ಮಹಿಳಾ ಕಾರ್ಪೊರೇಟರ್​​ ಮೇಲೆ ಕೈಇಟ್ಟ ಕಾಂಗ್ರೆಸ್ ಮುಖಂಡನ ಕತೆ ಏನಾಯ್ತು ಗೊತ್ತಾ?

ಮೊಹಮ್ಮದ್ ನಳಪಾಡ್,ಪೆಟ್ರೋಲ್ ನಾರಾಯಣಸ್ವಾಮಿ ದೌರ್ಜನ್ಯದ ಬಳಿಕ ಇದೀಗ ಕಾಂಗ್ರೆಸ್ ಜಿಲ್ಲಾಧ್ಯಕ್ಷನೊಬ್ಬ ತಮ್ಮ ಪಕ್ಷಕ್ಕೆ ಸೇರಿದ ಮಹಿಳಾ ಕಾಂಗ್ರೆಸ್ ಮಹಿಳಾ ಕಾರ್ಪೋರೇಟರ್ ಒಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಶಾಸಕರ ಮನೆಯಲ್ಲೇ ಥಳಿತಕ್ಕೊಳಗಾದ ಘಟನೆ ಮಂಗಳೂರಿನ ಸುರತ್ಕಲ್​ನಲ್ಲಿ ನಡೆದಿದೆ.

ಮಂಗಳೂರು ಉತ್ತರ ಶಾಸಕ ಮೊಯಿದ್ದೀನ್ ಬಾವಾ ಅವ್ರ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಎಂಬವನೇ ಏಟು ತಿಂದ ಕಾಂಗ್ರೆಸ್ ಮುಖಂಡ. ಈತ ಹಲವು ಸಮಯದಿಂದ ಮಹಿಳೆಯರಿಗೆ ಕಿರುಕುಳ ನೀಡ್ತಾ ಇದ್ದು, ಹಲವರಿಗೆ ಮಾನಸಿಕವಾಗಿ ತೊಂದರೆ ಕೊಡ್ತಿದ್ದ ಅನ್ನೋ ಆರೋಪವಿತ್ತು. ಅಲ್ಲದೆ ಸ್ವತಃ ಮಂಗಳೂರು ಪಾಲಿಕೆಯ ಕಾಂಗ್ರೆಸ್ ಕಾರ್ಪೋರೇಟರ್ ಪ್ರತಿಭಾ ಕುಳಾಯಿಗೂ ಕಿರುಕುಳ ನೀಡಿದ್ದಾನೆ. ನಿನ್ನೆ ರಾತ್ರಿ ಶಾಸಕ ಬಾವಾರ ಮನೆಯ ಬಳಿಯ ಕಚೇರಿಯಲ್ಲಿ ಪ್ರತಿಭಾ ಕುಳಾಯಿ ಇದ್ದ ವೇಳೆ ಆಗಮಿಸಿದ ಸತ್ತಾರ್, ಮೈ ಕೈ ಮುಟ್ಟಿ ಕಿರುಕುಳ ನೀಡಿದ್ದಾನೆ ಎಂದು ಪ್ರತಿಭಾ ಆರೋಪಿಸಿದ್ದಾರೆ.

ಹೀಗಾಗಿ ಈತನ ವರ್ತನೆಯಿಂದ ಬೇಸತ್ತ ಪ್ರತಿಭಾ ಶಾಸಕರ ಕಚೇರಿಯಲ್ಲೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ಸಾರೆ. ಈ ವೇಳೆ ಆತ ಅಲ್ಲಿಂದ ಪರಾರಿಯಾದಗ ಅಟ್ಟಿಸಿಕೊಂಡು ಹೋಗಿ ಕಚೇರಿ ಹೊರಗೂ ಸತ್ತಾರ್ ಗೆ ಧರ್ಮದೇಟು ನೀಡಿದ್ದಾರೆ. ಸುರತ್ಕಲ್ ವ್ಯಾಪ್ತಿಯಲ್ಲಿ ಈ ಹಿಂದೆಯೂ ಈತ ಹಲವು ಮಹಿಳೆಯರಿಗೆ ಕಿರುಕುಳ ನೀಡಿದ್ದ ಆರೋಪ ಹೊಂದಿದ್ದು, ಪೊಲೀಸ್ ದೂರು ಕೂಡ ನೀಡಲಾಗಿತ್ತು. ಅಲ್ಲದೇ ಈತನ ಕೃತ್ಯದಿಂದ ರೊಚ್ಚಿಗೆದ್ದ ಹಿಂದೂ ಸಂಘಟನೆಗಳ ಯುವಕರು ಈತನಿಗೆ ಥಳಿಸಿ ಕೈ ಮುರಿದಿದ್ದರು ಎನ್ನಲಾಗಿದೆ. ಸದ್ಯ ಧರ್ಮಸೇಟು ತಿಂದ ಸತ್ತಾರ್ ಕಾಮಪುರಣ ಮಂಗಳೂರಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.