ನೀತಿಸಂಹಿತೆಯ ಹೊರತಾಗಿಯೂ ಗುಟ್ಟಾಗಿ ಬಾಡೂಟ ವಿತರಿಸಿದ ಶಾಸಕರು!! ಕುಡಿದು ತಿಂದು ತೂರಾಡಿದ ಮತದಾರ ಪ್ರಭುಗಳು!!

ಒಂದು ಕಡೆ ವಿಧಾನ ಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರ್ತಿದೆ.. ಇನ್ನೊಂದು ಕಡೆ ನೀತಿ ಸಂಹಿತೆ ಸೂಚಿತ ಅಭ್ಯರ್ಥಿಗಳು ಆರ್ಭಟಕ್ಕೆ ಕಡಿವಾಣ ಹಾಕುತ್ತಿದೆ. ಇವೆಲ್ಲದರ ಮದ್ಯೆ ಮತದಾರರ ಓಲೈಕೆಗೆ ಮಾಜಿ ಶಾಸಕರೊಬ್ಬರು ಕದ್ದು ಮುಚ್ಚಿ ಬಾಡೂಟ ಮಾಡಿಸಿರುವ ಘಟನೆ ಕೊಪ್ಪಳದಲ್ಲಿ ನೆಡೆದಿದೆ.

ಗಂಗಾವತಿಯ ತಾಲೂಕಿನ ಈಳಿಗನೂರು ಕ್ಯಾಂಪ್ ಒಂದರಲ್ಲಿ ಮತದಾರರಿಗೆ ಹೊಲದಲ್ಲಿ ಬಾಡೂಟ ಮಾಡಿಸಿದ್ದು ಇದೀಗ ಬೆಳಕಿಗೆ ಬಂದಿದೆ. ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ತಂಗಡಗಿ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೇರಿ ನಿನ್ನೆ ಭರ್ಜರಿ ಬಾಡೂಟವನ್ನು ಮಾಡಿಸಲಾಗಿದೆ.

ನೀತಿ ಸಂಹಿತೆ ಜಾರಿಯಲ್ಲಿರೋದ್ರಿಂದ ಗ್ರಾಮದ ಹೊರಬಲಯದಲ್ಲಿ ಗುಪ್ತವಾಗಿ ಬಾಡೂಟವನ್ನು ಏರ್ಪಡಿಸಲಾಗಿದೆ.. ಮೊದಲು ಸಭೆಗೆ ಅಂತಾ ಕರೆದು ಸಭೆಗೆ ಬಂದವರಿಗೆ ಊಟದ ಜೊತೆಗೆ ಎಣ್ಣೆಯನ್ನು ನೀಡಿದ್ದಾರೆ. ಒಟ್ನಲ್ಲಿ ನಿನ್ನೆ ಕ್ಯಾಂಪ್ ಜನತೆ ಎಲ್ಲಾ ಫುಲ್ ಎಣ್ಣೆ ಹೊಡೆದು ಭರ್ಜರಿ ಬಾಡೂಟ ಸವಿದಿದ್ದಾರೆ.. ಈ ಎಲ್ಲಾ ದೃಶ್ಯಗಳು ಮೊಬೈಲ್ ಕ್ಯಾಮರಾ ದಲ್ಲಿ ಸೆರೆಯಾಗಿದ್ದು.. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ..

Avail Great Discounts on Amazon Today click here