ಸ್ವಪಕ್ಷದವರನ್ನೇ ಮುಳುಗಿಸುವ ವಿಷಯವಾಗಿ ಸಂಸದ ಮುನಿಯಪ್ಪ ರಹಸ್ಯ ಸಭೆಯಲ್ಲಿ ಆಡಿದ ಮಾತುಗಳಿವು.!! ಇವರ ಗೇಮ್ ಪ್ಲಾನ್ ಗೆ ಬಲಿಯಾದ್ರಾ ಕೊತ್ತೂರು ಮಂಜುನಾಥ್

ಮುಳಬಾಗಿಲು ಶಾಸಕ ಮಂಜುನಾಥ್ ಹಾಗು ಸಚಿವ ರಮೇಶ್‍ಕುಮಾರ್ ವಿರುದ್ದ ಸಂಸದ ಮುನಿಯಪ್ಪ ಆಡಿರುವ ಮಾತಿನ ವಿಡಿಯೋ ಸಿಕ್ಕಾ ಪಟ್ಟೆ ವೈರಲ್ ಆಗಿದೆ, ನೆನ್ನೆಯಷ್ಟೆ ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣ ಪತ್ರ ತಿರಸ್ಕತವಾಗಿದ್ದು, ಈ ವಿಚಾರ ಮೊದಲೇ ಗೊತ್ತಿದ್ದೇ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದು ಎಂದು ಮುನಿಯಪ್ಪ ಸಭೆಯೊಂದರಲ್ಲಿ ಬೆಂಬಲಿಗರಿಗೆ ತಿಳಿಸಿದ್ದಾರೆ, ಕೋಲಾರ ನಗರದ ದಲಿತ ಮುಖಂಡ ಸಿಎಂ ಮುನಿಯಪ್ಪ ಅವ್ರ ನಿವಾಸದಲ್ಲಿ ಕೆಎಚ್ ಮುನಿಯಪ್ಪ ತಮ್ಮ ಬೆಂಬಲಿಗರೊಂದಿಗೆ ಮಾತನಾಡಿರುವ 11 ನಿಮಿಷದ ವಿಡಿಯೋ ಕೋಲಾರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ad


ಹೌದು ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್‍ಗೆ ಜಾತಿ ಪ್ರಮಾಣ ಪತ್ರ ಸಿಗಲ್ಲ ಎಂದು ಗೊತ್ತಿದ್ದೇ ಟಿಕೆಟ್ ಕೊಟ್ಟಿದ್ದೀವೆ ಅವನು ಏನು ಮಾಡಿದ್ರು ಇನ್ನೆರಡೇ ದಿನ, ನಮ್ಮ ಮೀಸಲಾತಿ ಬೇರೆಯವ್ರು ತೊಗೋಳುದು ಇಷ್ಟವಿಲ್ಲ ಎಂದು ಮುನಿಯಪ್ಪ ವಿಡಿಯೋದಲ್ಲಿ ತಮ್ಮ ಪಕ್ಷದ ಶಾಸಕನ ವಿರುದ್ದ ಮಾತು ಆಡಿದ್ದಾರೆ.

ಇನ್ನು ರಮೇಶ್‍ಕುಮಾರ್ ಸ್ವತಃ ಶಾಸಕ ಕೊತ್ತೂರು ಮಂಜುನಾಥ್ ಪರವಾಗಿ ನಿಂತಿದ್ದು ನಾನು ಏನೂ ಮಾತನಾಡದೆ ಸುಮ್ಮನಿದ್ದೀನಿ, ಜಾತಿ ಪ್ರಮಾಣ ಪತ್ರದ ಕ್ಲೈಮ್ಯಾಕ್ಸ್ ಮೊದಲೇ ಗೊತ್ತಿದ್ದು, ನನ್ನ ಎರಡನೇ ಮಗಳನ್ನ ಮುಳಬಾಗಿಲಲ್ಲಿ ನಾಮಿನೇಷನ್ ಹಾಕ್ಸಿದ್ದೇನೆ ಎಂದು ಮುನಿಯಪ್ಪ ತಿಳಿಸಿದ್ದಾರೆ, ಕೊನೆಯದಾಗಿ ನೀವೇ ವರ್ತೂರು ಪ್ರಕಾಶ್‍ರನ್ನ ಗೆಲ್ಲಿಸಿದ್ರಿ ಎಂದು ಮುಖಂಡರು ಹೇಳಿದ್ರು

ಮುನಿಯಪ್ಪ ಮಾತ್ರ ತಲೆ ಆಡಿಸದೆ, ಮಾತಿಗೆ ವಿರೋದ ಮಾಡದಿರುವುದು ಭಾರೀ ಸಂಚಲನ ಸೃಷ್ಟಿಸಿದೆ, ಸಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು , ಮುನಿಯಪ್ಪ ಗೇಮ್ ಪ್ಲಾನ್‍ಗೆ ಕೊತ್ತೂರು ಮಂಜುನಾಥ್ ಬಲಿಯಾಗಿದ್ದಾರೆ ಎಂದು ಕಾರ್ಯಕರ್ತರು ಕಾಮೆಂಟ್ ಮಾಡ್ತಿದ್ದಾರೆ,