ಮೌಲ್ವಿ ತಲೆ ಕಡಿದರೆ ೧೦ ಲಕ್ಷ ಕೊಡ್ತಾರಂತೆ – ಕೊಡ್ತೇನಂತ ಹೇಳಿದ್ಯಾರು? ನೀವೇ ಓದಿ..

ಮೌಲ್ವಿ ತಲೆ ಕಡಿದರೆ ೧೦ ಲಕ್ಷ ಕೊಡ್ತಾರಂತೆ

ಹುಬ್ಬಳ್ಳಿಯನ್ನು ಮೌಲ್ವಿಯೊಬ್ಬರು ಪಾಕಿಸ್ತಾನ ಎಂದು ಕರೆದ ಪ್ರಕರಣ ಸಧ್ಯಕ್ಕೆ ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ. ನಿನ್ನೆ ಹುಬ್ಬಳ್ಳಿಯ ಗಣೇಶ್ ಪೇಟೆಯಲ್ಲಿ ನಡೆದ ಈದ್ ಮಿಲಾದ್ ಹಬ್ಬದ ವೇಳೆ ಗಣೇಶ ಪೇಟೆಯ ಮಜೀದ ಮುತವಲಿ ಅಬ್ದುಲ್ ಹಮೀದ್ ಖೈರಾತಿ ಎನ್ನುವ ಮೌಲ್ವಿ ಎನ್ನುವವರು ಗಣೇಶ್ ಪೇಟೆ ನನಗೆ ಪಾಕಿಸ್ತಾನದ ಹಾಗೇ ಕಾಣುತ್ತಿದೆ, ಪಾಕಿಸ್ತಾನಕ್ಕೆ ಹೋಗಿ ನೋಡುವ ಅವಶ್ಯಕತೆ ಇಲ್ಲ ಎಂದಿದ್ದರು. ಈ ಹೇಳಿಕೆ ಸಾಕಷ್ಟು ವಿವಾದ ಹಾಗೂ ಚರ್ಚೆಗೆ ಕಾರಣವಾಗಿತ್ತು.

ಈಗಾಗಲೇ ಈ ಬಗ್ಗೆ ಹುಬ್ಬಳ್ಳಿಯ ಶಹರ್ ಪೊಲೀಸ್ ಠಾಣೆಯಲ್ಲಿ ಮೌಲ್ವಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಮೌಲ್ವಿ ತಲೆಗೆ 10 ಲಕ್ಷ ರೂಪಾಯಿ ಬೆಲೆ ನಿಗದಿಯಾಗಿದ್ದು, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರೊಬ್ಬರು ಬೆಲೆ ನಿಗದಿ ಪಡಿಸಿ ಹೊಸ ವಿವಾದಕ್ಕೆ ಮುನ್ನುಡಿ ಬರೆದಿದ್ದಾರೆ.
ಬಾಗಲಕೋಟೆಯಲ್ಲಿ ಸಂಸದ ಪ್ರತಾಪಸಿಂಹ ಬಂಧನ ಖಂಡಿಸಿ ಆಯೋಜಿಸಲಾಗಿದ್ದ ಬಿಜೆಪಿ ಪ್ರೊಟೆಸ್ಟ್ ವೇಳೆ ಮಾತನಾಡಿದ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಬಸವರಾಜ ಯಂಕಂಚಿ ಹುಬ್ಬಳ್ಳಿಯನ್ನು ಪಾಕಿಸ್ತಾನವೆಂದ ಮೌಲ್ವಿಯ ತಲೆ ಕಡಿದವರಿಗೆ ಹತ್ತು ಲಕ್ಷ ರೂಪಾಯಿ ನೀಡಲಾಗುವುದು ಎಂದಿದ್ದಾರೆ.

1 ಕಾಮೆಂಟ್

Comments are closed.