ಸಿದ್ದರಾಮಯ್ಯ ಸೋಲಿಸಲು ಬರುತ್ತಿದೆ ಆನೆ !! ಮೈಸೂರಿನಲ್ಲಿ ಇಂದು ತೆನೆ-ಗಜದ್ದೇ ಸದ್ದು !!

ಇಂದು ಮೈಸೂರಿಗೆ ಆನೆ ಬರಲಿದೆ. ಈ ಆನೆ ಅಂತಿಂಥ ಆನೆಯಲ್ಲ. ಕರ್ನಾಟಕದ ಕಾಂಗ್ರೆಸ್ಸಿಗರನ್ನು ನಿಂತಲ್ಲೇ ನಡುಗಿಸುವಂತಹ ಆನೆ ಇಂದು ತೆನೆಯೊಂದಿಗೆ ಮೈಸೂರಿನ ಮೂಲಕ ಕರ್ನಾಟಕಕ್ಕೆ ದಾಪುಗಲಿಕ್ಕಲಿದೆ.

ಹೌದು ಮೇ 12ರ ಕರ್ನಾಟಕ ಕುರುಕ್ಷೇತ್ರದಲ್ಲಿ ಸಿದ್ದು ಮಣಿಸಲು ಪ್ಲಾನ್​​​ ಸಿದ್ದವಾಗಿದ್ದು, ಸಿಎಂ ತವರು ಜಿಲ್ಲೆಯಲ್ಲೇ ದಲಿತ ಮತ ಬೇಟೆಗೆ ಜೆಡಿಎಸ್​ ರಣತಂತ್ರ ರೂಪಿಸಿದೆ.

ಇಂದು ಮೈಸೂರಿಗೆ ಆನೆ ಗುರುತಿನ ಬಿಎಸ್​ಪಿ ನಾಯಕಿ ಮಾಯಾವತಿ ಬರಲಿದೆ. ಇಂದು ಮಧ್ಯಾಹ್ನ ಮೈಸೂರಿನಲ್ಲಿ ಮಹಾರಾಜ ಕಾಲೇಜು‌ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮಾಯಾವತಿ ಭಾಗಿಯಾಗಲಿದ್ದಾರೆ.

ಜೆಡಿಎಸ್ ಮತ್ತು ಬಿಎಸ್ಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್ ಆಯ್ದ 20 ಕ್ಷೇತ್ರಗಳನ್ನು ಬಿಎಸ್ಪಿಗೆ ಬಿಟ್ಟುಕೊಟ್ಟಿದೆ. ಇದರಿಂದಾಗಿ ದಲಿತ ಮತ್ತು ಬಿಎಸ್ಪಿ ಪರವಾಗಿರುವ ಶೂದ್ರ ಸಮುದಾಯದ ಮತಗಳು ಜೆಡಿಎಸ್ ಗೆ ಬರಲಿದೆ.

ಮಾಯಾವತಿ ಮೈಸೂರು ಮೂಲಕ ಚುನಾವಣಾ ಪ್ರಚಾರದಲ್ಲಿ ತೊಡಗುವುದು ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿರುವ ದಲಿತ ಮತಗಳನ್ನ ಆಕರ್ಷಿಸುವ ತಂತ್ರಗಾರಿಕೆಯಾಗಿದೆ.

ಕಾಂಗ್ರೆಸ್ ಭದ್ರಕೋಟೆಯಾಗಿರುವ ದಲಿತ ಹಾಗೂ ಮುಸ್ಲಿಂ ಮತಗಳನ್ನು ಒಡೆಯಲು ಮಾಯಾವತಿ ಅಸ್ತ್ರವನ್ನು ಬಳಸಿರೋ ಜೆಡಿಎಸ್ ಗೆ
ಮಾಯಾವತಿ ಆಗಮನದಿಂದ ಪ್ಲಸ್ ಆಗುವ ಸಾಧ್ಯತೆ ಇದೆ.

ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರದಲ್ಲಿ 2013 ರ ಚುನಾವಣೆಯಲ್ಲಿ ಬಿಎಸ್ಪಿಯ ಮಹೇಶಣ್ಣ ಹತ್ತು ಸಾವಿರ ಮತಗಳಿಂದ ಸೋಲನ್ನಪ್ಪಿದ್ದರೂ ಬಿಜೆಪಿ ಜೆಡಿಎಸ್ ಅನ್ನು ಹಿಂದಿಕ್ಕೆ ಎರಡನೇ ಸ್ಥಾನ ಗಳಿಸಿದ್ದರು. ಇದು ಬಿಎಸ್ಪಿಗೆ ಇರುವ ಕ್ಯಾಡರ್ ಬೇಸ್ಡ್ ಮತಗಳನ್ನು ಸೂಚಿಸುತ್ತದೆ. ಮಯಾವತಿ ಆಗಮನದಿಂದ ಬಿಎಸ್ಪಿಯ ದಲಿತ ಮತ್ತು ಹಿಂದುಳಿದ ಮತಗಳು ಕ್ರೋಡೀಕರಣ ಆಗಲಿದ್ದು, ಬಿಎಸ್ಪಿ ಸ್ಪರ್ಧೆ ಮಾಡಿದ ಭಾಗದಲ್ಲಿ ಜೆಡಿಎಸ್ ನ ಒಕ್ಕಲಿಗ ಮತಗಳು, ಜೆಡಿಎಸ್ ಸ್ಪರ್ಧೆ ಮಾಡಿದ ಕ್ಷೇತ್ರಗಳಲ್ಲಿ ಬಿಎಸ್ಪಿಯ ಹಿಂದುಳಿದ ದಲಿತ ಮತಗಳು ಸಿಗಲಿದೆ. ಇದು ಜೆಡಿಎಸ್ ಬಿಎಸ್ಪಿ ಮೈತ್ರಿಗೆ ಲಾಭವಾಗಲಿದೆ.