ನೆಲಕ್ಕೆ ಬಿದ್ದ ಹುಲಿವೇಷಧಾರಿ!!

ಮಾನವ ಪಿರಮಿಡ್ ನಿರ್ಮಿಸಿ ಸಾಹಸ ಪ್ರದರ್ಶಿಸುತ್ತಿದ್ದ ವೇಳೆ ಹುಲಿವೇಷಧಾರಿಯೊಬ್ಬ ನಿಯಂತ್ರಣ ತಪ್ಪಿ ನೆಲಕ್ಕುರುಳಿ ಗಾಯಗೊಂಡ ಘಟನೆ ಮಂಗಳೂರಿನ ಬೆಸೆಂಟ್ ಕಾಲೇಜು ಆವರಣದಲ್ಲಿ ನಡೆದಿದೆ.

 ಈ ಅವಘಡ ಕಾಲೇಜು ವಿದ್ಯಾರ್ಥಿಗಳ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಂಗಳಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಹುಲಿವೇಷಧಾರಿ ತಂಡವೊಂದು ನಗರದಾದ್ಯಂತ ನೃತ್ಯದ ಜೊತೆಗೆ ಸಾಹಸ ಪ್ರದರ್ಶನ ನಡೆಸುತ್ತಿತ್ತು. ಈ ವೇಳೆ ಮಾನವ ಪಿರಮಿಡ್ ನಿರ್ಮಿಸಲಾಗುತ್ತಿತ್ತು. ಚಿಕ್ಕಮಕ್ಕಳು ಸೇರಿದಂತೆ ಹಲವರು ಈ ಸಾಹಸ ಪ್ರದರ್ಶನದಲ್ಲಿ ಭಾಗಿಯಾಗಿದ್ದರು.

ಈ ವೇಳೆ ಕೊನೆಯ ಸಲ ಪ್ರದರ್ಶನ ನೀಡಲು ನಿರ್ಮಿಸಲಾದ ಪಿರಾಮಿಡ್​ ಮೇಲೆ ಹುಲಿ ವೇಷಧಾರಿಯೊಬ್ಬ ಹತ್ತಿದ್ದ. ಬಳಿಕ ರಿಂಗ್ ಬಳಸಿ ನೆಲಕ್ಕೆ ಜಿಗಿಯುವ ಸಾಹಸ ಪ್ರದರ್ಶಿಸಲು ಮುಂದಾಗಿದ್ದಾನೆ. ಆದ್ರೆ ರಿಂಗ್ ಒಳಗಿನಿಂದ ಪಲ್ಟಿ ಹೊಡೆದು ನೆಲಕ್ಕೆ ಹಾರುವ ವೇಳೆ ರಿಂಗ್ ಕಾಲಿಗೆ ಸಿಕ್ಕಿಕೊಂಡು ಕೆಳಕ್ಕೆ ಬಿದ್ದಿದ್ದಾನೆ. ತಕ್ಷಣ ಸ್ಪಂದಿಸಿದ ಸ್ಥಳೀಯರು ಹುಲಿಚೇಷಧಾರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.