ಪೇಸ್​ಬುಕ್​ಗೆ ಸ್ಟೇಟಸ್​ ಹಾಕಿ ಆತ್ಮ,ಹತ್ಯೆ- ಕೋಲಾರದಲ್ಲಿ ಇಂತಹದೊಂದು ವಿಲಕ್ಷಣ ಘಟನೆ!

 

ಕೌಟುಂಬಿಕ ಕಲಹ ಹಿನ್ನೆಲೆ ವಿವಾಹಿತ ಮಹಿಳೆಯೊಬ್ಬಳು ತನ್ನ ಫೇಸ್‌ಬುಕ್‌ ಪೇಜ್​ನಲ್ಲಿ ತಾನು ಸಾಯವುದಾಗಿ ಸ್ಟೇಟಸ್ ಹಾಕಿಕೊಂಡು ಅದರಂತೆ ಇಂದು ಬೆಳಗ್ಗೆ ನೇಣುಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕಪ್ಪಲಮಡಗು ಗ್ರಾಮದಲ್ಲಿ ನಡೆದಿದೆ.
ದಿವ್ಯಾ (23) ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಮಹಿಳೆ. ಕಳೆದ ಮೂರು ವರ್ಷಗಳ ಹಿಂದೆ ಮೃತ ದಿವ್ಯಾ ರಾಮಚಂದ್ರ ಎಂಬುವರನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ರು. ಪತಿ ರಾಮಚಂದ್ರನಿಗೆ ಇದಕ್ಕೂ ಮುಂಚೆ ಮದುವೆಯಾಗಿತ್ತು. ರಾಮಚಂದ್ರ ಎಂಬುವರ ಎರಡನೇ ಪತ್ನಿಯಾಗಿದ್ದ ದಿವ್ಯಾ,

 

ತಾನು ಆತ್ಮಹತ್ಯೆ ‌ಮಾಡಿಕೊಳ್ಳುವ ಮುನ್ನ ಪೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ ರಾತ್ರಿ 10.30ರಲ್ಲಿ ನಾನು ಸ್ವಲ್ಪ ಸಮಯ ನಂತ್ರ ನನ್ನ ಸಾವಿನ ಸುದ್ದಿ ಕೇಳುವಿರಾ ಎಂದು ಸ್ಟೇಟಸ್ ಹಾಕಿದ ದಿವ್ಯಾ.
ಇಂದು ಬೆಳಗ್ಗೆ ನೋಡುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟಿದ್ದಾಳೆ. ಇನ್ನೂ ಸ್ಟೇಟಸ್ ನಲ್ಲಿ ಕಳೆದ ಎರಡು ತಿಂಗಳಿಂದ ನಡೆದ ಘಟನೆಗಳನ್ನು ಹಾಕಿರುವ ದಿವ್ಯಾ ಪ್ರೀತಿ ಪ್ರೇಮ ವಿಪುಲದ ಬಗ್ಗೆ ಹಾಗೂ ತನ್ನ ಚಿಕ್ಕಮ್ಮ ರಾದಮ್ಮಳೊಂದಿಗೆ ಚಿನ್ನದ ಒಡವೆಗಳ ವಿಚಾರಕ್ಕೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಈ ಬಗ್ಗೆ ಮುಳಬಾಗಿಲು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.