ಗರ್ಭಿಣಿ ಪತ್ನಿ ಬಿಟ್ಟು ಕರ್ತವ್ಯದ ಕರೆಗೆ ಓಗೊಟ್ಟ ಶಾಸಕ! ಸಾಮಾಜಿಕ ಜಾಲತಾಣದಲ್ಲಿ ಎಮ್​ಎಲ್​ಎ ಕಾರ್ಯಕ್ಕೆ ಶ್ಲಾಘನೆ!!

ಶಾಸಕರು, ಸಂಸದರು ತಮ್ಮ ಕರ್ತವ್ಯವನ್ನೇ ಮರೆತು ಬಿಡ್ತಾರೆ ಅನ್ನೋ ಆರೋಪಗಳ ಮಧ್ಯೆಯೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರಾಜ್ಯದ ಗಮನ ಸೆಳೆದಿದ್ದಾರೆ. ಕಾರಣ ಇಷ್ಟೇ ಹರೀಶ್ ಪೂಂಜಾ ಪತ್ನಿ ತಿಂಗಳು ತುಂಬಿದ ಗರ್ಭೀಣಿಯಾಗಿದ್ದರೂ ಸಹ ಹರೀಶ್ ಪೂಂಜಾ ತಮ್ಮ ಕರ್ತವ್ಯದಲ್ಲಿ ತೊಡಗಿಕೊಂಡಿದ್ದು, ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ.

ad

ಕರಾವಳಿಯಲ್ಲಿ ಕೆಲ ದಿನಗಳಿಂದ ಎಗ್ಗಿಲ್ಲದೇ ಗೋ ಹತ್ಯೆ ಹಾಗೂ ಗೋಕಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ಇದನ್ನು ತಡೆಯುವ ನಿಟ್ಟಿನಲ್ಲಿ ಹರೀಶ್ ಪೂಂಜಾ ತಮ್ಮ ತಿಂಗಳು ತುಂಬಿ ಹೆರಿಗೆಯ ಸಮೀಪದಲ್ಲಿದ್ದ ಹೆಂಡತಿಯನ್ನು ಒಂಟಿಯಾಗಿ ಬಿಟ್ಟು ಬೆಂಗಳೂರಿಗೆ ಬಂದಿದ್ದರು. ಅಷ್ಟೇ ಅಲ್ಲ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಗೋಹತ್ಯೆ ತಡೆಯುವಂತೆ ಮನವಿ ಸಹ ಸಲ್ಲಿಸಿದ್ದರು.

ಈ ಎಲ್ಲ ಕೆಲಸ ಮುಗಿಸಿ ಪೂಂಜಾ ತಮ್ಮ ಊರಿಗೆ ಹಿಂತಿರುಗುವಷ್ಟರಲ್ಲಿ ಪತ್ನಿ ಡೆಲಿವರಿಯಾಗಿದ್ದು, ಎರಡನೇ ಹೆರಿಗೆಯಲ್ಲಿ ಹರೀಶ್ ಪತ್ನಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಇದಲ್ಲದೇ ಊರಿಗೆ ಮರಳಿದ ಮೇಲೂ ಪೂಂಜಾ ಗೋಹತ್ಯೆ ಸೇರಿದಂತೆ ವಿವಿಧ ವಿಚಾರಗಳಿಗೆ ಜನರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಸಭೆ, ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.

ಹೀಗಾಗಿ ಪತ್ನಿ ತುಂಬು ಗರ್ಭಿಣಿ ಅಂತ ಗೊತ್ತಿದ್ರೂ ತನ್ನ ತಾಲೂಕಿನ ಅಭಿವೃದ್ಧಿಗೆ ಧಕ್ಕೆ ಬರದಂತೆ ಕಾರ್ಯ ನಿರ್ವಹಿಸಿದ ಶಾಸಕರ ಕಾರ್ಯವೈಖರಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಶಾಸಕರೇ ಹರೀಶ್ ಪೂಂಜಾ ನೋಡಿ ಕೆಲಸ ಕಲಿಯಿರಿ ಎಂದು ಇತರ ಶಾಸಕರನ್ನು ಎಚ್ಚರಿಸುವ ಕೆಲಸ ನಡೆದಿದೆ.