ಮಂಗಳೂರಲ್ಲೊಂದು ಲವ್ ಜೆಹಾದ್ ? ದುರ್ಗಾವಾಹಿನಿ ಕಾರ್ಯಾಚರಣೆ !!

Mangalore: Woman Reject her boyfriend after Police speaks.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕೋಮುಸೂಕ್ಷ್ಮ ಪ್ರದೇಶ. ಚಿಕ್ಕ-ಪುಟ್ಟ ಕಾರಣಕ್ಕೂ ಇಲ್ಲಿ ಧರ್ಮಗಳ ನಡುವೆ ವೈಷಮ್ಯ ಗರಿಗೆದರುತ್ತದೆ. ಇದೀಗ ಈ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಅಂತರ ಧರ್ಮಿಯ ಪ್ರೇಮ ಪ್ರಕರಣವೊಂದು ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದು, ಕೊನೆಗೂ ಸೂಕ್ತ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಹಿಂದು ಕಾರ್ಯಕರ್ತರ ಕಾರ್ಯಾಚರಣೆಯಿಂದ ಪ್ರಕರಣ ಸುಖಾಂತ್ಯಗೊಂಡಿದೆ.


ಮಂಗಳೂರು ಮೂಲದ ಹಿಂದು ಯುವತಿಯೊಬ್ಬಳು ಮುಸ್ಲಿಂ ಯುವಕ ಅಮೀರ್ ಸುಹೇಲ್​​ ಎಂಬಾತನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಬದುಕಲು ಇಚ್ಛಿಸುತ್ತೇನೆ ಎಂದ ಆಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾಳೆ. ಈ ಆಡಿಯೋ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಇನ್ನು ಈ ಆಡಿಯೋದ ಬೆನ್ನುಹತ್ತಿ ಹೋದ ಹಿಂದು ಸಂಘಟನೆಗಳು ಯುವತಿಯನ್ನು ರಕ್ಷಿಸಿದ್ದಾರೆ. ಆಕೆ ಪ್ರೀತಿಸುತ್ತಿದ್ದ ಯುವಕ ಗಾಂಜಾ ವ್ಯಾಪಾರಿಯಾಗಿದ್ದು, ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಸಂದರ್ಭದಲ್ಲಿ ರೆಡ್​ ಹ್ಯಾಂಡಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಪೊಲೀಸರ ಅತಿಥಿಯಾಗಿದ್ದ. ಗಾಂಜಾ ಮಾರಾಟ ಮಾಡುವ ಗ್ಯಾಂಗ್​​ನಲ್ಲಿ ಈತನ ಹೆಸರು ಕೇಳಿಬಂದಿದ್ದು, ಪೊಲೀಸ್​​ ಲಿಸ್ಟ್​​ನಲ್ಲೂ ಈತನ ಹೆಸರಿದೆ ಎನ್ನಲಾಗಿದೆ. ಈತನ ಮನವೊಲಿಸುವಿಕೆಗೆ ಮನಸೋತ ಯುವತಿ ಗಾಂಜಾ ಆಸೆಗೆ ಈತನ ಬಲೆಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.

ಇದೀಗ ಯುವತಿಯನ್ನು ಪತ್ತೆ ಹಚ್ಚಿದ ದುರ್ಗಾವಾಹಿನಿ ಕಾರ್ಯಕರ್ತೆಯರು ಕರೆತಂದು ಸುದೀರ್ಘ ಅವಧಿಯ ಕೌನ್ಸಲಿಂಗ್ ನಡೆಸಿದ ಬಳಿಕ ಯುವತಿ ಆತನ ಜೊತೆ ತೆರಳವುದನ್ನು ತಪ್ಪಿಸಲಾಗಿದ್ದು, ಹೆತ್ತವರೊಂದಿಗೆ ವಾಸಿಸುವುದಾಗಿ ಯುವತಿ ತಪ್ಪೊಪ್ಪಿಕೊಂಡಿದ್ದಾಳೆ. ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ಕೋಮು ಸಂಘರ್ಷ ಹುಟ್ಟುಹಾಕಬಹುದಾಗಿದ್ದ ಪ್ರಕರಣವೊಂದು ಸುಖಾಂತ್ಯ ಕಂಡಂತಾಗಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here