ಮೊಗ್ಗಿನ ಜಡೆಗೆ ಮುರಿದ ಮದುವೆ- ಹೊಸಕೋಟೆಯಲ್ಲೊಂದು ವಿಚಿತ್ರ ಪ್ರಸಂಗ.

ಹೊಸ ಕನಸುಗಳನ್ನು ಹೊತ್ತು ಹಸೆಮಣೆ ಏರಲು‌ ಮುಂಧಾಗಿದ್ದ ಆ ಯುವತಿ ಪಾಲಿಗೆ ಅಕೆಯ ಮೊಗ್ಗಿನ ಜಡೆಯೇ ವಿಲನ್ ಆಗಿ ಪರಿಣಮಿಸಿದೆ. ಹೌದು ವರನೊಬ್ಬ ವಧುವಿನ ಮೊಗ್ಗಿನ ಸರಿಯಿಲ್ಲ ಎಂಬ ಕಾರಣಕ್ಕೆ ವಿವಾಹ ನಿರಾಕರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ‌ ಹೊಸಕೋಟೆಯಲ್ಲಿ ನಡೆದಿದೆ.

ಹೊಸಕೋಟೆಯ ಭೀಮಾಪುರದ ಯುವಕನ ಜೊತೆ ವಿಜಯಪುರದ ಯುವತಿಯೊರ್ವಳ ವಿವಾಹ ನಿಶ್ಚಯವಾಗಿತ್ತು. ನಿನ್ನೆ ಹೊಸಕೋಟೆಯ ಭೀಮನಾಯಕನಹಳ್ಳಿಯ ಆಂಜನೇಯ ದೇವಾಲಯದಲ್ಲಿ ವಿವಾಹ ಕೂಡಾ ಏರ್ಪಡಿಸಲಾಗಿತ್ತು. ಈ ವೇಳೆ ಮಂಟಪಕ್ಕೆ ಬಂದ ವಧುವಿನ ಮೊಗ್ಗಿನ  ಜಡೆ‌ ಸರಿಯಿಲ್ಲ ಎಂದು ವರ ಹಾಗೂ ಆತನ ಸಂಬಂಧಿಗಳು ತಗಾದೆ ತೆಗೆದಿದ್ದಾರೆ. ವಧುವಿನ ಮೊಗ್ಗಿನ ಜಡೆ ಚೆನ್ನಾಗಿಲ್ಲ. ಅಲಂಕಾರಕ್ಕೆ ಎರಡೆರಡು ಬಗೆಯ ಹೂವುಗಳನ್ನು ಬಳಸಲಾಗಿದೆ ಎಂದೆಲ್ಲ ಕಿರಿ-ಕಿರಿ ಆರಂಭಿಸಿದ್ದಾರೆ. ಇದೇ ಕಾರಣಕ್ಕೆ ವರ ಮತ್ತು ವಧುವಿನ ಕುಟುಂಬದ ನಡುವೆ ಗಲಾಟೆ ಕೂಡಾ ಆರಂಭವಾಗಿದೆ. ಇದರಿಂದ ಬೇಸತ್ತ ವಧುವಿನ ಕಡೆಯವರು ಮದುವೆ ಬಹಿಷ್ಕರಿಸಿ ವಧುವನ್ನು ಕಲ್ಯಾಣಮಂಟಪದಿಂದ ಮನೆಗೆ  ಕರೆದೊಯ್ದಿದ್ದಾರೆ.


ಇದರಿಂದ ವರನ ಕಡೆಯವರಿಗೆ ಭಾರಿ ಮುಖಭಂಗ ಉಂಟಾಗಿದೆ. ತಕ್ಷಣ ಸಾವರಿಸಿಕೊಂಡ ಕುಟುಂಬಸ್ಥರು ಮದುವೆಗೆ ಬಂದಿದ್ದ ವರನ ಸಂಬಂಧಿ ಯುವತಿಯ ಮನವೊಲಿಸಿ ಆಕೆಯೊಂದಿಗೆ ವರನ ಮದುವೆ ಮಾಡಿ ಮರ್ಯಾದೆ ಉಳಿಸಿಕೊಂಡಿದ್ದಾರೆ. ಆದರೆ ಘಟನೆ ಸಂಬಂಧ ಎಲ್ಲಿಯೂ ಪ್ರಕರಣ ದಾಖಲಾಗಿಲ್ಲ‌. ಆದರೂ ಮೊಗ್ಗಿನ ಜಡೆ ಸರಿಯಾಗಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದುಕೊಂಡಿದ್ದು ಮಾತ್ರ ವಿಪರ್ಯಾಸವೇ ಸರಿ.

 

 

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here