ಮಂತ್ರಾಲಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್!!

ಸೂಪರ್ ಸ್ಟಾರ್ ರಜನಿಕಾಂತ್, ದಲೈವಾ  ರಜನಿಕಾಂತ್ ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠಕ್ಕೆ ಧೀಡಿರ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು. ಮುಂಜಾನೆ 7.30 ಕ್ಕೆ ತಮ್ಮ ಆಪ್ತರ ಜೊತೆ ರಜನಿಕಾಂತ್​ ಅಪ್ಪಟ ಸಾಂಪ್ರದಾಯಿಕ ಉಡುಪು ಪಂಜೆ-ಶಲ್ಯದಲ್ಲಿ ರಾಯರ ಮಠಕ್ಕೆ ಆಗಮಿಸಿದರು.


ಮೊದಲು ಮಂತ್ರಾಲಯದ ಮಂಚಾಲಮ್ಮ ದೇವಿಯ ದರ್ಶನ ಪಡೆದ ರಜನಿಕಾಂತ್, ಬಳಿಕ ಮಂತ್ರಾಲಯದ ಆರಾಧ್ಯದೈವ ರಾಘವೇಂದ್ರಸ್ವಾಮಿಗಳ ಬೃಂದಾವನ ದರ್ಶನ ಪಡೆದರು. ಬಳಿಕ ಆಂಜನೇಯಸ್ವಾಮಿಗೂ ಪೂಜೆ ಪ್ರಾರ್ಥನೆ ಸಲ್ಲಿಸಿದರು.


ಬಳಿಕ ಮಂತ್ರಾಲಯದ ಪೀಠಾಧೀಶರಾದ ಸುಭುದೇಂದ್ರಸ್ವಾಮಿಗಳ ದರ್ಶನ, ಆಶೀರ್ವಾದ ಪಡೆದ ರಜನಿಕಾಂತ್ ಶ್ರೀಗಳ ಜೊತೆ ಕನ್ನಡದಲ್ಲಿಯೇ ಚರ್ಚೆ ನಡೆಸಿದರು. ಅಷ್ಟೇ ಅಲ್ಲ ಮಠದ ಬಗ್ಗೆ ಶ್ರೀಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಂತ್ರಾಲಯದ ಪರವಾಗಿ ರಜನಿಕಾಂತ್​​ರಿಗೆ ಸುಭುದೇಂದ್ರ ಶ್ರೀಗಳು ಶಾಲು ಹೊದೆಸಿ ಸನ್ಮಾನಿಸಿದರು. ಇತ್ತೀಚಿಗಷ್ಟೇ ನಟ ರಜನಿಕಾಂತ್ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿ ಪಕ್ಷ ಹುಟ್ಟುಹಾಕುವ ಮುನ್ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂತ್ರಾಲಯದ ಭೇಟಿ ಮಹತ್ವ ಪಡೆದುಕೊಂಡಿದೆ.

 

 

ಪ್ರತ್ಯುತ್ತರ ನೀಡಿ

Please enter your comment!
Please enter your name here