ತೆರೆದ ಬಾವಿಗೆ ಬಿದ್ದ ಮಂಗಗಳು-ಕೋತಿ ರಕ್ಷಣೆ ಹೇಗಾಯ್ತು ಗೊತ್ತಾ?

ರಾಜ್ಯದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಿದ್ದು, ರಣಬಿಸಿಲಿಗೆ ಜನರು ಕಂಗಾಲಾಗಿ ಹೋಗುತ್ತಿದ್ದಾರೆ. ಇನ್ನು ಪ್ರಾಣಿ-ಪಕ್ಷಿ ಹಾಗೂ ಗಿಡಮರಗಳ ಗೋಳು ಕೇಳುವವರೇ ಇಲ್ಲ. ಹೀಗೆ ಬಿಸಿಲ ಬೇಗೆಗೆ ನೀರನ್ನರಸಿ ಬಂದ ಮಂಗಗಳು ಬಾವಿಯಲ್ಲಿ ಬಿದ್ದು ಪ್ರಾಣ ರಕ್ಷಿಸಿಕೊಳ್ಳಲು ಹರಸಾಹಸ ನಡೆಸಿದ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತಲಗೇರಿಯಲ್ಲಿ ನಡೆದಿದೆ. ಗ್ರಾಮದ ಕೃಷಿಕ ವಿ.ಜಿ ಹೆಗಡೆ ಎಂಬುವವರು ತಮ್ಮ ತೋಟದಲ್ಲಿ ಹೊಸದಾಗಿ ಬಾವಿ ತೋಡಿಸಿದ್ದರು .ಬಿಸಿಲ ಬೇಗೆಯಿಂದ ದಾಹ ಗೊಂಡಿದ್ದ ಒಂದೆರೆಡು ಮಂಗಗಳು ದಾಹ ನೀಗಿಸಿಕೊಳ್ಳಲು ಬಾವಿಗೆ ಇಳಿದು ನೀರು ಕುಡಿಯುತ್ತಿರುವ ದೃಶ್ಯ ಕಂಡುಬಂದಿದೆ. ಆದರೇ ಬಾವಿಗಿಳಿದ ಮಂಗಗಳಿಗೆ ಮೇಲೆ ಬರಲು ಸಾಧ್ಯವಾಗದೇ ಕಿರುಚಲು ಆರಂಭಿಸಿದೆ. ನೀರು ಕುಡಿದ ಮೇಲೆ ಬಾವಿಯಿಂದ ಮೇಲೆ ಬರಲಾಗದೇ ಕೋತಿಗಳು ಅರಚಲು ಶುರುಮಾಡಿದಾಗ ಅವುಗಳ ರಕ್ಷಣೆಗೆ ಗುಂಪಿನ ಇತರ ಮಂಗಗಳು ಬಾವಿಗೆ ಹಾರಿದವು,ಆದರೇ ಅವುಗಳಿಗೂ ಮೇಲೆ ಬರಲು ಸಾಧ್ಯವಾಗದೇ ಒದ್ದಾಡ ತೊಡಗಿದವು .ಇನ್ನು ಕೆಲವು ಘಂಟೆ ಗಳ ನಂತರ ಮಂಗಗಳ ಈ ದಯನೀಯ ಸ್ಥಿತಿಯನ್ನು ಗಮನಿಸಿದ ಜಮೀನಿನ ಮಾಲೀಕ ವಿ.ಜಿ. ಹೆಗಡೆಯವರು ಬಾವಿಗೆ ಹಗ್ಗ ಹಾಗೂ ಕೋಲನ್ನು ಇಳಿಬಿಟ್ಟು ಮಂಗಗಳನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.