ಕುಮಾರಣ್ಣ ನನ್ನ ಮದುವೆಗೆ ಬರಲೇ ಬೇಕು – ಮಂಡ್ಯದಲ್ಲಿ ಹೀಗೊಂದು ನಿರಶನ

Mandya: Fan demands HDK's presence at his marriage.

ಎಚ್ ಡಿ‌ ಕುಮಾರಸ್ವಾಮಿ ಆಶೀರ್ವಾದಕ್ಕಾಗಿ ಧರಣಿ ಕುಳಿತ ಮದುಮಗ !! ಹೀಗೊಂದು ಬ್ರದರಾಯಣ ಸಂಬಂಧ !!

ರಾಜಕಾರಣಿಗಳು ಜನ ಸಾಮಾನ್ಯರ ಮಧ್ಯೆ ಊಹಿಸಲೂ ಅಸಾದ್ಯವಾಗಿರುವ ಸಂಬಂಧಗಳನ್ನು, ಅಟ್ಯಾಚ್ಮೆಂಟ್ ಗಳನ್ನು ಹೊಂದಿರುತ್ತಾರೆ. ಇಂತಹ ಸಂಬಂಧಗಳನ್ನು ಬಾದಾರಾಯಣ ಸಂಬಂಧ ಎನ್ನುತ್ತಾರೆ. ಈ ರೀತಿ ಹಲವು ಅನೂಹ್ಯ ಸಂಬಂಧಗಳನ್ನು ಕಾರ್ಯಕರ್ತರು, ಸಾರ್ವಜನಿಕರ ಜೊತೆ ಹೊಂದಿರುವವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.

Mandya: Fan demands HDK's presence at his marriage.

ಇಲ್ಲೊಬ್ಬ ಮದುಮಗ ತಾನು ಎಚ್ ಡಿ ಕುಮಾರಸ್ವಾಮಿ ಬರದೇ ಮದುವೆಯಾಗಲ್ಲ ಎಂದು ಧರಣಿ ಕೂತಿದ್ದಾನೆ. ಎಲ್ಲರನ್ನೂ “ಬ್ರದರ್” ಎಂದು ಪ್ರೀತಿಯಿಂದ ಕರೆಯುವ ಎಚ್ ಡಿಕೆಯ ಪ್ರೀತಿಗೆ ಸೋತಿರುವ ಈ ಯುವಕನದ್ದು ಬ್ರದರಾಯಣ ಸಂಬಂಧ ಎನ್ನಬಹುದು. ಹೌದು. ನನ್ನ ಮದ್ವೆಗೆ ಮಾಜಿ ಸಿಎಂ ಕುಮಾರಸ್ವಾಮಿ ಬರಲೇಬೇಕು ಅಂತ ಅಭಿಮಾನಿಯೊಬ್ಬ ಉಪವಾಸ ಕುಳಿತಿದ್ದಾನೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ರವಿ ಉಪವಾಸ ಕುಳಿತಿರೋ ಕುಮಾರಸ್ವಾಮಿ ಅಭಿಮಾನಿ. ಡಿಸೆಂಬರ್​​​ 1 ರಂದು ರವಿ ಮದುವೆ ಇದೆ. ಮದುವೆಗೆ ಮಾಜಿ ಸಿಎಂ ಕುಮಾರಸ್ವಾಮಿಯನ್ನ ಕರೆಸಿ ಅಂತ ಜೆಡಿಎಸ್​​ ಮುಖಂಡರ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದ್ರೆ, ಜೆಡಿಎಸ್​​ ಮುಖಂಡರು ಕುಮಾರಸ್ವಾಮಿ ಬರುವ ಬಗ್ಗೆ ಇನ್ನೂ ಭರವಸೆ ನೀಡಿಲ್ಲ. ಮದುವೆಗೆ ಇನ್ನು ಕೆಲವೇ ದಿನವಷ್ಟೇ ಬಾಕಿ ಇದೆ.ಆದ್ರಿಂದ ಮನನೊಂದು ರವಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸ್ತಿದ್ದಾರೆ. ಲಗ್ನ ಪತ್ರಿಕೆ, ಕುಮಾರಸ್ವಾಮಿ ಫೋಟೋ ಹಿಡಿದು ತಮ್ಮ ಮನೆ ಮುಂದೆಯೇ ರವಿ ಧರಣಿ ಕುಳಿತಿದ್ದಾರೆ. ಕುಮಾರಸ್ವಾಮಿಯೇ ಮದುವೆಗೆ ಬಂದು “ಬ್ರದರ್ ಚೆನ್ನಾಗಿರಿ” ಎಂದು ಹಾರೈಸಬೇಕು ಎನ್ನುವುದಷ್ಟೇ ಈತನ ಬೇಡಿಕೆ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here