ಆಕೆ ಖಾಕಿ ಅಂಡರ್ ವೇರ್​ ಹಾಕುತ್ತಾರೆ ಎಂದು ಈಗ ತಿಳಿಯಿತು! ನಟಿ ಜಯಪ್ರದಾ ವಿರುದ್ಧ ನಾಲಿಗೆ ಹರಿಬಿಟ್ಟ ಸಮಾಜವಾದಿ ಮುಖಂಡ!!

ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರ ವಿರುದ್ಧ ‘ಖಾಕಿ ಅಂಡರ್ ವೇರ್ ಧರಿಸುತ್ತಾರೆ’ ಎಂಬ ಕೀಳು ಮಟ್ಟದ ಹೇಳಿಕೆ ನೀಡುವುದರ ಮೂಲಕ  ಸಮಾಜವಾದಿ ಪಕ್ಷದ ಮುಖಂಡ ‘ಅಜಂ ಖಾನ್’ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಉತ್ತರ ಪ್ರದೇಶದ ರಾಂಪುರ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಜಯಪ್ರದಾ ಅವರನ್ನು ರಾಜಕೀಯಕ್ಕೆ ಕರೆತಂದಿದ್ದೇ ನಾನು. ಆದರೆ ಅವರು ಖಾಕಿ ಅಂಡರವೇರ್ ಧರಿಸುತ್ತಾರೆ ಎಂದು ಈಗ ತಿಳಿಯಿತು ಎಂದು ವ್ಯಂಗ್ಯವಾಡಿ ಜನರ ಆಕ್ರೋಶಕ್ಕಿಡಾಗಿದ್ದಾರೆ.

ಚುನಾವಣಾ ರ್ಯಾಲಿ ವೇಳೆ ಮಾತನಾಡಿದ ಅಜಂ ಖಾನ್​, ಆಕೆಗೆ ನಾನು  ರಾಂಪುರದಿಂದ  ಟಿಕೆಟ್ ಕೊಡಿಸಿದ್ದೆ. ಆಕೆಯ ಬಾಡಿಗಾರ್ಡ್ ನಂತೆ ಆಕೆಯನ್ನು ಯಾರೂ ಕೂಡ ಸ್ಪರ್ಶಿಸದಂತೆ ನೋಡಿಕೊಂಡೆ. ಆದರೆ ಆಕೆಯ ನಿಜವಾದ ಮುಖವನ್ನು ತಿಳಿಯಲು ನನಗೆ 17 ವರ್ಷಗಳೇ ಬೇಕಾಯಿತು. 17 ದಿನಗಳ ಹಿಂದಷ್ಟೇ ಆಕೆ ಖಾಕಿ ಅಂಡರ್ ವೇರ್ ಧರಿಸುತ್ತಾರೆ ಎಂದು ತಿಳಿಯಿತು ಎಂದು ಲೇವಡಿ ಮಾಡಿದ್ದರು. ಸಮಾಜವಾದಿ ಪಕ್ಷದ  ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲೇ ಇಂತಹ ಕೀಳುಮಟ್ಟದ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಇನ್ನು ಅಜಂ ಖಾನ್ ಈ ಹೇಳಿಕೆ ಮಹಿಳಾ ಆಯೋಗದ ಕಣ್ಣುಕೆಂಪಾಗಿಸಿದೆ. ಈ  ಕುರಿತು ಟ್ವೀಟ್ ಮಾಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು, ಅಜಂ ಖಾನ್ ಅವರ ಹೇಳಿಕೆ ಅತ್ಯಂತ ನಾಚಿಕೆಗೇಡಿನದ್ದಾಗಿದೆ. ಈ ಸಂಬಂಧ ವಿವರಣೆ ನೀಡುವಂತೆ ಈ ಕೂಡಲೇ ಅವರಿಗೆ ಷೋಕಾಸ್ ನೋಟಿಸ್ ನೀಡುತ್ತೇವೆ. ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಜಂಖಾನ್ ಅವರ ಭಾಷಣದ ವಿಡಿಯೋ ಆಧರಿಸಿ ರಾಂಪುರ ಪೊಲೀಸರು ಅಜಂಖಾನ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಹಾಗೂ ನಟಿ ಜಯಪ್ರದ ಅಸಮಾಧಾನ ಹೊರಹಾಕಿದ್ದಾರೆ. ‘ಅವರಿಗೆ ನಾನೇನು ಮಾಡಿದ್ದೇನೋ ನನಗೆ ತಿಳಿಯುತ್ತಿಲ್ಲ. ಅವರಿಗೆ ನನ್ನ ಬಗ್ಗೆ ಗೌರವ ಬೇಡ.. ಕನಿಷ್ಟ ಪಕ್ಷ ಹೆಣ್ಣಿನ ಮೇಲೂ ಗೌರವವಿದ್ದಂತೆ ಕಾಣುತ್ತಿಲ್ಲ. ಓರ್ವ ಹೆಣ್ಣಾಗಿ ಅವರು ನನ್ನ ವಿರುದ್ಧ ಬಳಸಿರುವ ಪದಗಳನ್ನು ನಾನು ಹೇಳಲು ಸಾಧ್ಯವಿಲ್ಲ. ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇಂತಹ ಟೀಕೆಗಳು ನನಗೇನು ಹೊಸದಲ್ಲ. ಇಂತಹ ಟೀಕೆಗಳಿಂದ ನಾನು ಮತ್ತಷ್ಟು ಗಟ್ಟಿಗೊಳ್ಳುತ್ತೇನೆ. ನನ್ನ ಗುರಿ ನಿಖರವಾಗಿದೆ, ಎಂದಿಗೂ ನಾನು ಜನರ ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ. ಎಂದು ಜಯಪ್ರದ ಅವರು ತಿಳಿಸಿದ್ದಾರೆ.

ಇದೇ ವೇಳೆಯಲ್ಲಿ ಅಜಂಖಾನ್ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಬಿಡಬಾರದು. ಒಂದು ವೇಳೆ ಇಂತವರು ಗೆದ್ದರೆ ಸಂವಿಧಾನ ಮತ್ತು ಪ್ರಜಾಪ್ರಭತ್ವದ ಗತಿ ಏನು..? ಆಗ ಸಮಾಜದಲ್ಲಿ ಮಹಿಳೆಯರಿಗೆ ಸ್ಥಾನವೇ ಇಲ್ಲದಂತಾಗುತ್ತದೆ. ನಾವು ಎಲ್ಲಿಗೆ ಹೋಗಬೇಕು.. ನಮ್ಮ ಅಸ್ಥಿತ್ವವನ್ನು ಹೇಗೆ ರಕ್ಷಿಸಿಕೊಳ್ಳಬೇಕು?  ಒಂದು ವೇಳೆ ನಿಮ್ಮ ಈ ಹೇಳಿಕೆಗಳಿಂದ ನಾನು ಭಯಪಡುತ್ತೇನೆ ಮತ್ತು ರಾಂಪುರದಿಂದ ಓಡಿ ಹೋಗುತ್ತೇನೆ ಎಂದು ನೀವು ಭಾವಿಸಿದ್ದರೆ.. ಅದು ನಿಮ್ಮ ತಪ್ಪು ಭಾವನೆ.. ಎಂದು ಕಿಡಿ ಜಯಪ್ರದಾ ಕಿಡಿಕಾರಿದ್ದಾರೆ.