ಮಹಾಮಳೆಗೆ ನಲುಗಿದ ಮಂಗಳೂರು- ಜಿಲ್ಲೆಯಲ್ಲಿ ಪ್ರವಾಹಭೀತಿ!

 

ad

ಘಟ್ಟದ ಭಾಗದಲ್ಲಿ ಸುರಿದ ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಲಭಾಗದ ಗ್ರಾಮಗಳು ಅಕ್ಷರಸಃ ನಲುಗಿ ಹೋಗಿದೆ. ಜಿಲ್ಲೆಯ ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮಗಳಲ್ಲಿ ನೆರೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದ್ದು, ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ದ ಶಿಶಿಲೇಶ್ವರ ದೇವಸ್ಥಾನದ ನದಿಯಲ್ಲಿ ಭಾರೀ ಪ್ರವಾಹ ಬಂದ ಪರಿಣಾಮ ದೇವಸ್ಥಾನ ಮುಳುಗಿದೆ.

 

ಗ್ರಾಮದ ಡ್ಯಾಂ, ತೂಗು ಸೇತುವೆ, ತೋಟಗಳೂ ನೆರೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿವೆ. ಇನ್ನು ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲೂ ಭಾರೀ ಮಳೆಗೆ ಸಾಕಷ್ಟು ಅನಾಹುತಗಳು ಸಂಭವಿಸಿವೆ. ತಗ್ಗು ಪ್ರದೇಶದ ತೋಟ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇನ್ನು ಚಾರ್ಮಾಡಿ ಗ್ರಾಮದ ಬೆಂದ್ರಾಳ ಬಳಿ ಗುಡ್ಡ ಕುಸಿದು ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ಪ್ರವಾಹದಿಂದಾಗಿ ನೆರಿಯ ಕಕ್ಕಿಂಜೆ ಗ್ರಾಮರ ರಸ್ತೆ ಸಂ ಚಾರ ಬಂದ್ ಆಗಿ ವಾಹನ ಸವಾರರೂ ಪರದಾಡುವಂತಾಯಿತು.

 

ಬೆಳ್ತಂಗಡಿ ತಾಲೂಕಿನ ಬೆಂದ್ರಾಳು ಗ್ರಾಮದಲ್ಲಿ ನೆರೆ ನೀರಿನಿಂದ ಶಾಲಾ ಮಕ್ಕಳು ಪರದಾಡಿದ್ರು. ನೆರೆ ನೀರಿನ ರಭಸ ಲೆಕ್ಕಿಸದೆ ಪುಟ್ಟ ಮಕ್ಕಳು ರಸ್ತೆ ದಾಟೋ ಪ್ರಯತ್ನ ನಡೆಸಿದ ದೃಶ್ಯಗಳೂ ಕಂಡುಬಂದವು. ಈ ವೇಳೆ ಬಾಲಕಿಯೊಬ್ಬಳು ಅಯತಪ್ಪಿ ಬೀಳುವವಳಿದ್ದಲು. ಇನ್ನು ನೆರೆ ನೀರನ ರಭಸವನ್ನು ಲೆಕ್ಕಿಸದೇ ಕೆಲವು ವಾಹನ ಸವಾರರು ರಸ್ತೆ ದಾಟೋ ಪ್ರಯತ್ನ ಮಾಡುವುದು ಸ್ಥಳದಲ್ಲಿ ಕಂಡು ಬಂತು.
ಮಳೆ ಪ್ರವಾಹದಿಂದ ಜನರಿಗೆ ಸಾಕಷ್ಟು ಸಮಸ್ಯೆಯಾಗಿದ್ದು ಜಿಲ್ಲಾಡಳಿತ ಮುಂಜಾಗರೂಕತೆಯ ಕ್ರಮವಾಗಿ ಅಪಾಯಕಾರಿ ಪ್ರದೇಶಗಳಲ್ಲಿ ಬೋಟ್ ಹಾಗೂ ಸಿಬಂಧಿ ನಿಯೋಜನೆ ಮಾಡಿದೆ. ಒಟ್ಟಿನಲ್ಲಿ ಕೆಲ ದಿನಗಳ ನಂತರದ ಬಿಡುವಿನ ಬಳಿಕ ಸುರಿದ ಮಳೆರಾಯ ಜನಸಾಮಾನ್ಯರನ್ನು ಕಂಗಾಲು ಮಾಡಿದ್ದಾನೆ.