ತಂದೆ ಪರ ಮತ ಯಾಚನೆಗೆ ಬಂದ ಪುತ್ರಿಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಕ್ಲಾಸ್ !! ಮನವೊಲಿಸಲು ಸಾಧ್ಯವಾಗದೆ ವಾಪಸ್ ಬಂದ ಗೌಡರ ಮಗಳು!!

ತಂದೆ ಪರ ಮತ ಯಾಚನೆಗೆ ಬಂದ ಶಾಸಕನ ಪುತ್ರಿಗೆ ಗ್ರಾಮಸ್ಥರೆಲ್ಲಾ ಸೇರಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದಶಾಸಕ ಸುರೇಶ್ ಗೌಡ ಪುತ್ರಿ  ಐಶ್ವರ್ಯ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ತೀವ್ರ ಕುತೂಹಲ ಕೆರಳಿಸಿರುವ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ತಂದೆ ಪರ ಐಶ್ವರ್ಯ ಸುರೇಶ್ ಗೌಡ ಭರ್ಜರಿ ಮತಯಾಚನೆ ನಡೆಸುತ್ತಿದ್ದಾರೆ.

ad


ಕಳೆದ ಸೋಮವಾರ ಸಂಜೆ ಗ್ರಾಮಾಂತರ ಕ್ಷೇತ್ರದ ಸೋರೆಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಪುರ್ಲುಗುಂಟೆಯಲ್ಲಿ ಮತಯಾಚನೆ ಮಾಡಲು ಬಂದ ವೇಳೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ತಂದೆ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಒದಗಿಸದೆ ಸೇಡಿನ ರಾಜಕೀಯ ಮಾಡಿದ್ದಾರೆ. ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ ಜನರು ಮೂರು ತಿಂಗಳ ಕಾಲ ಪರದಾಡಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮ್ಮ ತಂದೆ ಸುರೇಶ್ ಗೌಡ ಅವರು ಸಮಸ್ಯೆ ಆಲಿಸದೆ ನಿರ್ಲಕ್ಷ್ಯ ತೋರಿದ್ದಾರೆ, ಆದ್ರೆ ಇದೀಗ ನೀವು ಮತ ಕೇಳಲು ಬಂದಿದ್ದೀರಾ ಅಂತ ಬೆವರಿಳಿಸಿದ್ದಾರೆ.

ಈ ವೇಳೆ ಗ್ರಾಮದ ಜನರನ್ನು ಮನವೊಲಿಸಲು ಐಶ್ವರ್ಯ ಸಾಕಷ್ಟು ಪ್ರಯತ್ನ ನಡೆಸಿದ್ರು ಪ್ರಯೋಜನವಾಗಿಲ್ಲ,  ಪಟ್ಟು ಬಿಡದ ಊರಿನವರು, ಗ್ರಾಮದಲ್ಲಿ ಪ್ರಚಾರ ನಡೆಸಲು ಅವಕಾಶನೀಡದೆ ತಡೆದಿದ್ದಾರೆ. ಇದ್ರಿಂದ ಕುಪಿತಗೊಂಡ ಐಶ್ವರ್ಯ ಮೊಬೈಲ್ ನಲ್ಲಿ ಇಲ್ಲಿನ ದೃಶ್ಯಗಳನ್ನು ಚಿತ್ರಿಕರಿಸಲು ನಿಮಗೆ ಅನುಮತಿ ನೀಡಿದವರು ಯಾರು ಅಂತ ಜೋರು ಧ್ವನಿಯಲ್ಲಿ ಕಿರುಚಾಡಿ, ರಂಪಾಟ ಮಾಡಿದ್ದಾರೆ. ಆದ್ರೆ ಗ್ರಾಮಸ್ಥರು ಐಶ್ವರ್ಯ ರಂಪಾಟಕ್ಕೆ ಜಗ್ಗದೆ ಗ್ರಾಮದಿಂದ ವಾಪಸ್ ಕಳುಹಿಸಿದ್ದಾರೆ. ಕೊನೆಗೆ ವಿಧಿಯಿಲ್ಲದೆ ಐಶ್ವರ್ಯ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಬಂದಿದ್ದಾರೆ. ಇದೀಗ ಈ ದೃಶ್ಯಗಳು ವೈರಲ್ ಆಗುತ್ತಿದ್ದು, ಗ್ರಾಮಾಂತರ ಕ್ಷೇತ್ರದ ಜನರು ಈ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಸುತ್ತಿದ್ದಾರೆ