ಎಂ.ಬಿ.ಪಾಟೀಲ್​​ಗೆ ತಪ್ಪಿದ ಸಚಿವ ಸ್ಥಾನ- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಎಂ.ಬಿ.ಪಾಟೀಲ್​?!

 

ಜೆಡಿಎಸ್​-ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಇಂದು ಮಧ್ಯಾಹ್ನ ಸಚಿವರುಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೀಗಿರುವಾಗಲೇ ಕಾಂಗ್ರೆಸ್​ ಪಾಳಯದಲ್ಲಿ ಅಸಮಧಾನ ಭುಗಿಲೆದ್ದಿದ್ದು, ಸಚಿವ ಸ್ಥಾನ ನೀಡದೇ ಇದ್ದಲ್ಲಿ ರಾಜೀನಾಮೆ ನೀಡಲು ಎಂ.ಬಿ.ಪಾಟೀಲ್​ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್​ನ ಸಚಿವ ಸಂಪುಟದ ಅಂತಿಮ ಪಟ್ಟಿ ಪ್ರಕಟವಾಗುತ್ತಿದ್ದಂತೆ ಎಂ.ಬಿ.ಪಾಟೀಲ್​ ಮನೆ ಸುತ್ತ ಅಭಿಮಾನಿಗಳು ಸೇರಲಾರಂಭಿಸಿದ್ದರು. ಆದರೇ ಸಚಿವ ಸಂಪುಟ ಪಟ್ಟಿಯಲ್ಲಿ ಎಂ.ಬಿ.ಪಾಟೀಲ್​ ಕೈ ಬಿಟ್ಟಿರೋದು ಖಚಿತವಾಗುತ್ತಿದ್ದಂತೆ ಸ್ವತಃ ಎಂ.ಬಿ.ಪಾಟೀಲ್​ ಸೇರಿದಂತೆ ಎಲ್ಲರೂ ಅಸಮಧಾನಗೊಂಡಿದ್ದು, ಕಾರ್ಯಕರ್ತರು ಎಂ.ಬಿ.ಪಾಟೀಲ್ ನಿವಾಸದ ಬಳಿ ಪ್ರತಿಭಟನೆ ಆರಂಭಿಸಿದ್ದಾರೆ.

 

ಇನ್ನು ಸಚಿವ ಸ್ಥಾನ ಸಿಗದೇ ಇರೋದರಿಂದ ಅಸಮಧಾನಗೊಂಡಿರುವ ಎಂ.ಬಿ.ಪಾಟೀಲ್​, ಪಕ್ಷಕ್ಕಾಗಿ ಸಮುದಾಯವನ್ನೇ ಎದುರು ಹಾಕಿಕೊಂಡು ಕೆಲಸ ಮಾಡಿದ್ದೇನೆ. ಆದರೇ ನನಗೆ ಹೈಕಮಾಂಡ್ ದ್ರೋಹ್ ಮಾಡಿದ್ದಾರೆ ಎಂದು ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಮಧ್ಯಾಹ್ನ ಮಾಜಿ ಸಚಿವ ಎ.ಬಿ.ಪಾಟೀಲ್​ ಸ್ಪೀಕರ್​ ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ಕಾಂಗ್ರೆಸ್​​ ನ ರಿಜ್ವಾನ್ ಅರ್ಷದ್​ ಹಾಗೂ ಕೃಷ್ಣಭೈರೈಗೌಡರು ಎಂ.ಬಿ.ಪಾಟೀಲ್​ ಮನೆಗೆ ತೆರಳಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೇ ಕೃಷ್ಣ ಭೈರೈಗೌಡರು ಹಾಗೂ ರಿಜ್ವಾನ್​ಗೆ ಎಂ.ಬಿ.ಪಾಟೀಲ್​​ ಬೆಂಬಲಿಗರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಕಾಂಗ್ರೆಸ್​ನಲ್ಲಿ ಅಸಮಧಾನ ಮುಗಿಲು ಮುಟ್ಟಿದ್ದು, ಹೈಕಮಾಂಡ್​ ಏನು ಕ್ರಮಕೈಗೊಳ್ಳುತ್ತೆ ಕಾದು ನೋಡಬೇಕಿದೆ.