ನ್ಯೂಜಿಲೆಂಡ್​ : ಕ್ರೈಸ್ಟ್​ಚರ್ಚ್​​​ನ ಮಸ್ಜಿದ್ ಅಲ್​​ ನೂರ್​​ ಮಸೀದಿ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ

ಕಳೆದ ರಾತ್ರಿ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಕ್ರೈಸ್ಟ್​ಚರ್ಚ್​​​ನ ಮಸ್ಜಿದ್ ಅಲ್​​ ನೂರ್​​ ಮಸೀದಿ ಸೇರಿ ಎರಡು ಕಡೆ ಫೈರಿಂಗ್ ನಡೆದಿದೆ. ಗುಂಡಿನ ದಾಳಿಯಲ್ಲಿ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ಪ್ರಾರ್ಥನೆ ಸಲ್ಲಿಸುವ ವೇಳೆ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದು, ಇದೊಂದು ಉಗ್ರರ ದಾಳಿ ಎಂದು ಶಂಕೆ ವ್ಯಕ್ತವಾಗಿದೆ.

 

ಬಾಂಗ್ಲಾ ಕ್ರಿಕೆಟಿಗರು ನೆಲೆಸಿದ್ದ ಹೋಟೆಲ್​​ ಪಕ್ಕದಲ್ಲಿಯೇ ಈ ಕೃತ್ಯ ನಡೆದಿದ್ದು, ದಾಳಿ ನಡೆಯುವ ಕೆಲಹೊತ್ತಿನ ಹಿಂದೆ ಕ್ರಿಕೆಟಿಗರು ಪ್ರಾರ್ಥನೆ ಸಲ್ಲಿಸಿದ್ರು ಎನ್ನಲಾಗಿದೆ. ಸದ್ಯ ಕೂದಲೆಳೆ ಅಂತರದಲ್ಲಿ ಬಾಂಗ್ಲಾ ಕ್ರಿಕೆಟಿಗರು ಪಾರಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ದಾಳಿ ನಡೆದ ಬಳಿಕ ಓರ್ವ ಮಹಿಳೆ ಸೇರಿದಂತೆ ನಾಲ್ವರು ಶಂಕಿತ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.