ಆಸ್ತಿ ವಿಚಾರವಾಗಿ ಸ್ವಂತ ಅಣ್ಣನನ್ನೇ ಕೊಲೆ ಮಾಡಿರುವ ಅಮಾನವೀಯ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಹಾಲಗೊಂಡನಹಳ್ಳಿಯಲ್ಲಿ ನಡೆದಿದೆ. ಸಹೋದರರು ಆಸ್ತಿ ಭಾಗವಾದ್ರೆ ಎಲ್ಲಿ ನನಗೆ ಕಡಿಮೆ ಆಸ್ತಿ ಸಿಗುತ್ತೋ ಎಂದು ಒಡಹುಟ್ಟಿದ ತಮ್ಮ ಬಸವೇಶನೇ ಅಣ್ಣ ಹಂಸರಾಜನನ್ನು ಕೊಲೆ ಮಾಡಿದ್ದಾನೆ. ಇದಕ್ಕೆ ಪೂರಕವಾಗಿ ತಮ್ಮ ಬಸವೇಶ ವಿವಾದ ಸೃಷ್ಠಿಯಾಗುವಂತ ಎಡವಟ್ಟು ಉತ್ತರಗಳನ್ನು ಕೊಟ್ಟಿದ್ದು ಎಲ್ಲರ
ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಇನ್ನು ದಂಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
==========

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here