ವಿವಾದಿತ ಪ್ರಾಧ್ಯಾಪಕ ಮಹೇಶ್ಚಂದ್ರಗುರು ಅಮಾನತು ಆದೇಶ ರದ್ದು

ವಿವಾದಿತ ಪ್ರಾಧ್ಯಾಪಕ ಮಹೇಶ್ಚಂದ್ರಗುರು ಅಮಾನತು ಆದೇಶ ರದ್ದು ಪಡಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯವಾಗಿರುವ ಮಾಹಿತಿ ಹೊರ ಬಿದ್ದಿದೆ.

ಕಳೆದ ವಿಧಾನ ಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪರ ಮತಯಾಚನೆ ಮಾಡಿದ ಆರೋಪದಿಂದಾಗಿ
ಚುನಾವಣಾ ಆಯೋಗದ ನಿರ್ದೇಶನದಂತೆ ಅಮಾನತ್ತಾಗಿದ್ದ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಮಹೇಶ್ಚಂದ್ರಗುರು, ಕನ್ನಡ ವಿಭಾಗದ ಅರವಿಂದ ಮಾಲಗತ್ತಿಯವರ ಅಮಾನತು ಆದೇಶವನ್ನ ರದ್ದುಗೊಳಿಸಿ ಮೈಸೂರು ವಿವಿ ಸಿಂಡಿಕೇಟ್ ಸಭೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಪರ ಚುನಾವಣಾ ಪೂರ್ವದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಚಾರ ಕೈಗೊಂಡಿದ್ದರು ಎನ್ನುವುದು ಅವರ ಮೇಲಿನ ಆರೋಪವಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೈಸೂರು ವಿವಿಯ ಪ್ರೊ.ಮಹೇಶ್ ಚಂದ್ರಗುರು, ನಾನು ಮತ್ತು ಪ್ರೊ.ಅರವಿಂದ ಮಾಲಗತ್ತಿ ರವರು ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ ಎನ್ನುವಂತ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದೆವು. ಇಂದು ಸಂವಿಧಾನಕ್ಕೆ ಅಪಾಯ ಬಂದಿದೆ ಇಂತಹ ಕಠಿಣ ಸವಾಲಿನ ಸಂದರ್ಭದಲ್ಲಿ ಪ್ರಜ್ನಾವಂತ ಪ್ರಾಧ್ಯಾಪಕರಾದ ನಾವುಗಳು ಸುಮ್ಮನೆ ಕೂರುವುದು ದೇಶಕ್ಕೆ ಮಾಡಿದ ದೊಡ್ಡ ದ್ರೋಹ, ಹಾಗಾಗಿ ಕೆಲವು ಪಟ್ಟಭದ್ರರು ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದರೆಂದು ಆರೋಪಿಸಿ ಅಮಾನತಿಗೆ ಕಾರಣರಾಗಿದ್ದರು, ಈ ಹಿಂದಿನ ಕುಲ ಸಚಿವೆ ಭಾರತಿ ಮತ್ತು ಕುಲಸಚಿವ ಬಸವರಾಜು ಏಕಪಕ್ಷೀಯ ನಿರ್ಣಯ ಕೈಗೊಂಡು ಅಮಾನತು ಗೊಳಿಸಿದ್ದರು ಎಂದು ಆರೋಪಿಸಿದ ಮಹೇಶ್ ಚಂದ್ರಗುರು, ಅದು ತಪ್ಪಾಗಿರುವುದು ಮುಖ್ಯ ಕಾರ್ಯಧರ್ಶಿಗಳಿಗೆ ಮನವರಿಕೆಯಾಗಿ ಶಿಸ್ತು ಪ್ರಾಧಿಕಾರದಲ್ಲಿಟ್ಟು ವರದಿ ಸಲ್ಲಿಸುವಂತೆ ಆದೇಶ ನೀಡಿದ್ದರು. ಅದರಂತೆ ಕುಲಸಚಿವ ರಾಜಣ್ಣ ಮತ್ತು ಸಿಂಡಿಕೇಟ್ ಸದಸ್ಯರು ವಸ್ತುಸ್ಥಿತಿ ಪರಿಶೀಲಿಸಿ ಅಮಾನತು ಆದೇಶವನ್ನ ರದ್ದುಗೊಳಿಸಿದ್ದಾರೆ, ಇದು ಸಂವಿಧಾನಕ್ಕೆ ಸಂದ ಜಯವೆಂದು ಭಾವಿಸುತ್ತೇನೆ ಎಂದರು.