ದೊಡ್ಡಗೌಡ್ರ ಮನೆಯಲ್ಲಿ ಮದುವೆ ಸಂಭ್ರಮ !! ಸೂರಜ್ ರೇವಣ್ಣ – ಸಾಗರಿಕಾ ವಿವಾಹ !!

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ.

ಮಾಜಿ ಸಚಿವ ಎಚ್.​ಡಿ ರೇವಣ್ಣ ಹಿರಿಯ ಪುತ್ರ, ದೇವೇಗೌಡರ ಮೊಮ್ಮಗ ಸೂರಜ್​ ರೇವಣ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರಮನೆ ಮೈದಾನದಲ್ಲಿ ನಡೀತಾ ಇರುವ ಅದ್ದೂರಿ ಮದುವೆಯಲ್ಲಿ ಎಚ್​.ಡಿ. ರೇವಣ್ಣ, ಭವಾನಿ ರೇವಣ್ಣ ದಂಪತಿಯ ಹಿರಿಯ ಪುತ್ರ ಸೂರಜ್​ ಅವ್ರು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಹುಳುವಾಡಿ ಬಿ ರಮೇಶ್ ಹಾಗೂ ಅನ್ನಪೂರ್ಣ ದಂಪತಿಯ ಪುತ್ರಿ ಸಾಗರಿಕರನ್ನು ವರಿಸಿದ್ರು.

ಇಂದು ಬೆಳಿಗ್ಗೆ 6.45 ರಿಂದ 7.30 ರ ಶುಭ ಮುಹೂರ್ತದಲ್ಲಿ ಸಾಗರಿಕರನ್ನು ಸೂರಜ್ ಮಾಂಗಲ್ಯಧಾರಣೆ ಮಾಡಿದ್ರು. ಈ ಮೂಲಕ ಮಾಜಿ ಸಚಿವ ಎಚ್.​ಡಿ ರೇವಣ್ಣ, ಭವಾನಿಯವರ ಹಿರಿಯ ಪುತ್ರ ಸೂರಜ್ ಹೊಸ ಜೀವನಕ್ಕೆ ಕಾಲಿಟ್ರು. ಬೆಳ್ಳಂಬೆಳಗ್ಗೆ ನಡೆದ ವಿವಾಹ ಕಾರ್ಯಕ್ರಮದಲ್ಲಿ ದೇಶದ ಘಟನುಘಟಿ ಉದ್ಯಮಿಗಳು ರಾಜಕಾರಣಿಗಳು ಭಾಗಿಯಾಗಿದ್ದರು. ಅಲ್ಲದೆ ದೇಶದ ಹಲವು ಹೈಕೋರ್ಟ್ ಗಳ ನ್ಯಾಯಾದೀಶರೂ ಮದುವೆಗೆ ಸಾಕ್ಷಿಯಾದರು.