ದುರ್ಯೋಧನನಾದ ಶಾಸಕ- ಏನಿದು ಸ್ಟೋರಿ? ನೀವೆ ನೋಡಿ.!!

ಚುನಾವಣೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ರಾಜಕಾರಣಿಗಳು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರ ಸುತ್ತುತ್ತಾರೆ.

ಬೆಂಬಲಿಗರ ಸಭೆ ಮಾಡಿ, ಸೀರೆ-ಹಣ ಹಂಚಿ ಮತಬೇಟೆಗೆ ಸಿದ್ಧತೆ ಮಾಡ್ಕೊತಾರೆ. ಆದರೆ ಇಲ್ಲೊಬ್ಬರು ಶಾಸಕರು ಮಾತ್ರ ಚುನಾವಣೆ ಸಿದ್ಧತೆ ಬಿಟ್ಟು ನಟನೆಯಲ್ಲಿ ತೊಡಗಿದ್ದು ಜನರಿಗೆ ಅಚ್ಚರಿ ಮೂಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎಸ್.ತಿಪ್ಪೇಸ್ವಾಮಿ ಬಿಡುವಿಲ್ಲದ ಕಾರ್ಯಕ್ರಮದ ನಡುವೆ ನಟನೆಯಲ್ಲಿ ತೊಡಗಿದ್ದಾರೆ.

ಕಳೆದ 40 ವರ್ಷದಿಂದಲೂ ರಂಗಭೂಮಿಯ ನಾಟಕಗಳಲ್ಲಿ ಅಭಿನಯಿಸುತ್ತಿರುವ ತಿಪ್ಪೇಸ್ವಾಮಿ ಇಂದಿಗೂ ಅವಕಾಶ ಸಿಕ್ಕಾಗಲೆಲ್ಲ ತಮ್ಮ ನಟನಾ ಚಾತುರ್ಯವನ್ನು ತೋರುತ್ತಿದ್ದಾರೆ. ಇತ್ತೀಚಿಗೆ ಮೊಳಕಾಲ್ಮೂರು ತಾಲ್ಲೂಕಿನ ಬಿಜಿ ಕೆರೆಯಲ್ಲಿ ಆಯೋಜಿಸಿದ್ದ ಕುರುಕ್ಷೇತ್ರ ನಾಟಕದಲ್ಲಿ ಅಭಿನಯಿಸಿದ ಅವರು​​ ದುರ್ಯೋದನನ ಪಾತ್ರದಲ್ಲಿ ಮಿಂಚಿದ್ದಾರೆ.ಶಾಸಕರ ದುರ್ಯೋಧನ ಪಾತ್ರ ಕಂಡು ನೆರೆದವರು ಸಖತ್​ ಖುಷಿ ಪಟ್ಟಿದ್ದು, ಭರ್ಜರಿ ಡೈಲಾಗಗಳ ಮೂಲಕ ನೆರೆದ ಜನರನ್ನು ರಂಜಿಸಿದ್ರು.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here