ಗುರಾಯಿಸಿದ್ದಕ್ಕೇ ಬಿತ್ತು ಹೆಣ- ಇದು ಬಾರ್​​ನಲ್ಲಿ ನಡೆದ ಪುಡಿರೌಡಿಗಳ ಮಹಾಕಾಳಗ!

Man Murder Young Man For Silly reason in Bar.
Man Murder Young Man For Silly reason in Bar.

ದುಡ್ಡು,ಆಸ್ತಿ,ಹುಡುಗಿಗಾಗಿ ಕೊಲೆಗಳು ನಡೆಯೋದನ್ನು ನೀವು ನೋಡಿರತೀರಾ. ಆದರೇ ಸುಮ್ಮನೆ ಒಂದು ನೋಟಕ್ಕೂ ಕೊಲೆಯಾಗುತ್ತಾ.

 

ಇಂತಹದೊಂದು ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು ಬೆಂಗಳೂರಿನ ಬಾರ್ ಒಂದರಲ್ಲಿ ಗುರಾಯಿಸಿದ ಎನ್ನುವ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲತ್ತಹಳ್ಳಿ ನಿವಾಸಿ ಅರುಣ್ ಕೃಷ್ಣ ಕೊಲೆಯಾದ ದುರ್ದೈವಿ. ಕಳೆದ ರಾತ್ರಿ ಅರುಣ್ ಮುದ್ದಿನಪಾಳ್ಯದ ಮಾರುತಿ ಬಾರ್ ಗೆ ಮದ್ಯ ತರಲು ಸ್ನೇಹಿತರ ಜೊತೆ ಹೋಗಿದ್ದ. ಈ ವೇಳೆ ಬಾರನಲ್ಲಿ ಕುಳಿತು ಮದ್ಯ ಸೇವನೆ ಮಾಡ್ತಾ ಇದ್ದ ಮೂವರು ನಮ್ಮನ್ನ ಯಾಕೋ ಗುರಾಯಿಸ್ತಾ ಇದ್ದೀರಾ ಅಂತಾ ಅರುಣ್ ಹಾಗೂ ಸ್ನೇಹಿತರೊಂದಿಗೆ ಜಗಳ ಶುರು ಮಾಡಿದ್ದರು.

 

 

ಈ ವೇಳೆ ಸುಮ್ಮನಿರದ ಅರುಣ್ ಹಾಗೂ ಸ್ನೇಹಿತರಾದ ದಿಲ್ಲೋನ್ ಸೋಮಯ್ಯ ಹಾಗೂ ಕಿಶನ್ ಎದುರಾಳಿ ಗುಂಪಿನೊಂದಿಗೆ ವಾಗ್ವಾದಕ್ಕೆ ಬಿದ್ದಿದ್ದಾರೆ.
ಹೀಗೆ ಎರಡು ಗುಂಪುಗಳ ನಡುವೆ ಗುರಾಯಿಸಿದ ವಿಚಾರಕ್ಕೆ ಶುರುವಾದ ಗಲಾಟೆ – ವಾಗ್ವಾದ ವಿಕೋಪಕ್ಕೆ ಹೋಗಿ ಎದುರಾಳಿ ಗುಂಪಿನವರು ಅರುಣ್ ಹಾಗೂ ದಿಲ್ಲೋನ್ ಗೆ ಚಾಕುವಿನಿಂದ ಇರಿದಿದ್ದಾರೆ. ದಿಲ್ಲೋನ್ ಗೆ ಸ್ವಲ್ಪ ಗಾಯವಾಗಿದ್ದರೆ ಅರಣ್ ಗೆ ಎದೆ ಬಾಗಕ್ಕೆ ಇರಿದ ಪರಿಣಾಮ ಆಸ್ಪತ್ರೆಗೆ ಸಾಗಿಸುವ ಮಧ್ಯೆದಲ್ಲಿಯೇ ಸಾವನ್ನಪ್ಪಿದ್ದಾನೆ.ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ರು ವಿಶೇಷ ತಂಡ ರಚಿಸಿದ್ದು, ಮೂವರು ಕೊಲೆಗಾರರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here