ಪೊಲೀಸ್ ಕಸ್ಟಡಿಗೆ ಕಂಪ್ಲಿ ಗಣೇಶ್.!! ಅರೆಸ್ಟಾ.? ಸರೆಂಡರಾ..??

ರಾಮನಗರ ತಾಲೂಕಿನ ಬಿಡದಿಯ ಈಗಲ್ ರೆಸಾರ್ಟಿನಲ್ಲಿ ಜನವರಿ 20 ರಂದು ಹೊಸಪೇಟೆ ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ್ ಹೊಡೆದಾಟದ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಬಿಡದಿ ಪೊಲೀಸರು ಶಾಸಕ ಜೆ.ಎನ್ ಗಣೇಶ್ ರನ್ನು ಬಂಧಿಸಿದ್ದಾರೆ.

 

ಶಾಸಕ ಆನಂದಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಕಂಪ್ಲಿ ಗಣೇಶ್ ವಿರುದ್ದ ಅರೆಸ್ಟ್ ವಾರೆಂಟ್ ಹೊರಬಿದ್ದಿತ್ತು. ಆದರೆ ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ಗಣೇಶ್ ರನ್ನು ಇಂದು ಬಿಡದಿ ಪೊಲೀಸರು ಬಂಧಿಸಿದ್ದಾರೆ.

ಬೆಳವಣಿಗೆಗಳ ಪ್ರಕಾರ ನಿನ್ನೆತಷ್ಟೇ ಗಣೇಶ್ ನಿರಿಕ್ಷಣಾ ಜಾಮೀನಿನ ಅರ್ಜಿಯನ್ನು ಹಿಂಪಡೆದಿದ್ದರು. ಹಾಗಿದ್ದಲ್ಲಿ ಗಣೇಶ್ ಸ್ವತಃ ತಾವಾಗಿಯೇ ಪೊಲೀಸರನ್ನು ಕರೆಸಿಕೊಂಡಿದ್ದಾರಾ ಎಂಬ ಉಹಾಪೋಹಗಳು ಹರಿದಾಡುತ್ತಿವೆ. ಗಣೇಶ್ ಅರೆಸ್ಟ್ ಹಿಂದೆ ಶುರುವಾಗಿದೆ ನೂರೆಂಟು ಪ್ರಶ್ನೆಗಳು ಉದ್ಭವವಾಗಿದ್ದು ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್ ಪಡೆದ ಮರುದಿನವೇ ಅರೆಸ್ಟ್ ಆದ ರಹಸ್ಯ ಏನು..?ರಮೇಶ್ ಜಾರಕಿಹೊಳಿ ಬಳ್ಳಾರಿ ಭೇಟಿ ಮರುದಿನವೇ ಗಣೇಶ್ ಪೊಲೀಸ್ ಕೈಗೆ ಸಿಕ್ಕಿದ್ಯಾಕೆ..? ಗಣೇಶ್ ಅವರಾಗಿಯೇ ಶರಣಾದ್ರಾ..? ಪೊಲೀಸರನ್ನ ತಾವಿದ್ದ ಸ್ಥಳಕ್ಕೆ ಕರೆಸಿಕೊಂಡ್ರಾ..? ಎಂಬಲ್ಲಾ ಪ್ರಶ್ನೆಗಳು ಕೇಳಿಬರುತ್ತಿವೆ.

ಕೇಂದ್ರ ವಲಯ ಐಜಿಪಿ ದಯಾನಂದ್​ ಶಾಸಕ ಜೆ.ಎನ್ ಗಣೇಶ್ ಬಂಧನ ಖಚಿತಪಡಿಸಿದ್ದಾರೆ. ಇಂದು ಸಂಜೆಯೇ ಬೆಂಗಳೂರಿಗೆ ಕರೆತರಲಾಗುವುದು ಹಾಗೂ ನಾಳೆ ಕೋರ್ಟ್​ಗೆ ಗಣೇಶ್ ಹಾಜರುಪಡಿಸುವುದಾಗಿ ಐಜಿಪಿ ಹೇಳಿದ್ದಾರೆ.