ವೋಟ್​ ಕೇಳೋಕೆ ಹೋದ ಸುಮಲತಾಗೆ ಪ್ರಶ್ನೆಗಳ ಸುರಿಮಳೆ! ಮಂಡ್ಯ ಜನರ ಪ್ರಶ್ನೆಗೆ ಉತ್ತರ ಕೊಡ್ತಾರಾ ಸುಮಲತಾ!

ಮಂಡ್ಯ  ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ಚುನಾವಣೆಯ ರಂಗೇರಿದೆ  ಇಂಡಿಯಾನೇ ಮಂಡ್ಯದತ್ತ ತಿರುಗಿ ನೋಡುವಂತೆ ಮಾಡಿದೆ. ಮಂಡ್ಯ   ಅಖಾಡದಲ್ಲಿರೋ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಮಂಡ್ಯದ ಜನ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಲೆ ಇದ್ದಾರೆ. ಸೋಷಿಯಲ್​​ ಮೀಡಿಯಾಗಳಲ್ಲಿ ಈ ಪ್ರಶ್ನೆಗಳು ಹರಿದಾಡುತ್ತಲೇ ಇದೆ. ಹಾಗಿದ್ರೆ ಆ ಜನರು ಕೇಳೋ ಪ್ರಶ್ನೆಗಳೇನು ನೀವೇ ಓದಿ…

ನೀವು ಬೆಂಗಳೂರು, ಸಿಂಗಾಪುರ್​​ ಅಂತಿದ್ದ ಜನ.. ಈ ಎಲೆಕ್ಷನ್​ ಅಂತ ಮಂಡ್ಯಗೆ ಬಂದಿದ್ದಾರಾ..? ನೀವು ಯಾವಾಗಲೂ ನಮ್ಮ ಕೈಗೆ ಸಿಗ್ತೀರಾ ಅಂತ ಹೇಗೆ ನಂಬೋದು ನಿಮ್ಮನ್ನ..?

ಸುಮಕ್ಕಾ ರೈತರ, ಅಂಬಿ ಸಂಘದ ಜನರನ್ನು ಬೆಂಬಲ ಕೇಳ್ತಿದ್ದಾರಲ್ಲಾ..? ಪುಟ್ಟಣ್ಣ ಸತ್ತಾಗ.. ನಿಮ್ಮ ಭಾವ ಸತ್ತಾಗ ಯಾಕೆ ಬಂದಿಲ್ಲ..? ಅಂಬರೀಶ್​ ಚುನಾವಣೆಗೆ ನಿಂತಾಗ ಒಂದು ಬಾರಿಯೂ ಮತದಾನ ಮಾಡಿಲ್ಲ ಯಾಕೆ..?

ಸುಮಲತಾ ಅಕ್ಕ ನೀವು ಬಿಜೆಪಿ ಅಭ್ಯರ್ಥಿ ಅಲ್ಲ ಅಂತ ಹೇಳ್ತೀರಲ್ವಾ.. ಆಗಾದ್ರೆ ಯಡಿಯೂರಪ್ಪ ಯಾಕೆ ಸುಮಲತಾ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಂತ ಹೇಳಿದ್ರು.. ಮೊನ್ನೆ ಮೈಸೂರಿನಲ್ಲಿ ಮೋದಿ ಕೂಡ ಬಿಜೆಪಿ ಬೆಂಬಲಿಗರು ಸುಮಲತಾಗೆ ಬೆಂಬಲಕೊಡಿ ಅಂದಿದ್ಯಾಕೆ..?

‘ಗೆದ್ದು ಇಲ್ಲಿಗೆ ಬರದಿದ್ರೆ ನಾವೇನ್​ ಮಾಡೋಣ’‘ಈಗ ವೋಟ್​ ಕೇಳೋಕೆ ಬಂದಿದ್ದೀರಿ’‘ನೀವು ಮಂಡ್ಯಕ್ಕೆ ಏನ್​ ಮಾಡಿದ್ದೀರಿ’  ಎಂದು ಪ್ರಶ್ನೆಗಳನ್ನು ಕೇಳುತ್ತ ಇದ್ದಾರೆ.

ಈಪ್ರಶ್ನೆಗಳು ಎಲ್ಲೆಡೆ ವೈರಲ್​ ಆಗಿದ್ದು, ಜೆಡಿಎಸ್ ಸೇರಿದಂತೆ ಮೈತ್ರಿ ಪಕ್ಷದ ಕಾರ್ಯಕರ್ತರು ಈ ಹೇಳಿಕೆಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಮತ್ತಷ್ಟು ವೈರಲ್ ಮಾಡ್ತಿದ್ದಾರೆ. ಮತದಾನಕ್ಕೆ ಎರಡೇ ದಿನ ಬಾಕಿ ಇರುವಂತೆ ಈ  ರೀತಿ ಪ್ರಶ್ನೆಗಳು ಹರಿದಾಡುತ್ತಿರುವುದು ಸುಮಲತಾಗೆ ಮುಜುಗರ ತಂದಿದ್ದು, ಇದು ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಕಾದು ನೋಡಬೇಕಿದೆ.