ದೊಡ್ಡಬಳ್ಳಾಪುರದಲ್ಲಿ ಮೋಸ್ಟ್​ ವಾಂಟೆಡ್​ ಟೆರರಿಸ್ಟ್​ ಬಂಧನ! ಮಸೀದಿಯಲ್ಲಿ ಅಡಗಿದ್ದ ಹಬೀಬ್​ನನ್ನು ವಶಕ್ಕೆ ಪಡೆದ NIA!!

ರಾಜ್ಯದ ಮೇಲೆ ಉಗ್ರರ ಕಣ್ಣು ಬಿದ್ದಿದೆ ಎಂಬ ಕೂಗಿನ ಬೆನ್ನಲ್ಲೇ ರಾಜ್ಯ ರಾಜಧಾನಿಯ ಕೂಗಳತೆಯಲ್ಲೇ ಅಡಗಿ ಕೂತಿದ್ದ ಉಗ್ರನೊಬ್ಬ ಎನ್​ಐಎ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ದೊಡ್ಡಬಳ್ಳಾಪುರದ ಚಿಕ್ಕಪೇಟೆಯಲ್ಲಿ ಮೋಸ್ಟ್ ವಾಂಟೆಡ್ ಟೆರರಿಸ್ಟ್​ ಹಬೀಬ್​​ನನ್ನು ಬಂಧಿಸಲಾಗಿದೆ.
ಎನ್​ಎಂಬಿ ಉಗ್ರ ಸಂಘಟನೆಯ ಶಂಕಿತ ಉಗ್ರ ಹಬೀಬ್ ನನ್ನು ದೊಡ್ಡಬಳ್ಳಾಪುರದ ಮಸೀದಿಯೊಂದರಲ್ಲಿ ಬಂಧಿಸಲಾಗಿದ್ದು, ಕೋಲ್ಕತ್ತಾದ ಎನ್​ಐಎ ತಂಡ ಕಾರ್ಯಾಚರಣೆ ನಡೆಸಿದೆ.

ad


2014 ರಲ್ಲಿ ಕೋಲ್ಕತ್ತಾದ ಬುಧ್ರ್ವಾನ್ ಸ್ಪೋಟ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಹಬಿ, ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕೋಲ್ಕತ್ತಾದಲ್ಲಿ 2014 ರಲ್ಲಿ ನಡೆದಿದ್ದ ಬುದ್ರ್ವಾನ್ ಸ್ಪೋಟದಲ್ಲಿ ಅಪಾರ ಪ್ರಮಾಣದ ಜೀವಹಾನಿ ಕೂಡ ಉಂಟಾಗಿತ್ತು.


ಮಸೀದಿಯಲ್ಲಿ ಹಬಿಯನ್ನು ಬಂಧಿಸಿದ ಕೋಲ್ಕತ್ತಾ ಪೊಲೀಸರು ಬೆಂಗಳೂರಿನ ಎನ್​ಐಎ ನ್ಯಾಯಾಲಯಕ್ಕೆ ಹಾಜರುಪಡಿಸಿ ಟ್ರಾನ್ಸಿಟ್​ ವಾರೆಂಟ್​ ಮೂಲಕ ಕೋಲ್ಕತ್ತಾಗೆ ಕರೆದೊಯ್ದಿದ್ದಾರೆ. ಇನ್ನು 2018 ರಲ್ಲಿ ಬಂಧನಕ್ಕೊಳಗಾಗಿದ್ದ ಕೌಸರ್ ನೀಡಿದ ಮಾಹಿತಿ ಆಧರಿಸಿ ಹಬೀಬ್​​ನನ್ನು ಬಂಧಿಸಲಾಗಿದೆ.


ಈ ಬಂಧನದಿಂದ ಕರ್ನಾಟಕದಲ್ಲಿ ಸೆರೆಸಿಕ್ಕ ಉಗ್ರರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದ್ದು, ಕರ್ನಾಟಕ ಉಗ್ರರ ಅಡಗುತಾಣವಾಗಿ ಬದಲಾಗ್ತಾ ಇದ್ಯಾ ಅನ್ನೋ ಶಂಕೆ ವ್ಯಕ್ತವಾಗಿದೆ.