ಮಂಗಳೂರು ಮೇಯರ್​ ಡ್ಯಾನ್ಸ್​ ನೋಡಿ- ಇದು ಅಪರೂಪದ ಕಲಾಪ್ರದರ್ಶನ

ಮೇಯರ್ ಸಕತ್ ಡ್ಯಾನ್ಸ್.

adಮಂಗಳೂರು ಮೇಯರ್​​ ಕವಿತಾ ಸನೀಲ್ ಕರಾಟೆಪಟು ಅನ್ನೋದು ಎಲ್ಲರಿಗೂ ಗೊತ್ತು. ಕರಾಟೆ ಕಾರ್ಯಕ್ರಮವೊಂದರ ಉದ್ಘಾಟನೆಗೆ ಬಂದಿದ್ದ ಸಿಎಂಗೆ ಪಂಚ್​​ ಕೊಟ್ಟಿದ್ದ ಮೇಯರ್ ಕವಿತಾ ಸನೀಲ್ ರಾಜ್ಯದಾದ್ಯಂತ ಸುದ್ದಿಯಾಗಿದ್ದರು. ಆದರೇ ಮೇಯರ್ ಇದೀಗ ಕವಿತಾ ಸನಿಲ್​ ನೃತ್ಯ ವೈಭವ ಕೂಡ ಪ್ರೇಕ್ಷಕರನ್ನು ರಂಜಿಸಿದೆ. ಹೌದು ಮಂಗಳೂರಿನ ಪುರಭವನದಲ್ಲಿ ಪಾಲಿಕೆ ದಿನಾಚರಣೆ ಅಂಗವಾಗಿ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಮೇಯರ್​ ಕವಿತಾ ಸನೀಲ್​ ಸಖತ್​ ಕುಣಿದು ಜನರನ್ನು ರಂಜಿಸಿದ್ರು.

 

ಜನಪ್ರತಿನಿಧಿಗಳಿಗಾಗಿ ಏರ್ಪಡಿಸಲಾದ ಈ ಕಾರ್ಯಕ್ರಮದಲ್ಲಿ ಎಲ್ಲ ಜನಪ್ರತಿನಿಧಿಗಳ ಕೆಲಸ ಒತ್ತಡ ಬಿಟ್ಟು ಜಾಲಿ ಮೂಡಿನಲ್ಲಿದ್ದು ತಮ್ಮ ಕಲಾಪ್ರತಿಭೆಯನ್ನು ಒರೆಗೆ ಹಚ್ಚಿದರು. ಅದರಲ್ಲೂ ಮೇಯರ್​ ಕವಿತಾ ಸನೀಲ್​ ಅಂತು, ಸಾಂಪ್ರದಾಯಿಕ ವೇಷಭೂಷಣ ತೊಟ್ಟು, ತುಳು ಹಾಡೊಂದಕ್ಕೆ ಕುಣಿದು ಕುಪ್ಪಳಿಸಿದರು.

ಕೇವಲ ಮೇಯರ್ ಮಾತ್ರವಲ್ಲದೇ  ಪಾಲಿಕೆಯ ಇನ್ನುಳಿದ ಸಿಬ್ಬಂದಿಗಳು ಬೇರ-ಬೇರೆ ರೀತಿಯ ಕಲಾಪ್ರದರ್ಶನ ನೀಡಿ ಸೈ ಎನ್ನಿಸಿಕೊಂಡರು. ಇನ್ನು ಈ ಕಾರ್ಯಕ್ರಮಕ್ಕೆ  ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪಾಲ್ಗೊಂಡು ಜನಪ್ರತಿನಿಧಿಗಳ ಕಲಾಪ್ರದರ್ಶನಕ್ಕೆ ಸಾಕ್ಷಿಯಾದರು. ಇದೇ ವೇಳೆ ನೀರನ್ನು ಮಿತವಾಗಿ ಎಂಬ ಬಳಸಿ ಸಂದೇಶವುಳ್ಳ ರೂಪಕವನ್ನು ಪ್ರದರ್ಶಿಸಲಾಯಿತು. ಒಟ್ಟಿನಲ್ಲಿ ಮೇಯರ್​  ಬಹುಮುಖ ಪ್ರತಿಭೆಗೆ ಮಂಗಳೂರು ಸಾಕ್ಷಿಯಾಯಿತು.