ಕುಡುಕ ಮಗನನ್ನು ತಂದೆಯೇ ಕೊಂದ- ಮಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ!!

ಕುಡಿದ ಮತ್ತಿನಲ್ಲಿ ಅದೇಷ್ಟೋ ಅಪರಾಧ ಕೃತ್ಯಗಳು ನಡೆದು ಹೋಗುತ್ತವೇ. ಇದಕ್ಕೆ ಪ್ರತಿನಿತ್ಯ ನೂರಾರು ಉದಾಹರಣೆಗಳು ಕೂಡ ಸಿಗುತ್ತೆ. ಅಂತಹುದೇ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದ್ದು, ಕುಡುಕ ಮಗನ ದೌರ್ಜನ್ಯ ಸಹಿಸಲಾರದೇ ತಂದೆಯೇ ಕರುಳ ಕುಡಿಯನ್ನು ಹಲ್ಲೆ ಮಾಡಿ ಕೊಲೆಗೈಯ್ದ ಘಟನೆ ನಡೆದಿದೆ.

ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮಟ್ಲ ಎಂಬಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು ನವೀನ್ ಎಂದು ಗುರುತಿಸಲಾಗಿದೆ. ನವೀನ್ ಈ ಮೊದಲು ಡಿಸೆಂಬರ್ 31 ರಂದು ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿ ತಂದೆಯ ಮೇಲೆ ಹಲ್ಲೆ ಮಾಡಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಅದರ ಬಳಿಕವೂ ಹಲವು ಭಾರಿ ತಂದೆ ಹಾಗೂ ನವೀನ ನಡುವೆ ಗಲಾಟೆಯಾಗಿತ್ತು. ನಿನ್ನೆ ರಾತ್ರಿ ಊಟ ಮಾಡುತ್ತಿದ್ದ ಸಂದರ್ಭ ತಂದೆ ಹಾಗೂ ಮಗ ನವೀನ್ ನಡುವೆ ಮಾತಿಗೆ ಮಾತು ಬೆಳೆದಿದೆ.

 

ಇಂದು ಗಂಭೀರ ಹಂತಕ್ಕೆ ತಲುಪಿದ ಹಿನ್ನಲೆಯಲ್ಲಿ ತಂದೆ ಹಾಗೂ ನವೀನ್ ನ ಸಹೋದರ ಸೇರಿ ನವೀನ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಲ್ಲಿ ನವೀನ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಘಟನೆಗೆ ಸಂಬಂಧಿಸಿ ತಂದೆ ಹಾಗೂ ಇನ್ನೊರ್ವ ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.ಒಟ್ಟಿನಲ್ಲಿ ಕುಡುಕನ ಅವಾಂತರದಿಂದ ತಂದೆಯೇ ಮಗನ ಕೊಲೆ ಮಾಡುವಂತಾಗಿದ್ದು ಮಾತ್ರ ದುರಂತವೇ ಸರಿ.