ಮೋದಿಗೆ ಮೂಡಿಸ್ ನಿಂದ ಶಹಬ್ಬಾಸಗಿರಿ!!

ಭಾರತದ ಆರ್ಥಿಕ ಸ್ಥಿರತೆ ರೇಟಿಂಗ್ BAA-3 ರಿಂದ BAA-2 ಗೇ ಏರಿಕೆ.

ಹೌದು. ಭಾರತದ ಆರ್ಥಿಕತೆ ಈಗ ಸಧೃಡವಾಗಿ ಸ್ಥಿರವಾಗಿದೆ ಅಂತ ವರದಿ ನೀಡಿದ್ದು ಮೂಡಿಸ್ ಇನ್​ವೆಸ್ಟರ್ ಸರ್ವೀಸಸ್ ಎಂಬ ಸಂಸ್ಥೆ. ಈ ಸಂಸ್ಥೆ 1909ರಲ್ಲಿ ಸ್ಥಾಪಿಸಲ್ಪಟ್ಟಿತು. ಜಾನ್ ಮೂಡಿ ಇದರ ಸಂಸ್ಥಾಪಕ. ಷೇರು, ಬಾಂಡ್ ಮತ್ತು ಬಾಂಡ್ ರೇಟಿಂಗ್ ಕುರಿತ ಸಾಂಖ್ಯಿಕ ದತ್ತಾಂಶಗಳನ್ನು ದಾಖಲಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿತ್ತು.

ವಿಶ್ವದ ಹಲವು ರಾಷ್ಟ್ರಗಳಿಗೆ ರೇಟಿಂಗ್ ನೀಡುವ ಈ ಸಂಸ್ಥೆ ಭಾರತಕ್ಕೆ ಅದರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ BAA-2 ರೇಟಿಂಗ್ ನೀಡಿದೆ.  ನೋಟು ಅಮಾನ್ಯೀಕರಣ, GST ಯಂತ ಮಹತ್ವದ ನಿರ್ಧಾರದಿಂದ ದೇಶದ ಆರ್ಥಿಕತೆ ಕುಸಿದಿದೆ ಅಂತ ವಿಪಕ್ಷಗಳು ಪ್ರಧಾನಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದವು. ಈಗ ಈ ವರದಿ ವಿಪಕ್ಷಗಳ ಬಾಯನ್ನು ಮುಚ್ಚಿಸುವುದರ ಜೊತೆಗೆ ದೇಶಕ್ಕೆ ಇನ್ನಷ್ಟು ಬಂಡವಾಳ ಹರಿದು ಬರಲು ಸಹಕಾರಿಯಾಗಿದೆ. ಮೂಡಿಸ್ ಸಂಸ್ಥೆಯು ಜಿಡಿಪಿ ಬೆಳವಣಿಗೆ ಜತೆಗೆ ನೋಟು ಅಮಾನ್ಯೀಕರಣ, ಜಿಎಸ್​ಟಿ ಮುಂತಾದ ಹೆಜ್ಜೆಗಳು ಭಾರತದ ಆರ್ಥಿಕ ಅಭಿವೃದ್ಧಿಗೆ ಕಾರಣ ಎಂಬ ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿದೆ.

ನರೇಂದ್ರ ಮೋದಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಜಾರಿಗೊಳಿಸಿದ ಆರ್ಥಿಕ ಕಾರ್ಯಕ್ರಮಗಳು, ಸಾಂಸ್ಥಿಕ ಅಥವಾ ವ್ಯವಸ್ಥೆಯ ಸುಧಾರಣಾ ಕ್ರಮ, ಅವುಗಳ ಪರಿಣಾಮಗಳನ್ನು ಗಮನಿಸಿ ಮೂಡಿಸ್ ಭಾರತದ ಕ್ರೆಡಿಟ್ ರೇಟಿಂಗ್ ಪರಿಷ್ಕರಿಸಿದೆ. ಇದರೊಂದಿಗೆ ಭಾರತದ ರೇಟಿಂಗನ್ನು ಧನಾತ್ಮಕ ದಿಂದ ಸ್ಥಿರತೆ ಕಡೆಗೆ ಸಾಗಿದಂತಾಗಿದೆ.

ಷೇರುಪೇಟೆಯಲ್ಲಿ ಗೂಳಿಯ ಅಬ್ಬರ

ಮೂಡಿಸ್ ರೇಟಿಂಗ್ ಹೊರಬಂದಂತೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್(ಬಿಎಸ್​ಇ) ಸೂಚ್ಯಂಕ 236 ಅಂಶ ಏರಿಕೆಯಾಗಿ ದಿನದ ವಹಿವಾಟನ್ನು 33,342.80ಯಲ್ಲಿ ಮುಕ್ತಾಯಗೊಳಿಸಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್(ಎನ್​ಎಸ್​ಇ) 68.85 ಅಂಶ ಹೆಚ್ಚಳದೊಂದಿಗೆ 10,280ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇದು ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

1 ಕಾಮೆಂಟ್

ಪ್ರತ್ಯುತ್ತರ ನೀಡಿ

Please enter your comment!
Please enter your name here