ನೆಚ್ಚನ ನಾಯಕನ ಭಾವಚಿತ್ರಕ್ಕೆ ಕ್ಷೀರಾಭಿಷೇಕ!! ಖುಷಿಯಿಂದ ಸಂಭ್ರಮಿಸಿದ ಅಭಿಮಾನಿಗಳು

ರಾಜ್ಯದನೂತನ 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ ಹಿನ್ನಲೆಯಲ್ಲಿ, ಬಿಎಸ್ವೈಭಾವಚಿತ್ರಕ್ಕೆ ಕ್ಷೀರಭಿಷೇಕ ಮಾಡಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಕುಣೆಗಲ್ಬೈ ಪಾಸ್ಬಳಿ, ಕಾರ್ಯಕರ್ತರು ವಿಶೇಷ ಹಾಲಿನ ಅಭಿಷೇಕ ಮಾಡಿ ತಮ್ಮಪಕ್ಷದ ಮುಖ್ಯಮಂತ್ರಿಗೆ ಶುಭಾಶಯ ಕೋರಿದರು.

 

ಇನ್ನೂ ಇದೇ ವೇಳೆಯಲ್ಲಿ ಮುಖ್ಯಮತ್ರಿಯಾಗಿ ಅಧಿಕಾರ ಸ್ವೀಕರಿಸಿ ಮರುಕ್ಷಣವೇ ರೈತರ, ನೇಕಾರರ ಸಾಲಮನ್ನಾ ಮಾಡಿರುವುದು. ರಾಜ್ಯದ ಬಗೆಗೆ ನಮ್ಮ ನಾಯಕರಾದ ಯಡಿಯೂರಪ್ಪರಿಗೆ ಇರುವ ಕಳಕಳಿ ಹಾಗೂ ಜನಪರ ಆಡಳಿತದ ಮುನ್ಸೂಚನೆ ನೀಡಿದ್ದಾರೆ. ದೇಶದ ಪ್ರಧಾನಿ ನರೇಂದ್ರಮೋದಿ ಹಾದಿಯಲ್ಲಿ ಅಭಿವೃದ್ದಿ ಮಾಡಲಿದ್ದಾರೆ, ಜನದೇಶ ಸಂಪೂರ್ಣವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆಇಲ್ಲದಿದ್ದರು. ಈ ಎರಡು ಪಕ್ಷಗಳು ಮೈತ್ರಿಮಾಡಿರುವುದು ಅಪವಿತ್ರವಾದದ್ದು ಎಂದು ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕನ ಪರ ಭರ್ಜರಿ ಬ್ಯಾಟಿಂಗ್ಮಾಡಿ ಸಂಭ್ರಮಿಸಿದ್ದಾರೆ.

Avail Great Discounts on Amazon Today click here