ಕಾಂಗ್ರೆಸ್ನವರು ತಮ್ಮ ನಾಲಿಗೆಯನ್ನು ನಿಯಂತ್ರಿಸಿಕೊಳ್ಳಲಿ – ಜಗ್ಗೇಶ್

ಇದು ಮೋದಿಯವರ ಸ್ಪಷ್ಟವಾದ ಚಿಂತನೆ, ಹೃದಯ ವೈಶಾಲ್ಯತೆ ಮತ್ತು ಅಭಿವೃದ್ಧಿ ಪರ ಚಿಂತನೆಗೆ ದಕ್ಕಿದ ಗೆಲುವು ಎಂದು ಬಿಜೆಪಿ ನಾಯಕ ಹಾಗೂ ಹಿರಿಯ ನಟ ಜಗ್ಗೇಶ್​ ಬಣ್ಣಿಸಿದ್ದಾರೆ. ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಜಗ್ಗೇಶ್​, ಕಳ್ಳನ ಮನಸ್ಸು ಹುಳ್ಳಗೆ ಎನ್ನುವ ಹಾಗೆ ಕಾಂಗ್ರೆಸ್​ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದೇ ಇವಿಎಂ ಮೇಲೆ ಆರೋಪ ವ್ಯಕ್ತಪಡಿಸುತ್ತಿದೆ. ಇದು ಕುಣಿಯಲು ಬಾರದವರು ಅಂಗಳ ಡೊಂಕು ಎಂದಂತಿದೆ ಎಂದು ಜಗ್ಗೇಶ್​ ಕಟುವಾಗಿ ಟೀಕಿಸಿದ್ದಾರೆ.

ಮೋದಿಯವರ ಈ ಮೋಡಿ ಕರ್ನಾಟಕದಲ್ಲೂ ನಡೆಯಲಿದೆ. ಕಾಂಗ್ರೆಸ್​ ಮುಕ್ತ ಕರ್ನಾಟಕ ಇಲ್ಲಿಯೂ ಆಗುತ್ತೆ. ಹಿಮಾಚಲ ಪ್ರದೇಶ ಮತ್ತು ಗುಜರಾತ ಗೆಲುವು ಮೋದಿಯವರ ಚಿಂತನೆಯಿಂದ ಜನರ ಮನ ಪರಿವರ್ತನೆಯಾಗುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದರು.

ಬಿಜೆಪಿ ನಾಯಕರು ನಾಲಿಗೆ ಹರಿಬಿಡುತ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್, ಮೊದಲು ಕಾಂಗ್ರೆಸ್​ನವರು ತಮ್ಮ ನಾಲಿಗೆಯನ್ನು ನಿಯಂತ್ರಿಸಲಿ. ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಎಂದವರು ಕಾಂಗ್ರೆಸ್ಸಿಗರು. ಧರ್ಮವನ್ನು ಎತ್ತಿ ಕಟ್ಟುತ್ತಿರುವುದು ಕಾಂಗ್ರೆಸ್​ ಎಂದು ಜಗ್ಗೇಶ್ಆರೋಪಿಸಿದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here