ್ ನಲ್ಲಿ ಏಜೆನ್ಸಿ ಇಬ್ಬರಿಗೂ  ರೂಂ ಬುಕ್​ ಮಾಡಿತ್ತು. ಆದರೆ ಕೊನೆ ಕ್ಷಣದಲ್ಲಿ ಏಜೆನ್ಸಿಯವರು ಈ ದಂಪತಿಗೆ ಪೋನ್ ಮಾಡಿ, ಹೊಟೆಲ್ ಬದಲಾವಣೆ‌ ಸೂಚಿಸಿತ್ತು. ಹೀಗಾಗಿ ದಂಪತಿ ಆ ಹೊಟೇಲ್​ನಿಂದ ವಾಪಸ್ಸಾಗಿದ್ದರು. ವಾಪಸ್ಸಾದ ಕೆಲವೆ ಗಂಟೆಗಳಲ್ಲಿ ಆ ಹೊಟೇಲ್​ನಲ್ಲಿ  ಬಾಂಬ್​ ಬ್ಲಾಸ್ಟ್​ ಆಗಿದೆ.

ಶ್ರೀಲಂಕಾ ಬಾಂಬ್ ಬ್ಲಾಸ್ಟ್ ನಿಂದ ಆತಂಕಗೊಂಡಿದ್ದ ಈ ದಂಪತಿ ನಿನ್ನೆ ರಾತ್ರಿ ಶ್ರೀಲಂಕಾದಿಂದ  ಹೊರಟು, ಚೆನೈ ಮೂಲಕ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ಹಿಂತಿರುಗಿದ್ದಾರೆ.ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಕೇಶವ್ ರಾಜ್ ಇದು ನಮ್ಮಿಬ್ಬರಿಗೂ ದೊರೆತ ಎರಡನೇ ಜನ್ಮ, ದೇವರ ದಯೆಯೋ ಅಥವಾ ನಮ್ಮ ಪುಣ್ಯವೋ ಗೊತ್ತಿಲ್ಲ ಅಪಾಯದಿಂದ ಪಾರಾಗಿ ಸೇಫ್ ಆಗಿ ಮಂಗಳೂರಿಗೆ ತಲುಪಿದ್ದೇವೆ, ಭಾರತಕ್ಕೆ ಬರುವವರೆಗೂ ನಮಗೆ ಬಹಳ ಆತಂಕ ಮೂಡಿತ್ತು ಎಂದು ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡರು.

Lucky escape for young couples of Mangaluru in srilanka bomb blast

Lucky escape for young couples of mangaluru in srilanka bomb blast

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಏಪ್ರಿಲ್ 24, 2019