ಮಹದಾಯಿ ಹೋರಾಟಗಾರರು ದೆಹಲಿಗೆ- ಮೋದಿ ಮುಂದಾಳತ್ವದಲ್ಲಿ ಕೊನೆಯಾಗುತ್ತಾ ಸಮಸ್ಯೆ?

ಮಹದಾಯಿ, ಕಳಸಾ ಬಂಡೂರಿ ವಿವಾದ ಇತ್ಯರ್ಥಕ್ಕಾಗಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ನಾಲ್ಕು ಜಿಲ್ಲೆ ಒಂಬತ್ತು ತಾಲೂಕಿನ 23 ರೈತರು ದೆಹಲಿಗೆ ತೆರಳುತ್ತಿದ್ದಾರೆ. ಹುಬ್ಬಳ್ಳಿಯಿಂದ ರೈಲ್ವೇ ಮೂಲಕ ಬೆಂಗಳೂರಿಗೆ ಹೋಗಿ, ನಾಳೆ ಬೆಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಎನ್ ಸ್ಟಿರಿಯೊಫೊನಿಕ್ ನೇತೃತ್ವದಲ್ಲಿ ಬೆಂಗಳೂರಿನ ಸಹ್ಯಾದ್ರಿ ಜನ-ಜಲ ಸೊಸೈಟಿ ಹಾಗೂ ಮಹದಾಯಿ ಕಳಸಾ ಬಂಡೂರಿ ಮಹಾವೇದಿಕೆ ಸಹಯೋಗದಲ್ಲಿ ಭೇಟಿ ಮಾಡಲಿದ್ದಾರೆ.

ಈಗಾಲೇ ಬೆಂಗಳೂರಿನ ಸಹ್ಯಾದ್ರಿ ಜನ-ಜಲ ಸೊಸೈಟಿ ಕೇಂದ್ರ ಜಲ ಸಂಪನ್ಮೂಲ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು 14 ಹಾಗೂ 15 ಎರಡು ದಿನ ಕಾಲಾವಕಾಶ ಹೇಳಿದ್ದಾರೆ. ಎರಡು ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಯೋಜನೆ ಕುರಿತು ಚರ್ಚೆ ಮಾಡಲಿದ್ದಾರೆ.
ಇನ್ನೂ ನ್ಯಾಯಾಧೀಕರಣದ ಹೊರಗಡೆ ಇತ್ಯರ್ಥ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಲಿದ್ದಾರೆ. ಕಳಸಾ ಬಂಡೂರಿ ನಾಲಾದಿಂದ 7.56 ಟಿ ಎಂ ಸಿ ನೀರು ಬಿಡುವಂತೆ ಮನವಿ ಮಾಡಲಾಗುತ್ತದೆ ಜನನಅಂತಾ ಹೋರಾಟ‌ಗಾರ ಶಂಕ್ರಣ್ಣಾ ಅಂಬಲಿ ಹೇಳಿದ್ದಾರೆ…