ಕೋತಿಗೆ ಹೆಂಡ ಕುಡಿಸಿದಾಗ !!! Viral Video

ಯಾರಾದ್ರೂ ವ್ಯತಿರಿಕ್ತವಾಗಿ ವರ್ತಿಸಿದರೆ ” ಹೆಂಡ ಕುಡಿದ ಕೋತಿ ತರಹ ಆಡ್ಬೇಡ” ಅಂತ ಹೇಳುವುದು ವಾಡಿಕೆ. ಆದ್ರೆ ಹುಬ್ಬಳ್ಳಿಯಲ್ಲಿ ನಡೆದಿರುವುದೇ ಬೇರೆ.

ನಿಜ.  ಇಲ್ಲೊಂದು ತಂಡ  ಹುಬ್ಬಳ್ಳಿಯ ಉಣಕಲ್ ನ ಪ್ರೀಮಿಯಮ್ ಬಾರ್ ನಲ್ಲಿ ಅಂಗಡಿಯ ಪಕ್ಕದಲ್ಲಿ ಕುಳಿತ ಮಂಗನಿಗೆ ಹೆಂಡ ಕುಡಿಸಿ ಮೊಬೈಲ್ ನಲ್ಲಿ ಶೂಟ್ ಮಾಡಿ ಹಂಚಿದ್ದಾರೆ. ಮೂಕ ಪ್ರಾಣಿ ಮಂಗನಿಗೆ ಹೆಂಡ ಕುಡಿಸಿ ಕಿಡಿಗೇಡಿಗಳು ಮಜ ತೆಗೆದುಗೊಂಡಿದ್ದಾರೆ. ಮದ್ಯದ ಅಮಲಿನಲ್ಲಿ ಮಂಗ ವಿಲವಿಲ ಹೊರಾಳಾಡುತ್ತಿದೆ. ಮೂಕ ಪ್ರಾಣಿಗೆ ತೊಂದರೆ ಕೊಟ್ಟಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.